ಗುಜರಿ ಸಾಮಗ್ರಿ 3 ದಿನದೊಳಗೆ ಖುಲ್ಲಾ ಪಡಿಸುವಂತೆ ಸೂಚನೆ

0
33
loading...

ಕುಮಟಾ: ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ಖೈರೆಯ ಕಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ ಸಂಗ್ರಹಿಸಿಟ್ಟಿದ ಗುಜರಿ ಸಾಮಗ್ರಿಯನ್ನು 3 ದಿನದೊಳಗೆ ಖುಲ್ಲಾ ಪಡಿಸುವಂತೆ ಸೂಚಿಸುವ ಖಡಕ್ ನೋಟಿಸನ್ನು ಗುಜರಿ ವ್ಯಾಪಾರಿಗೆ ಪಿಡಿಓ ಲಂಬೋದರ ಗಾಂವ್ಕರ ಹಾಗೂ ಗ್ರಾಪಂ ಸದಸ್ಯರು ಒಗ್ಗೂಡಿ ಮನೆಯ ಬಾಗಿಲಿಗೆ ತಲುಪಿಸಿದ್ದಾರೆ.
ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ಖೈರೆಯ ಕಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ ಸಂಗ್ರಹವಾದ ಗುಜರಿ ಸಾಮಗ್ರಿಗಳಲ್ಲಿ ಮಳೆಯ ನೀರು ಶೇಖರಣೆಗೊಂಡ ಪರಿಣಾಮ ಸೊಳ್ಳೆಗಳು ಉತ್ಪತ್ತಿಯಾಗಿದ್ದು, ಸೈನಿಕರಂತೆ ಬಂದೆರಗುವ ಸೊಳ್ಳೆಗಳು ಶಾಲಾ ಮಕ್ಕಳು ಹಾಗೂ ಶಿಕ್ಷಕರನ್ನು ಕಡಿದು ಹೈರಾಣಾಗಿಸಿದೆ. ಸೊಳ್ಳೆಗಳ ಕಾಡದಿಂದ ಮಕ್ಕಳನ್ನು ಭೊದಿಸುವ ಶಿಕ್ಷಕರು ಹಾಗೂ ಮಕ್ಕಳು ಪೇಚಾಡುವಂತಾಗಿದೆ. ಗುಜರಿ ಸಾಮಗ್ರಿಗಳು ಬೇರೆಕಡೆ ಸ್ಥಳಾಂತರಿಸದಿದ್ದರೆ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಪಾಲಕರ ನಿರ್ಧಾರಿಸಿದ್ದಾರೆ.

ಶಾಲೆಯ ಹಿಂದುಗಡೆ ಅಬುಲ್ ಹಸನ್ ಆಗಾ ಎನ್ನುವವರು ಮನೆಯಲ್ಲೆ ಗುಜರಿ ವ್ಯಾಪಾರಮಾಡುತ್ತಿದ್ದು, ಗುಜರಿ ಸಾಮಗ್ರಿಯನ್ನು ಶಾಲೆಯ ಸುತ್ತಮುತ್ತ ಸಂಗ್ರಹಿಸಿಟ್ಟಿದ್ದಾರೆ. ರಾಶಿ ರಾಶಿ ಯಾಗಿ ಇರುವ ಗುರಿಯಲ್ಲಿ ಸಾಮಂಗ್ರಿಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ದಿನವಿಡಿ ಸೊಳ್ಳೆಗಳ ಕಾಟದಿಂದ ಮಕ್ಕಳು ಅಧ್ಯಯನ ಮಾಡಲಾಗದೇ ಇರುವುದು ಶಾಲಾಭಿವೃದ್ದಿಯ ದೂರಾಗಿದೆ. ಸೊಳ್ಳೆಯ ಕಡಿತದ ತೀವೃತೆ ಎಷ್ಟಿದೆ ಎಂದರೆ ಶಾಲೆಯ ಕಿಟಕಿಗಳಿಗೆ ಜಾಳಿಗೆ ಹಾಕಿದರೂ ಇದಕ್ಕೆ ಸೊಳ್ಳೆಗಳು ಮಾತ್ರ ಸುತಾರಾಂ ಜಗ್ಗುತ್ತಿಲ್ಲ ಎನ್ನುತ್ತಾರೆ ಶಿಕ್ಷಕರು. ಸೊಳ್ಳೆಗಳ ಕಡಿತ ಮಕ್ಕಳಿಗಷ್ಟೆ ಅಲ್ಲ ಶಿಕ್ಷಕರಿಗೂ ಭಾದಿಸಿದೆ. ಸೊಳ್ಳೆಗಳ ಕಾಟ ತಡೆಯಲು 66 ವಿಧ್ಯಾರ್ಥಿಗಳಿರುವ ಕಿ ಪ್ರಾ ಶಾಲೆಯ 4 ಕೋಣೆಗೆ ಮಳೆಗಾಲದಲ್ಲೂ ನಿತ್ಯ ಪ್ಯಾನ್ ಹಾಕಿ ಸೊಳ್ಳೆಗಳ ಕಾಯ್ಲ್ ಬಳಸಲಾಗುತ್ತದೆ.
ಈ ಕುರಿತಂತೆ ಪತ್ರಿಕೆಗೆ ಮಾಹಿತಿ ನೀಡಿದ ಪಿಡಿಓ ಲಂಬೋದರ ಗಾಂವ್ಕರ ಕಳೆದ ಶುಕ್ರವಾರವೆ ನೋಟಿಸ್ ತಲುಪಿಸಲು ಬಂದ ಕಾರಣ ಯಾರೂ ಇಲ್ಲದ ಕಾರಣ ವಾಪಸ್ಸಾಗಿದ್ದರು. ನೋಟಿಸ್ ನ್ನು ಗುಜರಿ ವ್ಯಾಪಾರಿಗೆ ನೇರವಾಗಿ ಕೈಗೆ ತಲುಪಿಸಬೇಕೆನ್ನುವ ಉದ್ದೇಶದಿಂದ ಸದಸ್ಯರ ಜೊತೆಗೂಡಿ ಬಂದಿರುವುದಾಗಿ ತಿಳಿಸಿದರು.
ನೋಟಿಸ್ ಕೈಗೆ ಪಡೆದ ಗುಜರಿ ವ್ಯಾಪಾರಿ ಪುತ್ರ ನಿಗದಿತ ಅವದಿಯೊಳಗೆ ಗುಜಿ ಖಾಲಿ ಮಾಡಲು ಸಾದ್ಯಾವಾದಷ್ಟು ಪ್ರಯತ್ನಿಸುತ್ತೇನೆ ಎಂದರು. ಗ್ರಾ.ಪಂ ಸದಸ್ಯಯರಾದ ಗಣೇಶ ಅಂಬಿಗ, ಪರ್ಷು ಪರ್ನಾಂಡಿಸ್ ವಿನಾಯಕ ನಾಯ್ಕ ದೀಪಕ ಭಟ್ ಮಂಜುನಾಥ ಹರಿಕಾಂತ ಹಾಜರಿದ್ದರು. ಒಟ್ಟಾರೆ ಮಿರ್ಜಾನ ಗ್ರಾ.ಪಂ ತೆಗೆದುಕೊಂಡ ದಿಟ್ಟ ಕ್ರಮದಿಂದಾಗಿ ನುಶಿಗಳ ಕಾಟದಿಂದ ಶಿಕ್ಷರಿಗೆ ಹಾಗೂ ಮಕ್ಕಳಿಗೆ ಶಾಸ್ವತ ಮುಕ್ತಿ ದೊರತಿತೇ ? ಎಂಬುದು ಇನ್ನೂ 3 ದಿನದಲ್ಲಿ ತಿಳಿದು ಬರಬೇಕಿದೆ.

loading...