ಚಿಂಚಲಿ ಗ್ರಾಪಂನಲ್ಲಿ ಅವ್ಯವಹಾರ: ವಗ್ಗನವರ ಆರೋಪ

0
8
loading...

ಗದಗ: ತಾಲೂಕಿನ ಚಿಂಚಲಿ ಗ್ರಾಮ ಪಂಚಾಯತಿಯಲ್ಲಿ 14 ನೇಯ ಹಣಕಾಸು ಯೋಜನೆಯ ಬಳಕೆಯಲ್ಲಿ ಭಾರೀ ಅವ್ಯವಹಾರವಾಗಿದೆ ಎಂದು ಲಿಖಿತ ದೂರನ್ನು ಜಿಪಂ ಸಿಇಓ ಅವರಿಗೆ ನೀಡಿದರೂ, ಇಲ್ಲಿಯವರೆಗೆ ಅವರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರವಿ ವಗ್ಗನವರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿದ ಅವರು, ಚಿಂಚಲಿ ಗ್ರಾಮ ಪಂಚಾಯತಿಯಲ್ಲಿ 2017-18 ನೇ ಸಾಲಿನ 14 ನೇ ಹಣಕಾಸು ಯೋಜನೆ ಅಡಿಯಲ್ಲಿ ಮೊದಲ ಕಂತಿನ ಅನುದಾನವಾದ 12.5 ಲಕ್ಷ ರೂ ಅನುದಾನ ದುರ್ಬಳಕೆಯಾದ ಬಗ್ಗೆ ಜಿಪಂ ನಡೆಸಿದ ತ£ಖೆ ವೇಳೆಯಲ್ಲಿ ಬಹಿರಂಗಗೊಂಡಿದೆ. ಗ್ರಾಪಂ ಅಭಿವೃಧ್ದಿ ಅಧಿಕಾರಿಗಳಾದ ರಾಜಕುಮಾರ ಭಜಂತ್ರಿ ಮತ್ತು ಗ್ರಾಪಂ ಅದ್ಯಕ್ಷೆ ಶ್ರೀಮತಿ ದೀಪಾ ಅವರು ಅನುದಾನ ದುರ್ಬಳಕೆಯಲ್ಲಿ ಇವರ ಪಾತ್ರ ಅಡಗಿದೆ. ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ ರಾಜ್ ಅಧಿ£ಯಮ 1993 ಪ್ರಕರಣ (157) (20) ಹಾಗೂ (246) (8) ರ ಅನ್ವಯ ಕ್ರಮ ಜರುಗಿಸಲು ಬಡ್ಡಿ ಸಮೇತ ಹಣ ವಸೂಲು ಜಿಪಂ ಸಿಎಸ್ ಆದೇಶ ಮಾಡಿದರೂ, ಸಹಿತ ಈವರೆಗೆ ಅವರ ವಿರುದ್ದ ತಾಲೂಕ ಪಂಚಾಯತ್ ಕ್ರಮ ಕೈಗೊಳ್ಳದಿರದು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಂತಿದೆ. ತಾಪಂ ಮುಖ್ಯ ಅಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸದಿದ್ದೇ ಈ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಡಲಾಗುವದು. ಸಾರ್ವಜನಿಕರು ಪ್ರಗತಿಯ ದೃಷ್ಠಿಯಿಂದ ತೆರಿಗೆಯನ್ನು ಕಟ್ಟುತ್ತಾರೆ. ಆ ತೆರಿಗೆ ಹಣವನ್ನು ಬಳಕೆ ಮಾಡುವ ಬದಲು ದುರ್ಬಳಕೆ ಮಾಡುವ ಮುಖಾಂತರ ಸಾರ್ವಜನಿಕರಿಗೆ ವಂಚಿಸಿದ್ದಾರೆ.
ಅಂದಿನ ಪಿಡಿಓ ರಾಜಕುಮಾರ ಭಜಂತ್ರಿ ಅವರು ಗ್ರಾಮ ಸಭೆ ನಡೆಸದೇ ಸಾರ್ವಜನಿಕರಿಂದ ಹಣವನ್ನು ಪಡೆಯುವ ಮುಖಾಂತರ ಆಶ್ರಯ ಮನೆಗಳನ್ನು ನೀಡಿದ್ದಾರೆ. ಎಂದು ಸಾಮಾಜಿಕ ಕಾರ್ಯಕರ್ತ ರವಿ ವಗ್ಗನವರ ಆರೋಪಿಸಿದ್ದಾರೆ.

loading...