ಗಿನ್ನಿಸ್ ವರ್ಲ್ಡ್ ರೆಕಾರ್ಡನಲ್ಲಿ ಬೆಳಗಾವಿ ಯುವಕನ ಸಾಧನೆ

0
28
loading...

ಬೆಳಗಾವಿ ರೋಲರ ಸ್ಕೇಟಿಂಗ್ ಅಕಾಡೆಮಿಯ ಅಭಿಷೇಕ್ ನವಲೇ ಈತ ವೇಗದ 100ಮೀಟರ್ ಇನಲೈನ್ ಸ್ಕೆಟ್ 16.20 ಸೆಕಂಡಗಳಲ್ಲಿ ಪೂರೈಸಿ ಹೊಸ ದಾಖಲೆ ನಿರ್ಮಿಸಿದ್ದಾನೆ ಆರ್.ಎನ್. ಶೆಟ್ಟಿ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಒಂದನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಈತನು ಮಧ್ಯಮ ವರ್ಗದವನಾಗಿದ್ದು ಈತನ ತಂದೆ ಕೆಎಸಆರಟಿಸಿ ನಲ್ಲಿ ಕಂಡೆಕ್ಟರ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸತತ ಪರಿಶ್ರಮ ಹಾಗೂ ಕಠಿಣ ಪರಿಶ್ರಮದಿಂದ ಈತ ತನ್ನ ಗುರಿ ಮುಟ್ಟಲು ಸಾಧ್ಯವಾಯಿತು ಎಂದು ಅಭಿಷೇಕನ ತಾಯಿ ಸುಜಾತಾ ನವಲೇ ತಿಳಿಸಿದ್ದಾರೆ.ಫೆಬ್ರುವರಿ 26,2018ರಂದು ಗಿನ್ನಿಸ್ ವರ್ಲ್ಡ್ ರೇಕಾರ್ಡಗೆ ಸಲ್ಲಿಸಿದ್ದು ಇತ್ತೀಚೆಗಷ್ಟೇ ಇವರಿಗೆ ಗಿನ್ನಿಸ್ ವರ್ಲ್ಡ್ ರೇಕಾರ್ಡನ ಸರ್ಟಿಫಿಕೇಟ್ ನೀಡಿ ಗೌರವಿಸಲಾಗಿದೆ

loading...