ಕ್ರಿಕೆಟ್: ಐರ್ಲೆಂಡ್ ವಿರುದ್ಧ ಭಾರತಕ್ಕೆ ಜಯ

0
15
loading...

ಡಬ್ಲಿನ್​(ಐರ್ಲೆಂಡ್​):ಟೀಂ ಇಂಡಿಯಾ ಕ್ರಿಕೆಟ್​ ಶಿಶು ಐರ್ಲೆಂಡ್​ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 76ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕರಾದ ಧವನ್ ಹಾಗೂ ರೋಹಿತ್ ಮೊದಲ ವಿಕೆಟ್ ಗೆ ೧೬೦ ರನ್ ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.ರೋಹಿತ್ ಶತಕದಂಚಿನಲ್ಲಿ(೯೭) ಎಡವಿದರೆ. ರೋಹಿತ್ ೭೪ರನ್ ಮಾಡಿದರು. ರೈನಾ ,ಧೋನಿ, ನಾಯಕ ಕೊಹ್ಲಿ, ಪಾಂಡ್ಯಾ ಬ್ಯಾಟಿಂಗ್ ನಲ್ಲಿ ಎಡವಿದರು. ನಾಯಕ ಕೊಹ್ಲಿ ಶೂನ್ಯ ಸಂಪದಾನೆ ಮಾಡಿ ಫೆವಲಿನ್ ಸೇರಿಕೊಂಡರು.
೨೦ ಓವರ್ ಗಳಲ್ಲಿ ಭಾರತ ೫ ವಿಕೆಟ್ ಕಳೆದುಕೊಂಡು ೨೦೮ ರನ್ ಮಾಡಿತು.
ಇದಕ್ಕೂತ್ತರವಾಗಿ ಕ್ರಿಕೆಟಗ ಶಿಶು ಐರ್ಲೆಂಡ್ ಆರಂಭಿಕ ಆಘಾತ ಅನುಭವಿಸಿ ಕೇವಲ ೧೩೨ ರನ್ ಗಳಿಸಲು ಮಾತ್ರ ಶಕ್ತವಾಯಿತು.ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ಮುನ್ನಡೆ ಸಾಧಿಸಿದೆ.
ಭಾರತದ ಪರ ಕುಲ್ದೀಪ್ ೪ ವಿಕೆಟ್ ಪಡೆದರೆ ಚಹಲ್ ೩ ವಿಕೆಟ್ ಪಡೆದರು.ಬುಮ್ರಾ ಎರಡು ವಿಕೆಟ್ ಪಡೆದು ಮಿಂಚಿದರು.

loading...