ಜನರ ನಿರೀಕ್ಷೆ ಹುಸಿಗೊಳಿಸಿದ ಪ್ರಧಾನಿ ಮೋದಿ: ಚಿನ್ಮಯಸಾಗರ ಮಹಾರಾಜರು

0
9
loading...

ಬಾಗಲಕೋಟೆ: ಚುನಾವಣೆಗೂ ಮುನ್ನ ಪ್ರಧಾನಿ ಮೋಧಿ ಅವರ ಮೇಲೆ ಈ ದೇಶದ ಜನತೆ ಇಟ್ಟಿದ್ದ ನಿರೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಹುಸಿಗೊಳಿಸಿದ್ದಾರೆ ಎಂದು ಜೈನ್‌ ಸಮುದಾಯದ ಚಿನ್ಮಯಸಾಗರ ಮಹಾರಾಜರು ಹೇಳಿದರು.
ನವನಗರದ ಜೈನ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಯಾವ ಸಮಸ್ಯೆಗಳನ್ನು ಸಹ ಬಗೆ ಹರಿಸುವ ಗೋಜಿಗೆ ಪ್ರಧಾನಿ ಮೋದಿ ಹೋಗಿಲ್ಲ. ದೇಶದಲ್ಲಿ ಬಡತನ, ನಿರುದ್ಯೋಗ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಹೋಗಲಾಡಿಸಲು ಪ್ರಧಾನಿ ಮೋಧಿ ವಿಫಲರಾಗಿದ್ದಾರೆ ಎಂದರು. ವಿದೇಶ ಸುತ್ತುವುದರಿಂದ ಅಂಕಿ-ಸಂಖ್ಯೆಗಳಲ್ಲಿ ದೇಶದ ಆರ್ಥಿಕತೆ ಸುದಾರಿಸಿರಬಹುದು. ಆದರೆ, ಅಷ್ಟರಿಂದಲೇ ದೇಶದ ಅಭಿವೃದ್ಧಿ ಆಗುವುದಿಲ್ಲ. ಹಳ್ಳಿಗಳಿಗೆ ಹೋಗಿ ಜನರ ನಡುವೆ ಇದ್ದು ಅವರ ಸಮಸ್ಯೆ ಏನೆಂದು ತಿಳಿದು, ಗ್ರಾಮೀಣ ಜನತೆಗೆ ಮೂಲಭೂತ ಸೌಲಭ್ಯ ಒದಗಿಸಿದಲ್ಲಿ ಮಾತ್ರ ಈ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಸಲಹೆ ನೀಡಿದರು. ದೇಶದ ಅಭಿವೃದ್ಧಿಗೆ ಏನು ಮಾಡಬೇಕು ಎನ್ನುವುದನ್ನು ಬಿಟ್ಟು, ಬೇರೆಲ್ಲವನ್ನು ಪ್ರಧಾನಿಗಳು ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅವರು ಈ ದೆಶದ ಜನತೆಗೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ನೋಟ್‌ ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಯಿಂದ ಈ ದೇಶದ ಜನತೆಗೆ ಏನು ಲಾಭ, ಯಾರಿಗೆ ಲಾಭ ಅಥವಾ ಈಗಲ್ಲದಿದ್ದರೆ ಮುಂದೆ ಯಾವಾಗ ಲಾಭವಾಗುತ್ತದೆ ಎಂದು ದೇಶದ ಜನತೆಗೆ ತಿಳಿಸಬೇಕು ಎಂದು ಜೈನ ಮುನಿಗಳು ಆಗ್ರಹಿಸಿದರು. ಮೋಧಿ ಅವರಿಗೆ ಏನು ಮಾಡುತ್ತಿದ್ದೇನೆ ಎನ್ನುವ ಸ್ಪಷ್ಟತೆ ಅವರಿಗೇ ಇಲ್ಲ. ಒಮ್ಮೆ ಹಿಂದುತ್ವ ಎನ್ನುತ್ತಾರೆ, ಮತ್ತೊಮ್ಮೆ ವಿಕಾಸ ಎನ್ನುತ್ತಾರೆ, ಈ ಎಲ್ಲಾ ಗೊಂದಲಗಳಿಂದ ಮೊದಲು ಅವರು ಹೊರಬರಲಿ ಎಂದು ಕಿವಿಮಾತು ಹೇಳಿದ ಅವರು, ಪ್ರಧಾನಿ ಮೋಧಿ ಅವರ ಕಳೆದ ನಾಲ್ಕು ವರ್ಷಗಳ ಆಡಳಿತ ತಮಗೆ ತೃಪ್ತಿ ತಂದಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು. ಎಲ್ಲರೂ ಅಧಿಕಾರದ ಆಸೆಗೆ ಬಡಿದಾಡುತ್ತಿದ್ದಾರೆ. ದೇಶ ಸೇವೆ ಮಾಡುವಲ್ಲಿ ಎಲ್ಲ ಪಕ್ಷಗಳು ವಿಫಲವಾಗಿವೆ. ಪೂರ್ಣ ಬಹುಮತ ಇದ್ದರೂ ಕೂಡ ಮೋಧಿ ಅವರು ಯಾವ ಅಭಿವೃದ್ದಿ ಯೋಜನೆಗಳು ಜಾರಿಗೆ ತಂದಿಲ್ಲ. ದೇಶದ ಜನರು ಮೋಧಿ ಅವರ ಮೇಲೆ ಇನ್ನೂ ನಿರೀಕ್ಷೆ ಇಟ್ಟಿದ್ದಾರೆ. ಮುಂದೆ ಏನಾದರೂ ಮೋಧಿ ಅವರು ಪವಾಡ ಮಾಡಬಹುದು ಎಂದು. ಅವರ ಸಹನೆಯನ್ನು ಪರೀಕ್ಷೆ ಮಾಡಬೇಡಿ, ಜನತೆಯ ನಿರೀಕ್ಷೆ ಉಳಿಸಿಕೊಳ್ಳಿ ಎಂದು ತಿಳಿಸಿದರು.

loading...