ಜಾತಿಯತೆ ಹೋಗಲಾಡಿಸಿ ಸಹೋದರರಂತೆ ಬಾಳಬೇಕು: ಪಾಟೀಲ

0
11
loading...

ಹಿರೇಕೆರೂರ: ಮುಸ್ಲೀಂ ಧರ್ಮದವರಿಗೆ ರಂಜಾನ್‌ ಬಹುದೊಡ್ಡ ಮತ್ತು ಅತಿ ಪವಿತ್ರ ಹಬ್ಬವಾಗಿದ್ದು, ಈ ದಿನಗಳಲ್ಲಿ ಅವರು ಆಚರಿಸುವ ಭಕ್ತಿ ಅಲ್ಲಾ ದೇವರಿಗೆ ಬಹಳ ಪ್ರಾಮುಖ್ಯತೆ ಪಡೆದಿದೆ ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಬಾಳಂಬೀಡ ಗ್ರಾಮದ ದಿ.ಶ್ರೀ ಶಿವಮ್ಮ ಚನ್ನಬಸನಗೌಡ ಪಾಟೀಲ ರಂಗಮಂದಿರದ ಆವರಣದಲ್ಲಿ ಮಂಗಳವಾರ ಸಂಜೆ ಮುಸ್ಲೀಂ ಭಾಂದವರಿಗೆ ರಂಜಾನ್‌ ಹಬ್ಬದ ನಿಮಿತ್ಯ ಎರ್ಪಡಿಸಿದ್ದ ಇಫ್ತಿಯಾರಕೂಟಕ್ಕೆ ಸಿಹಿ ಮತ್ತು ಹಣ್ಣುಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲ ಧರ್ಮದ ಸಾರ ಒಂದೆಯಾಗಿದ್ದು, ಭಾರತದ ಸ್ವಾತಂತ್ರ್ಯ ದೊರಕಿಸುವಲ್ಲಿ ಮತ್ತು ನಿರ್ಮಾಣದಲ್ಲಿ ಅನೇಕ ಮುಸ್ಲೀಂ ಮುಖಂಡರುಗಳು ಶ್ರಮೀಸಿದ್ದಾರೆ. ನಮ್ಮಲ್ಲಿನ ಜಾತಿಯತೆ ಹೋಗಲಾಡಿಸಿಕೊಂಡು, ಎಲ್ಲರೂ ಸಹೋದರರಂತೆ ಬಾಳುವುದೆ ನಾವು ನಿಜವಾಗಿ ದೇವರಿಗೆ ಅರ್ಪಿಸುವ ಭಕ್ತಿಯಾಗಿದೆ ಎಂದರು.
ಅಂಜುಮನ್‌ ಇಸ್ಲಾಂ ಕಮೀಟಿ ಅಧ್ಯಕ್ಷ ಜಿಲಾನಿ ಬಳಿಗಾರ, ಬಿ.ಎನ್‌.ಬಣಕಾರ, ಡಿ.ಸಿ.ಪಾಟೀಲ, ಪ್ರಕಾಶಗೌಡ ಗೌಡರ, ಗುರುಶಾಂತ ಯತ್ತಿನಹಳ್ಳಿ, ದುರ್ಗಪ್ಪ ನೀರಲಗಿ, ಮಹ್ಮದ್‌ ವಡ್ಡಿನಕಟ್ಟಿ, ಅಲ್ತಾಫಖಾನ್‌ ಪಠಾಣ, ಪೀರಹ್ಮದ್‌ ಬೇವಿನಹಳ್ಳಿ, ಜಬಿವುಲ್ಲಾ ಲೋಹಾರ, ಅಬ್ದುಲಖಾದರ ಲೋಹಾರ, ಯೂಸೂಫ ಹಾನಗಲ್‌, ಹೊನ್ನಪ್ಪ ಸಾಲಿ ಹಾಗೂ ಮತ್ತಿತರರು ಇದ್ದರು.

loading...