ಕ್ಷೇತ್ರದ ಶಾಲಾ ಸಮಸ್ಯೆ ಆಲಿಸಿದ ಶಾಸಕ ಸತೀಶ ಜಾರಕಿಹೊಳಿ

0
52
  • ಕನ್ನಡಮ್ಮ ಸುದ್ದಿ- ಬೆಳಗಾವಿ: ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಸರಕಿಹೊಳಿಯವರು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಶಾಲಾ ಸಮಸ್ಯೆ ಗಳನ್ನು ಆಲಿಸಿದರು.
loading...

ಮಂಗಳವಾರದಂದು ನಗರದ ಪಶು ಸಂಗೋಪನೆ ಇಲಾಖೆಯ ಕಟ್ಟಡದಲ್ಲಿ ನಡೆದ ಎಸ್ಡಿಎಂಸಿ ಶಾಲೆಯ ಕುಂದು ಕೊರತೆ ಸಭೆಯ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಇದೇ ವೇಳೆ ಶಾಲಾ‌ ಶಿಕ್ಷಕರು ತಮ್ಮ ಶಾಲೆಯಲ್ಲಿ ಅನುಭವಿಸುತ್ತಿರುವ ಕಟ್ಟಡ, ಶೌಚಾಲಯ, ನೀರು, ಶಾಲಾ ಆವರಣದ ಗೊಡೆ, ಕಂಪ್ಯೂಟರ,ಕುಡಿಯುವ ನೀರು ಸೇರಿದಂತೆ ಭೌತಿಕ ಕೊರತೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಅವುಗಳನ್ನು ಪರಿಹರಿಸಬೇಕೆಂದು ಶಿಕ್ಷಕರು ಶಾಸಕ ಸತೀಶ ಜಾರಕಿಹೊಳಿಯವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ.ಉಪಾಧ್ಯಕ್ಷ ಅರುಣ ಕಟಾಂಬಳೆ, ಎಸ್ ಡಿ ಎಂಸಿ ಅಧ್ಯಕ್ಷರು,ಉಪಾಧ್ಯಕ್ಷ ಸೇರಿದಂತೆ ಶಿಕ್ಷಕರು ಹಾಜರಿದ್ದರು.

loading...