ಡಾ. ಮಹಾಂತ ಸ್ವಾಮಿಗಳವರ ಸ್ಮರಣೋತ್ಸವ

0
5
loading...

ಅಮೀನಗಡ : ಮಹಾಂತ ಜೋಳಿಗೆಯ ಹರಿಕಾರರು ಶಿವಾನುಭವ ಚರಿವರ್ಯ ಬಸವಶ್ರೀ ಹಾಗೂ ಸಂಯಮ ಪ್ರಶಸ್ತಿ ಪುರಸ್ಕೃತರು ಬಸವತತ್ವ ದಂಡ ನಾಯಕರು ನುಡಿದಂತೆ ನಡೆದ ಮಹಾಯೋಗಿ ಲಿಂಗಲೀನರಾದ ಪರಮಪೂಜ್ಯ ಮ.ನಿ.ಪ್ರ. ಡಾ. ಮಹಾಂತ ಸ್ವಾಮಿಗಳವರ ಸ್ಮರಣೋತ್ಸವವು ಬರುವ ದಿನಾಂಕ 15-06-2018 ರಂದು ಶುಕ್ರವಾರ ಬೆಳಿಗ್ಗೆ 11-00 ಘಂಟೆಗೆ ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿ ವಿಜಯಮಹಾಂತೇಶ್ವರ ಮೂಲಮಠದಲ್ಲಿ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶಿವಯೋಗ ಮಂದಿರದ ಸಂಸ್ಥೆಯ ಅಧ್ಯಕ್ಷರು ಹಾಗೂ ಹಾಲಕೇರಿ ಹೊಸಪೇಟೆಯ ಅನ್ನದಾನೇಶ್ವರ ಮಠದ ಡಾ. ಸಂಗನಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಿತ್ತರಗಿ ಸಂಸ್ಥಾನಮಠದ ಚಿತ್ತರಗಿ ಇಲಕಲ್ಲಿನ ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು ವಹಿಸಲಿದ್ದಾರೆ. ನೇತೃತ್ವವನ್ನು ಹಡಗಲಿ-ನಿಡಗುಂದಿಯ ರುದ್ರೇಶ್ವರ ಮಠದ ರುದ್ರಮುನಿ ಶ್ರೀಗಳು, ಕಮತಗಿ ಕೋಟೆಕಲ್ಲಿನ ಹೊಳೆ ಹುಚ್ಚೇಶ್ವರ ಶ್ರೀಗಳು, ಅಮೀನಗಡ ಶಂಕರರಾಜೇಂದ್ರ ಶ್ರೀಗಳು, ಹೊಸಹಳ್ಳಿ ಬೂದೇಶ್ವರ ಶ್ರೀಗಳು, ಶಿರೂರಿನ ಬಸವಲಿಂಗ ಶ್ರೀಗಳು, ಹರಿಹರದ ಯರೆಹೊಸಹಳ್ಳಿ ರೆಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು, ಸಿಂದಗಿ ತಾಲೂಕಿನ ಹರನಾಳದ ಸಂಗನಬಸವ ಶ್ರೀಗಳು, ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮಿಗಳು, ಲಿಂಗಸಗೂರಿನ ಸಿದ್ದಲಿಂಗ ಸ್ವಾಮಿಗಳು, ಹುಲಗಿನಾಳದ ಶ್ರೀದತ್ತ ಅವದೂತ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ವಿರೋದ ಪಕ್ಷದ ಉಪನಾಯಕರಾದ ಮುಧೋಳ ಶಾಸಕರಾದ ಗೋವಿಂದ ಎಂ. ಕಾರಜೋಳ, ಮಾಜಿ ಸಚಿವರಾದ ಬಾಗಲಕೋಟೆಯ ವಿಧಾನಪರಿಷತ ಸದಸ್ಯರಾದ ಎಸ್‌.ಆರ್‌. ಪಾಟೀಲ (ಬಾಡಗಂಡಿ), ಬಿ.ವ್ಹಿ.ವಿ. ಸಂಘದ ಅಧ್ಯಕ್ಷರು ಹಾಗೂ ಬಾಗಲಕೋಟ ಮತಕ್ಷೇತ್ರದ ಶಾಸಕರಾದ ಡಾ. ವೀರಣ್ಣನವರು ಸಿ. ಚರಂತಿಮಠ, ಹುನಗುಂದ ಶಾಸಕರಾದ ದೊಡ್ಡನಗೌಡ ಜಿ. ಪಾಟೀಲ, ಅಮರಾವತಿಯ ಧನಂಜಯಕುಮಾರ್‌ ಆರ್‌. ಸರದೇಸಾಯಿ ಇನ್ನೂ ಹಲವಾರು ಗಣ್ಯರು ಆಗಮಿಸಲಿದ್ದಾರೆ.
ಅತಿಥಿಗಳಾಗಿ ಬಾಗಲಕೋಟೆಯ ಕೆಲೂಡಿ ಆಸ್ಪತ್ರೆಯ ಹಾಗೂ ಸಂಶೋಧನಾ ಕೇಂದ್ರದ ಡಾ. ಬಸವರಾಜ ಎಚ್‌. ಕೆರೂಡಿ, ಇಲಕಲ್ಲಿನ ಕಡಪಟ್ಟಿ ಸ್ಮಾರಕ ಆಸ್ಪತ್ರೆಯ ಡಾ. ಮಹಾಂತೇಶ ಎಸ್‌. ಕಡಪಟ್ಟಿ, ಇಲಕಲ್ಲಿನ ಮಹಾಂತೇಶ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯ ಡಾ. ಮಹಾಂತೇಶ ಕೆ. ಅಕ್ಕಿ ಆಗಮಿಸಲಿದ್ದಾರೆ ಎಂದು ಚಿತ್ತರಗಿ ಸ್ಮರಣೋತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಗಂಗಾಧರ ಶಾಸ್ತ್ರಿಗಳು ಹಿರೇಮಠ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...