ಜನರಿಗೆ ಒಳ್ಳೆಯದಾಗುವ ಕಾರ್ಯ ಮಾಡಿ: ವಿ.ಡಿ.ಸಜ್ಜನ

0
13
loading...

ಕನ್ನಡಮ್ಮ ಸುದ್ದಿ-ಸವಣೂರು : ಮನುಷ್ಯ ಎಲ್ಲ ಸಮಯದಲ್ಲಿಯು ಸ್ವಾರ್ಥವನ್ನು ಭಯಸದೆ ಜನರಿಗೆ ಒಳ್ಳೆಯದಾಗುವಂತ ಕಾರ್ಯವನ್ನು ಮಾಡಬೇಕು ಎಂದು ತಹಶೀಲ್ದಾರ ವಿ.ಡಿ.ಸಜ್ಜನ ಹೇಳಿದರು.

ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದ ವತಿಯಿಂದ ಜರುಗಿದ ಕರವೇ ರಾಜ್ಯಾಧ್ಯಕ್ಷ ಟಿ.ನಾರಾಯಣಗೌಡ್ರ 52ನೇ ಹುಟ್ಟು ಹಬ್ಬದ ಅಂಗವಾಗಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಅವರು ಮಾತನಾಡಿದರು.
ಪ್ರತಿಯೋಬ್ಬ ಮನುಷ್ಯನಿಗೂ ತಮ್ಮದೇ ಆದಂತ ಬದಕು ಇರುತ್ತದೇ. ಪ್ರತಿ ಹಂತದಲ್ಲಿಯೂ ಸ್ವಾರ್ಥವನ್ನು ಬಯಸಬಾರದು. ಮನುಷ್ಯರಾಗಿ ಹುಟ್ಟಿದ ಬಳಿಕ ನಮ್ಮಿಂದ ಸಮಾಜಕ್ಕೆ ಮತ್ತು ಸಮಾಜದಲ್ಲಿ ಮತ್ತೊಬ್ಬರಿಗೆ ಏನಾದರೂ ಉಪಯೋಗವಾಗಬೇಕು. ಅಂದಾಗ ಮಾತ್ರ ನಮ್ಮ ಜೀವನ ಸ್ವಾರ್ಥಕsವಾಗುತ್ತದೆ. ತ್ಯಾಗದಲ್ಲಿ ಇರುವಂತ ಖುಷಿ ಬೇರೆ ಯಾವುದರಲ್ಲಿಯು ಸಿಗುವುದಿಲ್ಲ.

ತಾಲ್ಲೂಕಿನ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆಯುತ್ತಿರುವುದು ಸಂತಸದ ವಿಷಯ. ಕನ್ನಡ ನಾಡಿನ ಜಲ, ನೆಲ, ಭಾಷೆ ಸೇರಿದಂತೆ ಕನ್ನಡಿಗರ ರಕ್ಷಣೆಗೆ ಕರವೇ ಸಂಘಟನೆ ಮುಂಚೂಣಿಯಲ್ಲಿದೆ. ಇಂತಹ ಸಂಘಟನೆ ಸ್ಥಾಪಿಸಿದ ರಾಜ್ಯಾಧ್ಯಕ್ಷರ ಟಿ.ನಾರಾಯಣಗೌಡ್ರ ಹುಟ್ಟು ಹಬ್ಬದ ನಿಮಿತ್ಯ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಕನ್ನಡ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸುವ ಮೂಲಕ ಇನ್ನಷ್ಟು ಪೆÇ್ರೀತ್ಸಾಹ ನೀಡುವ ಕಾರ್ಯವನ್ನು ಕರವೇ ತಾಲ್ಲೂಕ ಘಟಕ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಮೆಣಸಿನಕಾಯಿ ವಹಿಸಿ, ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಎಪಿಎಂಸಿ ನಿರ್ದೇಶಕ ಮಹೇಶ ಸಾಲಿಮಠ, ಮುಖ್ಯೋಪಾಧ್ಯಾಯರಾದ ಎನ್.ಕೆ.ಪಾಟೀಲ, ಬಿ.ಬಿ.ದ್ಯಾಮನಗೌಡ್ರ, ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಸವಣೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ತಾಲೂಕಿನ ಚಿಲ್ಲೂರ ಬಡ್ನಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪೀರಸಾಬ ಹುಸೇನಸಾಬ ನದಾಫ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಕ್ಕಮ್ಮ ಖಂಡಪ್ಪ ಅಗಸರ, ಪಿಯುಸಿ ಪರೀಕ್ಷೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಿಕೀತಾ ಮುದಿಗೌಡ್ರ, ಅರುಣಾ ಮಹದೇವಪ್ಪ ಪೂಜಾರ ಹಾಗೂ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯು ಕನ್ನಡ ವಿಷಯದಲ್ಲಿ ಪ್ರತಿ ವರ್ಷವೂ ಅತೀ ಹೆಚ್ಚು ಸಾಧನೆಗೆ ಶ್ರಮಿಸಿದ ಶಾಲೆಯ ಮುಖ್ಯೋಪಾದ್ಯಾಯರಾದ ಬಿ.ಬಿ.ದ್ಯಾಮನಗೌಡ್ರ ಅವರನ್ನು ಕರವೇ ಸವಣೂರು ತಾಲೂಕ ಘಟಕದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಕರವೇ ತಾಲೂಕ ಘಟಕದ ಅಧ್ಯಕ್ಷ ಪರಶುರಾಮ ಈಳಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರವೇ ತಾಲ್ಲೂಕ ಘಟಕದ ಗೌರವಾಧ್ಯಕ್ಷ ಮಲ್ಲಾರಪ್ಪ ಎನ್. ತಳ್ಳಿಹಳ್ಳಿ, ಕರವೇ ರೈತ ಘಟಕದ ಅಧ್ಯಕ್ಷ ರಾಮಣ್ಣ ಅಗಸರ, ಪ್ರಮುಖರಾದ ಖಂಡಪ್ಪ ಇದ್ದರು.
ಶಿಕ್ಷಕ ಎಸ್.ಡಿ.ದೇವಗಪ್ಪನವರ ಸ್ವಾಗತಿಸಿದರು. ಕಸಾಪ ತಾಲ್ಲೂಕ ಅಧ್ಯಕ್ಷ ಪ್ರಭು ಅರಗೋಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

loading...