ಚುನಾವಣೆಯಲ್ಲಿ ಬಿಜೆಪಿ ಛಿದ್ರವಾಗುತ್ತದೆ: ಶಿವರಾಮೇಗೌಡ

0
15
loading...

ಗಂಗಾವತಿ: ಜೂ.8 ರಂದು ನಡೆಯಲಿರುವ ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಛೀದ್ರ ಛಿದ್ರಗೊಳ್ಳುತ್ತದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಶಿವರಾಮೇಗೌಡ ತಿಳಿಸಿದರು.

ಬುಧವಾರ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಬಿ.ಪಾಟೀಲ್ ಪರ ಮತಯಾಚನೆ ಮಾಡಿ ಮಾತನಾಡಿದರು.
ಇಷ್ಟು ವರ್ಷಗಳ ಕಾಲ ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿತ್ತು. ಚುನಾವಣೆಯಲ್ಲಿ ಈ ಪಕ್ಷದ ಅಂತ್ಯ ಕಂಡು ಬರುತ್ತದೆ ಎಂದು ತಿಳಿಸಿದರು. ತಮ್ಮ ಪಕ್ಷದಿಂದ ಜನಪರ ಕಾಳಜಿಯುಳ್ಳ ಅಭ್ಯರ್ಥಿ ಸ್ಪರ್ದಿಸಿದ್ದಾನೆ. ಇಂತಹ ವ್ಯಕ್ತಿಗಲು ವಿಧಾನಪರಿಷತ್‍ಗೆ ಆಯ್ಕೆವಾಗುವದರಿಂದ ನಿರುದ್ಯೋಗ ಸಮಸ್ಯೆ ನಿರ್ಮೂಲನೆಯಾಗುವದಲ್ಲದೆ ಶೈಕ್ಷಣಿಕ ಕ್ರಾಂತಿಗೆ ದಾರಿಯಾಗುತ್ತದೆ ಎಂದು ತಿಳಿಸಿದರು.

ಅಭ್ಯರ್ಥಿ ಡಾ.ಚಂದ್ರಶೇಖರಪಾಟೀಲರು ಗುಲ್ಬರ್ಗಾ, ಬೀದರ ಭಾಗಗಳಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇವರ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದರ ಮೂಲಕ ಅಕ್ಷರ ದಾಸೋಹದ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾವಂತ ಅರ್ಹ ಬಡ ವಿದ್ಯಾರ್ಥಿಗಳಿಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಾನುರಾಗಿಯಾಗಿದ್ದಾರೆ ಎಂದು ಗೌಡರು ತಿಳಿಸಿದರು.
ಇವರ ಮನೆತನ ರಾಜಕೀಯ ಕುಟುಂಬದಿಂದ ಬಂದಿದೆ. ಜನಸೇವೆಯನ್ನು ಮಾಡುವದರಲ್ಲಿ ಇವರ ಮನೆತನ ಎತ್ತಿದ ಕೈಯಾಗಿದೆ ಎಂದು ಹೇಳಿದರು. ಗಂಗಾವತಿ ತಾಲೂಕಿನಲ್ಲಿ 2789 ಪದವೀಧರ ಮತದಾರರಿದ್ದು ಇದರಲ್ಲಿ 2000 ಮತಗಳನ್ನು ತಮ್ಮ ಪಕ್ಷದ ಅಭ್ಯರ್ಥಿ ಪಡೆದುಕೊಳ್ಳುವ ವಿಶ್ವಾಸ ತಮಗಿದೆ ಎಂದು ಹೇಳಿದರು.

ಅನ್ಸಾರಿ ಗೈರು: ಗೋಷ್ಠಿಯಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗೈರು ಹಾಜರಿಗೆ ಸಮಜಾಯಿಷಿ ನೀಡಿದ ಅವರು ರಂಜಾನ್ ಹಬ್ಬದ ಅಂಗವಾಗಿ ಅವರು ಉಪವಾಸ ವೃತ ಕೈಕೊಂಡಿರುವ ಕಾರಣ ಅವರು ಗೋಷ್ಠಿಗೆ ಆಗಮಿಸಿಲ್ಲ ಎಂದು ತಿಳಿಸಿದರು. ಮುಖಂಡರಾದ ಬಸವರಾಜಸ್ವಾಮಿ ಮಳೇಮಠ, ವಕೀಲರ ಸಂಘದ ಅಧ್ಯಕ್ಷ ಶರಣೇಗೌಡ ಮಾಲೀಪಾಟೀಲ್, ಶಾಮೀದ ಮನಿಯಾರ್ ಮತ್ತು ರುದ್ರೇಶ ಡ್ಯಾಗಿ ಪಾಲ್ಗೊಂಡಿದ್ದರು.

loading...