ಕ್ರಿಕೆಟ್ : ಆಲ್ರೌಂಡರ್ ಶೌಯಿಬ್ ಮಲಿಕ್ ಕ್ರಿಕೆಟ್ ವಿದಾಯ

0
12
loading...

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್​ರೌಂಡರ್​ ಆಟಗಾರ ಶೋಯಬ್​ ಮಲ್ಲಿಕ್​ ತಮ್ಮ ಕ್ರಿಕೆಟ್​ ಜೀವನದ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ.
ಅಂತಾ​ರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳಲು ಶೋಯಬ್​ ಮಲ್ಲಿಕ್​ ನಿರ್ಧರಿಸಿದ್ದಾರೆ. 2019 ವರ್ಲ್ಡ್​ಕಪ್​ ನನ್ನ ಲಾಸ್ಟ್​ ಇವೆಂಟ್​. ವರ್ಲ್ಡ್​ಕಪ್​ ಬಳಿಕ ಅಂತಾ​ರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳಲು ನಿರ್ಧಾರ ಕೈಗೊಂಡಿದ್ದೇನೆ. ಇನ್ನು ಚುಟುಕು ಪಂದ್ಯಗಳಲ್ಲಿ ನಾನು ಫಿಟ್​ ಆಗಿದ್ದು, ಅದರಲ್ಲಿ ಮುಂದುವರೆಯುತ್ತೇನೆ ಎಂದು ಶೋಯಬ್​ ಹೇಳಿದ್ದಾರೆ.
ಶೋಯಬ್​ ಮಲ್ಲಿಕ್​ ಇಲ್ಲಿಯವರೆಗೆ 261 ಏಕದಿನ ಪಂದ್ಯಗಳನ್ನಾಡಿದ್ದು, 9 ಶತಕಗಳು ಮತ್ತು 41 ಅರ್ಧಶತಕಗಳ ನೆರವಿನಿಂದ 6975 ರನ್​ಗಳನ್ನು ಕಲೆ ಹಾಕಿದ್ದಾರೆ.

loading...