ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಭಾರಿ ಮಳೆ – ಹಲವೆಡೆ ನಿಂತ ನೀರು, ಉರುಳಿದ ಬೃಹತ್ ಮರಗಳು

0
16
loading...

ತುಮಕೂರು: ಮಕೂರು ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನದಿಂದ ತಡ ರಾತ್ರಿವರೆಗೆ ಭಾರಿ ಮಳೆಯಾಗಿದ್ದು, ಹಲವೆಡೆ ಹಾನಿಯುಂಟಾಗಿದೆ.
ಗುಬ್ಬಿ ರೈಲ್ವೆ ಸೇತುವೆ ಕೆಳಗೆ ನಿಂತ ನೀರಿನಲ್ಲಿ ಜೀಪ್ ಮುಳುಗಿದೆ. ಬಳ್ಳಾರಿಯಲ್ಲಿ ಮರಗಳು ವಾಹನಗಳ ಮೇಲೆ ಬಿದ್ದಿವೆ. ಮರದ ಕೆಳಗೆ ಬೈಕ್ ನಿಲ್ಲಿಸಿದ್ದ ದಂಪತಿ ಅಪಾಯದಿಂದ ಪಾರಾಗಿದ್ದಾರೆ.
ತುಮಕೂರು ನಗರದಲ್ಲಿ ಹಾಗು ಮಧುಗಿರಿ ತಾಲೂಕಿನ ಕೊಡುಗೇನಹಳ್ಳಿ ಹೋಬಳಿ, ತಿಪಟೂರು ತಾಲೂಕು, ಚಿಕ್ಕನಾಯಕನಹಳ್ಳಿ, ಗುಬ್ಬಿ ಮತ್ತು ತುರುವೇಕೆರೆಯಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ಹಲವೆಡೆ ಹಾನಿಯುಂಟಾಗಿದೆ.
ಚಿಕ್ಕನಾಯಕನಹಳ್ಳಿ ಮತ್ತು ಕುಣಿಗಲ್ ನಲ್ಲಿ ರಾತ್ರಿ ಅಲ್ಪ ಪ್ರಮಾಣದಲ್ಲಿ ಮಳೆ ಬಂದಿದೆ. ರಾತ್ರಿ ದೊಡ್ಡ ಪ್ರಮಾಣದಲ್ಲಿ ಮಳೆ ಆಗಿಲ್ಲ. ಗುಬ್ಬಿ ತಾಲೂಕಿನಲ್ಲಿ ನಿನ್ನೆ ಮಧ್ಯಾಹ್ನ ಮತ್ತು ರಾತ್ರಿ ಮಳೆಗೆ ಗುಬ್ಬಿಯ ರೈಲ್ವೆ ಕೆಳಸೇತುವೆಯೊಂದರಲ್ಲಿ ನೀರು ಸಂಗ್ರಹವಾಗಿದ್ದು, ನೀರಿನಲ್ಲಿ ಜೀಪ್ ಸಿಕ್ಕಿಕೊಂಡಿದೆ.
ಬಳ್ಳಾರಿಯಲ್ಲಿ ರಾತ್ರಿಯ ಗಾಳಿ- ಮಳೆಯಿಂದ ಬೃಹತ್ ಮರ ಉರುಳಿ ಗಾಂಧಿನಗರದ ಎರ್ರಿತಾತಾ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದು, ಶಾಲೆಗೆ ತೆರಳುತ್ತಿದ್ದ ಬಾಲಕ ದಿಕ್ಕು ತೋಚದೆ ನಿಂತು ನೋಡುತ್ತಿದ್ದ ದೃಶ್ಯ ಇಂದು ಬೆಳಿಗ್ಗೆ ಕಂಡುಬಂತು.
ಇಲ್ಲಿನ ಶಾಸ್ತ್ರಿ ನಗರದಲ್ಲಿ ಮಳೆ-ಗಾಳಿಗೆ ಬೃಹತ್ ಮರವೊಂದು ಬೈಕ್ ಮೇಲೆ ಉರುಳಿ ಬಿದ್ದಿದೆ. ಈ ಬೈಕ್ ನಲ್ಲಿ ಬಂದ ದಂಪತಿ ಕೆಲವು ನಿಮಿಷಗಳ ಮುನ್ನ ಮರದ ಹಿಂಭಾಗದ ಮನೆಯಲ್ಲಿ ಆಶ್ರಯ ಪಡೆದಿದ್ದರಿಂದ ಅಪಾಯ ತಪ್ಪಿದೆ.

loading...