ತಾಲೂಕ ಮಟ್ಟದ ನಾಡದೋಣಿ ಸ್ಪರ್ಧೆ

0
19
loading...

ಹೊನ್ನಾವರ: ತಾಲೂಕಿನ ಹಡಿನಬಾಳ ಸೆಂಟ್‌ ಜೋನ್‌ ಬ್ಯಾಪ್ತಿಸ್ಟ್‌ ದೋಣಿ ಸಮಿತಿಯಿಂದ ತಾಲೂಕ ಮಟ್ಟದಲ್ಲಿ ದೋಣಿ ಸ್ಪರ್ಧೆ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಭು ಯೇಸು ಕ್ರಿಸ್ತರಿಗೆ ದೀಕ್ಷಾ ಸ್ನಾನ ನೀಡಿದ ಸ್ನಾನಿಕ ಸಂತ ಜೋನ್‌ ಬ್ಯಾಪ್ಟಿಸ್ಟ ಆಗಿದ್ದಾರೆ.
ಇವರ ಜನ್ಮ ದಿನದ ಪ್ರಯುಕ್ತ ನಾಡದೋಣಿ ಸ್ಪರ್ಧೆ ಮಧ್ಯಾಹ್ನದ 3.00 ಗಂಟೆಗೆ ಆರಂಭಿಸಲಾಯಿತು. ಉದ್ಘಾಟಕರಾಗಿ ಸೇಫ್‌ ಸ್ಟಾರ್‌ ಸೌಹಾರ್ದ ಗ್ರುಪಿನ ಮ್ಯಾನೆಜಿಂಗ್‌ ಡೈರೆಕ್ಟರ್‌ ಆಗಿರುವ ಜಿ. ಜಿ. ಶಂಕರ ಮಾತನಾಡಿ ಪ್ರಾಚೀನ ಕಾಲದಿಂದಲೂ ಈ ಸಂಸ್ಕೃತಿ ನಡೆದುಕೊಂಡು ಬಂದಿದ್ದು ನಿಜವಾಗಲು ನಮಗೆ ಸಂತಸವಾಗುತ್ತದೆ. ಇಡೀ ವಿಶ್ವದಲ್ಲಿ ಕ್ರಿಶ್ಚನ ಸಮುದಾಯ ಶಾಂತಿ ಪ್ರಿಯರು. ಹಾಗೆಯೇ ಶಾಂತಿದೂತರಾಗಿ ದೇವರು ತಮ್ಮ ಪುತ್ರನಾದ ಯೇಸು ಸ್ವಾಮಿಗೆ ಈ ಪ್ರಪಂಚದಲ್ಲಿ ಕಳಿಸಿಕೊಟ್ಟರು. ಸರಳ ಜೀವನ ನಡೆಸಿದರು. ಸಹಾಯ, ಒಳ್ಳೆಯ ಉಪದೇಶ ನೀಡಿದರು. ಅಂತಿಮ ಗಳಿಕೆಯಲ್ಲಿ ತಮ್ಮ ಪ್ರಾಣ ಶಿಲುಬೆಗೆ ಕೊಟ್ಟರು. ಶಿಲುಬೆಯಿಂದ ತಮ್ಮ ನುಡಿ ಹೀಗೆಂದರು “ಪ್ರಭುವೇ ಇವರು ಏನು ಮಾಡುತ್ತಾರೆಂದು ಅವರು ಅರಿಯರು ಅವರನ್ನು ಕ್ಷಮಿಸು” ಅದಗೋಸ್ಕರ ತಾವು ಸಹ ಒಬ್ಬರಿಗೊಬ್ಬರು ಅರಿತು ಒಳ್ಳೆಯ ಕಾರ್ಯ, ಸಹಕಾರ, ಪ್ರೀತಿಸುವ ಗುಣ, ಜೊತೆಗೆ ಕ್ಷಮಿಸುವ ಗುಣ ಹೊಂದಿರಬೇಕೆಂದು ತಿಳಿಸಿ, ಚಾಲನೆ ನೀಡಿದರು.
ಇನ್ನೋರ್ವ ಅತಿಥಿಯಾಗಿ ಬಂದಿರುವ ಹೆನ್ರಿ ಲೀಮಾ ಅಧಿಕೃತ ಗುತ್ತಿಗೆದಾರರು, ಹೆಸ್ಕಾ ಹೊನ್ನಾವರ ಇವರು. ದೋಣಿ ಸ್ಪರ್ಧೆಯಲ್ಲಿ ಒಂದು ದೋಣಿಯಲ್ಲಿ 5 ಮಂದಿರುತ್ತಾರೆ. ಅವರು ಸರಿಯಾಗಿ ದೋಣಿ ಚಲಿಸಲು ಸಹಾಯ ಮಾಡಿದರೆ ದೋಣಿ ಸರಿಯಾದ ದಿಕ್ಕಿನಲ್ಲಿ ಹೋಗುತ್ತದೆ. ಅದರಂತೆ ಒಂದು ಕುಟುಂಬದಲ್ಲಿ ಕುಟುಂಬದ ಎಲ್ಲರು ಸರಿಯಾಗಿದ್ದರೆ ಆ ಕುಟುಂಬ ಉತ್ತಮ ಮಾರ್ಗದಲ್ಲಿ ಮುನ್ನುಗುತ್ತದೆ. ದೋಣಿಯಲ್ಲಿ ನಾಯಕನ ಪಾತ್ರ ಕುಟುಂಬದಲ್ಲಿ ತಂದೆಯ ಪಾತ್ರ ಹೆಚ್ಚಿನ ಪಾತ್ರ ವಹಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ದೇವರು ಕೊಟ್ಟಿರುವ ಪ್ರತಿಭೆಯನ್ನು ಗುರುತಿಸಿ ಸಮಾಜದಲ್ಲಿ ಉತ್ತಮ ಕೊಡುಗೆ ಕೊಟ್ಟಿರುವ 2 ಸಾಧಕರಿಗೆ ಸನ್ಮಾನಿಸಲಾಯಿತು.À ಜೇಮ್ಸ್‌ ಪೆದ್ರು ಲೋಪಿಸ್‌, ಮದರ ಥೇರೆಸಾ ಬ್ರಾಸ್‌ ಬ್ಯಾಂಡಿನ ಮುಖ್ಯಸ್ಥರು ಸನ್ಮಾನ ಸ್ವೀಕರಿಸಿ, ಈ ಸನ್ಮಾನ ನನಗೆ, ನನ್ನ ಕುಟುಂಬಕ್ಕೆ, ನನ್ನ ಪಾಲಕರಿಗೆ ಹಾಗೂ ನನ್ನ ವಾದ್ಯದ ಸಿಬ್ಬಂದಿಗಳ ಪ್ರತಿಫಲವಾಗಿದೆ. ನನ್ನ ಕಲೆಗೆ ಯಾವತ್ತು ಸ್ಪಂದಿಸುವ ಎಲ್ಲಾ ಅಭಿಮಾನಿಗಳಿಗೆ ಶ್ಲಾಘನೆ ಮಾಡುತ್ತೇನೆ. ದೇವರು ಕೊಟ್ಟಿರುವ ಈ ನನ್ನ ಪ್ರತಿಭೆ ಇನ್ನೂ ನನ್ನಿಂದ ಈ ಸಮಾಜಕ್ಕೆ, ಕ್ರೈಸ್ತ ಸಮುದಾಯಕ್ಕೆ, ಎಷ್ಟರ ಮಟ್ಟಿಗೆ ಕೊಡಲು ಸಾಧ್ಯವಾಗುತ್ತದೆಯೋ ಅಷ್ಟು ನಾನು ಪ್ರಯತ್ನಿಸುತ್ತೇನೆಂದು ತಿಳಿಸಿದರು.
ಬಳಿಕ ಸನ್ಮಾನ ಸ್ವೀಕರಿಸಿದಂತಹ ಇನ್ನೊರ್ವ ಶಿಕ್ಷಕ ಆರ್‌. ಟಿ. ನಾಯಕ ಸರಕಾರಿ ಪ್ರೌಢಶಾಲೆ, ಹಡಿನಬಾಳ ಇವರು ಸನ್ಮಾನ ಸ್ವೀಕರಿಸಿ, ತಮ್ಮ ಊರಿನಲ್ಲಿ ಕಳೆದ 24 ವರ್ಷಗಳಿಂದ ಸೇವೆ ನೀಡುತ್ತಾ ಬಂದಿರುತ್ತೇನೆ. ನನ್ನ ಶಿಕ್ಷಕ ವೃತ್ತಿಗೆ ತಾವು ಸಹಾಯ ಮಾಡುತ್ತಾ ಬಂದಿರುವುದೇ ಇದು ನನಗೆ ಕೊಟ್ಟ ದೊಡ್ಡ ಸನ್ಮಾನವಾಗಿದೆ. ಆದರೂ ಸಹ ಸೆಂಟ್‌ ಜೋನ್‌ ಬ್ಯಾಪ್ಟಿಸ್ಟ್‌ ಇವರ ಜನ್ಮ ದಿನದ ಅಂಗವಾಗಿ ನಾಡ ದೋಣಿ ಸ್ಪರ್ಧೆಯ ಸಭೆಯಲ್ಲಿ ನನ್ನನ್ನು ತಾವು ಗುರುತಿಸಿದಿರಿ. ಈ ಕಲೆ ಚೆನ್ನಾಗಿ ನಡೆಸಿ ಮುಂದಿನ ದಿನಗಳಲ್ಲಿ ಎಲ್ಲರು ಇದರ ಸವಿಯನ್ನು ಸ್ವೀಕರಿಸಲೆಂದು ತಿಳಿಸಿದರು. ದೋಣಿ ಸ್ಪರ್ಧೆಯ ಬಳಿಕ ಜೋನಿ ಮಿರಾಂದ ಸ್ಪರ್ಧಾಳುಗಳ ಪರವಾಗಿ ತಮ್ಮ ಅನುಭವ ಹಂಚಿಕೊಂಡಿದರು. ಕಾರ್ಯಕ್ರಮದಲ್ಲಿ ಬಳಕೂರ ಸೈಮನ್‌ ರೊಡ್ರಿಗಿಸ್‌ ಹಾಜರಿದ್ದರು. ಕಾರ್ಯಕ್ರಮದಲ್ಲಿ ಬಂದತಹ ಎಲ್ಲರಿಗೂ ಕಮಿಟಿಯ ಅಧ್ಯಕ್ಷರಾದ ಹೆಂಡ್ರಿಕ್‌ ರೊಡ್ರಿಗಿಸ್‌ರವರು ನೆನಪಿನ ಕಾಣಿಕೆ ನೀಡಿದ್ದರು.
ಈ ಸ್ಪರ್ಧೆಯಲ್ಲಿ 8 ನಾಡದೋಣಿಗಳು ಭಾಗವಹಿಸಿದ್ದು, ಸೆಂಟ್‌ ಫ್ರಾನ್ಸಿಸ್‌ ಎ. ತಂಡ ಸತತ 3ನೇ ಬಾರಿಗೆ ಪ್ರಥಮ ಸ್ಥಾನ ಪಡೆದರೆ ಸೆಂಟ್‌ ಜೋನ್‌ ಬ್ಯಾಪ್ಟಿಸ್ಟ್‌ ಎ ಹಾಗೂ ಬಿ ತಂಡ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿಕೊಂಡರು. ಉಳಿದ 5 ತಂಡದವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಹೆಂಡ್ರಿಕ್‌ ರೊಡ್ರಿಗಿಸ್‌ರವರು ಸ್ವಾಗತಿಸಿದರು. ಸಂಘದ ಸದಸ್ಯರಾದ ಪ್ರಕಾಶ ಡಾಯಸ ವಂದಿಸಿದರು. ಸುರೇಶ ಲೋಪಿಸ್‌ ಕಾರ್ಯಕ್ರಮ ನಿರ್ವಹಣೆ ಮಾಡಿದರು.

loading...