ಜೂ. 10 ರಂದು ಉಚಿತ ಹೃದಯರೋಗ ತಪಾಸಣಾ ಶಿಬಿರ

0
24
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಇಲ್ಲಿಯ ವೆಸ್ಟ್‍ಕೋಸ್ಟ್ ಪೇಪರ್ ಮಿಲ್ ಹಾಗೂ ಧಾರವಾಡದ ಎಸ್.ಡಿ.ಎಮ್. ನಾರಾಯಣ ಹಾರ್ಟ ಸೆಂಟರ್ ಇವುಗಳ ಸಂಯುಕ್ತಾಶ್ರಯದಲ್ಲಿ ಜೂನ್ 10 ರಂದು ಮುಂಜಾನೆ 9 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಬಂಗೂನಗರದಲ್ಲಿರುವ ಕಾಗದ ಕಾರ್ಖಾನೆಯ ಆಸ್ಪತ್ರೆಯಲ್ಲಿ ಉಚಿತ ಹೃದಯರೋಗ ತಪಾಸಣಾ ಶಿಬಿರ ನಡೆಯಲಿದೆ ಎಂದು ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈ ಶಿಬಿರವನ್ನು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ದಾಂಡೇಲಿ ಹಾಗೂ ಸುತ್ತ ಮುತ್ತಲ ಗ್ರಾಮೀಣ ಭಾಗದ ಜನರಿಗಾಗಿ ಆಯೋಜಿಸಲಾಗಿದ್ದು ಹೃದಯ ಸಂಬಂಧಿಕಾಯೊಲೆಯಿದ್ದವರು, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಎಸ್.ಡಿ.ಎಮ್. ನಾರಾಯಣ ಹಾರ್ಟ್ ಸೆಂಟರ್‍ನ ಸಾರ್ವಜನಿಕ ಸಂಪಕಾಧಿಕಾರಿ ದುಂಡೇಶ ತಡಕೋಡ ಮಾತನಾಡಿ ಶಿಬಿರದಲ್ಲಿ ಸುಪರ್ ಸ್ಪೆಶಾಲಿಟಿ ಹಾಗೂ ಎಸ್.ಡಿ.ಎಮ್. ನಾರಾಯಣ ಹಾರ್ಟ ಸೆಂಟರ್‍ನ ಹಿರಿಯ ಹೃದಯ ರೋಗ ತಜ್ಞರಾದ ಡಾ. ವಿವೇಕಾನಂದ ಗಜಪತಿಯವರ ನೇತೃತ್ವದಲ್ಲಿ ತಜ್ಞ ವೈದ್ಯ ತಂಡ ಹಾಗೂ 22 ಕ್ಕೂ ಹೆಚ್ಚಿನ ತಾಂತ್ರಿಕ ತಜ್ಞರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಹೃದ್ರೋಗ ಸಂಬಂದಿ ಕಾಯಿಲೆಗಳನ್ನು ಹಾಗೂ ಇ.ಸಿ.ಜಿ, ಇಕೋ, ರಕ್ತದೊತ್ತಡ ಹಾಗೂ ಸಕ್ಕರೆ ಕಾಯೊಲೆಗಳ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಹೃದಯ ಸಂಬಂದಿ ಕಶಾಯಿಲೆಗಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದರೆ ಧಾರವಡದ ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುವುದು. ಅಲ್ಲಿ ಬಿ.ಪಿ.ಎಲ್. ಕಾರ್ಡದಾರರಾಗಿರುವ ಬಡವರಿದ್ದರೆ ಉಚಿತ ಚಿಕಿತ್ಸೆ, ಏ.ಪಿ.ಎಲ್. ಕಾರ್ಡದಾರರಿಗೆ ಶೇ. 30 ರಷ್ಟು ರಿಯಾಯತಿ, ಸರಕಾರಿ ನೌಕಕರಿಗೆ ಜ್ಯೋತಿ ಸಂಜೀವಿನ ಯೋಜನೆಯಡಿ ಉಚಿತ ಚಿಕಿತ್ಸೆ, ಹಾಗೂ ಯಶಸ್ವಿನಿ ಫನಾನುಭವಿಗಳಿದ್ದರೆ ಉಚಿತ ಸರ್ಜರಿ, 1 ರಿಂದ 12 ನೇ ತರಗತಿ ವರೆಗಿನ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಯೋಜನೆಯಡಿ ಉಚಿತ ಚಿಕಿತ್ಸೆ ಕೊಡಿಸಲಾಗುವುದು. ಇನ್ನು ಹೆಸ್ಕಾಂ ಸೇರಿದಂತೆ ಕೆಲವು ಇಲಾಖೆಗಳ ಜೊತೆಗೆ ಒಪ್ಪಂದವಿದ್ದು ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ಶಿಬಿರದ ಕುರಿತಾಗಿ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ ರಾಜೇಶ ತಿವಾರಿ ( 9742257466), ಡಾ. ಪ್ರದೀಪ ಜೋಶಿ ( 9916910444) ಇವರನ್ನು ಸಂಪರ್ಕಿಸಬಹುದೆಂದು ಸಂಘಟಕರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಕಿ ಕಾಗದ ಕಾರ್ಖಾನೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಪ್ರದೀಪ ಜೋಶಿ, ಸಾರ್ವಜನಿಕ ಸಂಪರ್ಕ ವಿಭಾಗದ ಎಸ್.ಜಿ. ಜಾಲಿಹಾಳ, ಎಸ್.ಡಿ.ಎಮ್. ನಾರಾಯಣ ಹಾರ್ಟ್ ಸೆಂಟರ್‍ನ ಮಂಜುನಾಥ ಶಿರೂರ ಮುಂತಾದವರಿದ್ದರು.

loading...