ತಂಬಾಕಿನ ದುಷ್ಪರಿಣಾಮದ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವುದು ಅವಶ್ಯ: ಶಿವಪ್ಪ

0
17
loading...

ಕನ್ನಡಮ್ಮ ಸುದ್ದಿ-ಶಿರಸಿ: ತಂಬಾಕು ಸಹಿತ ಜೀವನ ಹಾನಿಕಾರವಾಗಿದ್ದು ತಂಬಾಕು ನಿಯಂತ್ರಿಸುವ ಅವಶ್ಯಕತೆ ಸಮಾಜ ಮತ್ತು ಸರ್ಕಾರದ ಮೇಲಿದೆ. ತಂಬಾಕಿನ ದುಷ್ಪರಿಣಾಮದ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಹೇಳಿದರು.
ಶಿರಸಿ ವಕೀಲರ ಸಂಘದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆರೋಗ್ಯ ಇಲಾಖೆ ಇದರ ಸಹಯೋಗದೊಂದಿಗೆ ತಂಬಾಕು ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದುಷ್ಚಟಗಳಲ್ಲಿ ಒಂದಾದ ತಂಬಾಕು ಆರೋಗ್ಯಕ್ಕೆ ಹಾನಿಕರ ಎಂಬುದು ಗೊತ್ತಿದ್ದು ಜನಸಮಾನ್ಯರು ಬಲಿಯಾಗುತ್ತಿರುವುದು ಆಶ್ಚರ್ಯಕರ ಸಂಗತಿ. ವರ್ಷಕ್ಕೆ 70 ಲಕ್ಷ ಜನ ತಂಬಾಕು ಸೇವನೆಯಿಂದ ಆರೋಗ್ಯ ಹದಗೆಡಿಸಿಕೊಂಡು ಸಾವನ್ನಪ್ಪುತ್ತಿದ್ದಾರೆ. ತಂಬಾಕಿನ ಪರೋಕ್ಷ ಪರಿಣಾಮದಿಂದ ವರ್ಷಕ್ಕೆ 8 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆಂದು ಹೇಳುತ್ತಾ ತಂಬಾಕು ಸೇವನೆಯನ್ನು ನಿಗ್ರಹಿಸಲು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಮಾತನಾಡುತ್ತಾ, ತಂಬಾಕು ಸೇವನೆ ಮಾಡುವವರು ಕೆಟ್ಟವರಲ್ಲ ತಂಬಾಕು ಮಾತ್ರ ಕೆಟ್ಟದ್ದು. ತಂಬಾಕಿನ ದುಷ್ಟರಿಣಾಮದ ಕುರಿತು ವ್ಯಾಪಕ ಪ್ರಚಾರ ಅಗತ್ಯ. ಹಣಕೊಟ್ಟು ಆರೋಗ್ಯ ಹಾನಿಕರ ಮಾಡುವುದನ್ನು ಬಿಟ್ಟು ಆರೋಗ್ಯ ಕಾಪಾಡಿಕೊಳ್ಳುವ ದಿಶೆಯಲ್ಲಿ ತಂಬಾಕು ಸೇವನೆ ಬಿಡಬೇಕು. ಅಲ್ಪ ಸಂತೋಷಕ್ಕೆ ಆರೋಗ್ಯ ಕೆಡಿಸಿಕೊಳ್ಳುವ ಪ್ರಮಾಣವನ್ನು ನಿಯಂತ್ರಿಸಬೇಕೆಂದು ಹೇಳಿದರು.
ಸ್ಮೋಕಿಂಗ ಝೋನ್: ಬೆಳೆಯುವ ಮಕ್ಕಳಲ್ಲಿ ತಂಬಾಕಿನಂತಹ ದುಷ್ಪರಿಣಾಮ ಆಕರ್ಷಣೆಗೊಳ್ಳುತಿರುವುದು ಯುವ ಜನಾಂಗದ ಪ್ರಗತಿಗೆ ಕುಂಠಿತವಾಗಿದ್ದು ದೇಹದ ಬೆಳವಣಿಗೆಗೆ ದುಷ್ಪರಿಣಾಮ ಉಂಟು ಮಾಡುವ ಕಾರ್ಯ ತಂಬಾಕಿನಿಂದ ಜರುಗುತ್ತಿದ್ದು, ಆತಂರಿಕ ದೇಹದ ಆರೋಗ್ಯ ಕುಂಠಿತ ಮಾಡುವ ಕಾರ್ಯವನ್ನು ತಂಬಾಕು ನಿರ್ವಹಿಸುವುದಲ್ಲದೇ, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನಕ್ಕಾಗಿಯೇ ಧೂಮಪಾನಿಗಳಿಗೆ ಸ್ಮೋಕಿಂಗ ಝೋನ್ ವ್ಯವಸ್ಥೆಗೊಳಿಸಿರುವುದು ಆಶ್ಚರ್ಯಕರ ಸಂಗತಿ. ಇಂಥ ವ್ಯವಸ್ಥೆಗಳಿಂದ ಧೂಮಪಾನಕ್ಕೆ ಹೆಚ್ಚಿನ ಪ್ರೇರಣೆ ದೊರಕಿದಂತಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಹಾಗೂ ಪ್ರದಾನ ಸಿವಿಲ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಹೇಳಿದರು. ವೈದ್ಯ ಕೃಷ್ಣಮೂರ್ತಿ ರಾಯ್ಸದ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾಕ್ಷ್ಯ ಚಿತ್ರಗಳ ಜೊತೆ ಉಪನ್ಯಾಸ ಮಾಡುತ್ತಾ ದಿನದಿಂದ ದಿನಕ್ಕೆ ಧೂಮಪಾನಿಗಳ ಸೇವನೆ ಪ್ರಮಾಣ ಹೆಚ್ಚಾಗುತ್ತಿದ್ದು ಧೂಮಪಾನಿಗಳಲ್ಲೇ ಶೇ.11ರಷ್ಟು ಮಹಿಳೆಯರೇ ಆಗಿರುವುದು ವಿಷಾದಕರ ಎಂದು ಹೇಳಿದರು.

ನ್ಯಾಯಾಧೀಶ ಶಂಕರ ರೆಡ್ಡಿ.ಡಿ.ವಿ., ತಾಲೂಕು ವೈದ್ಯಾಧಿಕಾರಿ ವಿನಾಯಕ ಭಟ್ಟ, ಸಹಾಯಕ ಸರ್ಕಾರಿ ಅಭಿಯೋಜಕಿ ಎಸ್.ಎಸ್. ಇನಾಂದಾರ, ಶಿಕ್ಷಕ ಉದಯ ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಲಿಕೆಗಳ ಸಾಕ್ಷ್ಯಚಿತ್ರಕ್ಕೆ ತಾಲೂಕು ಹಿರಿಯ ಆರೋಗ್ಯ ಸಹಾಯಕರಾದ ಎಫ್.ಎಸ್. ಡಿಸೋಜಾ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಿ ನಾಯ್ಕ ಹಾಗೂ ತಾಲೂಕಾ ಆಹಾರ ಸಂರಕ್ಷಣಾಧಿಕಾರಿ ಅರುಣ ಕಾಶಿಭಟ್ಟ ಸಹಕರಿಸಿದರು.

loading...