ದಾಂಡೇಲಿಯ ಹಾರುಬೂದಿ ಮಾಫಿಯಾ: ಕ್ರಮಕ್ಕೆ ಅರುಣಾದ್ರಿ ಆಗ್ರಹ

0
12
loading...

ಕನ್ನಡಮ್ಮ ಸುದ್ದಿ-ಕಾರವಾರ: ದಾಂಡೇಲಿ ಪೇಪರ್‌ ಮೀಲ್‌ನ ಹಾರುಬೂದಿಯ ಕೃತಕ ಅಭಾವವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಠಿಸುತ್ತಿದ್ದು ಇದು ಹಾರುಬೂದಿಯಿಂದ ಇಟ್ಟಿಗೆ ತಯಾರಿಕಾ ಕಾರ್ಖಾನೆ ನಡೆಸುತ್ತಿರುವವರಿಗೆ ಸಮಸ್ಯೆ ತಂದೊಡ್ಡಿದ್ದು, ಉದ್ಯಮವನ್ನೇ ಮುಚ್ಚುವ ಸ್ಥಿತಿ ಬಂದೊದಗಿದೆ ಎಂದು ದಾಂಡೇಲಿಯ ಹಾರುಬೂದಿಯಿಂದ ಇಟ್ಟಿಗೆ ತಯಾರಿಕಾ ಉದ್ಯಮದ ಅರುಣಾದ್ರಿ ರಾವ್‌ ಆರೋಪಿಸಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರುಣಾದ್ರಿಯವರು ಕೆಲ ವರ್ಷಗಳ ಹಿಂದೆ ದಾಂಡೇಲಿ ಪೇಪರ್‌ ಮೀಲ್‌ಗೆ ಈ ಹಾರುಬೂದಿಯನ್ನು ವಿಲೇವಾರಿ ಮಾಡುವುದೇ ದೊಡ್ಡ ತಲೆನೋವಾಗಿತ್ತು. ಈ ದೃಷ್ಠಿಯಿಂದ ಸರ್ಕಾರವು ದಾಂಡೇಲಿಯಲ್ಲಿ ಹಾರುಬೂದಿಯಿಂದ ತಯಾರಿಸುವ ಇಟ್ಟಿಗೆ (ಬ್ರಿಕ್ಸ್‌) ಉದ್ಯಮಕ್ಕೆ ಉತ್ತೇಜನ ನೀಡಿತ್ತು. ಈಗ ಹಾಲಿ ದಾಂಡೇಲಿಯಲ್ಲಿ 12 ಇಟ್ಟಿಗೆ ಉದ್ಯಮ ನಡೆಯುತ್ತಿದ್ದು ಇದರಲ್ಲಿ ಸುಮಾರು ಐದನೂರು ಹೆಚ್ಚು ಜನ ಕಾರ್ಮಿಕರು ದುಡಿಯುತ್ತಿದ್ದು ಇವರೆಲ್ಲಾ ಈ ಉದ್ಯಮವನ್ನೆ ನಂಬಿ ಬದುಕುತ್ತಿದ್ದಾರೆ. ಆದರೆ ಇತ್ತಿಚೇಗೆ ಕೆಲ ಪ್ರಭಾವಶಾಲಿ ವ್ಯಕ್ತಿಗಳು ಈ ಉದ್ಯಮದಲ್ಲಿ ಪ್ರವೇಶಿಸಿ ನಿಧಾನವಾಗಿ ಹಾರುಬೂದಿಯ ಪೂರೈಕೆಯ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಈ ವ್ಯಕ್ತಿಗಳು ಕಾರ್ಖಾನೆಯ ಎಲ್ಲಾ ಹಾರುಬೂದಿಯನ್ನು ದೂರದ ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿ ನಂತರ ಅದನ್ನು ದೂರದ ಹುಬ್ಬಳ್ಳಿ ಮತ್ತಿತರೆಡೆ ಸಾಗಾಟ ನಡೆಸುತ್ತಿದ್ದಾರೆ. ಇದರಿಂದ ಈ ಹಾರುಬೂದಿಯನ್ನೇ ನಂಬಿಕೊಂಡಿರುವ ಸ್ಥಳೀಯ ಉದ್ದಿಮೆಗಳು ಮುಚ್ಚುವ ಭೀತಿ ಎದುರಿಸುತ್ತಿದೆ ಎಂದು ಅವರು ಆರೋಪಿಸಿದರು. ದೇಶದದ ಎಲ್ಲಾ ಭಾಗಗಳಲ್ಲೂ ವಿವಿಧ ಕಾರ್ಖಾನೆಗಳು ಉತ್ಪಾದಿಸುವ ಹಾರುಬೂದಿಗಳನ್ನು ಕಡ್ಡಾಯವಾಗಿ ಹಾರುಬೂದಿಯನ್ನು ಬಳಸುವ ಸ್ಥಳೀಯ ಉದ್ಯಮಗಳಿಗೆ ಪೂರೈಸಲೇಬೇಕು ಎಂದು ಕೇಂದ್ರಸರ್ಕಾರದ ಗೆಜೇಟ್‌ ಅಧಿಸೂಚನೆಯಲ್ಲಿ ಹೇಳಿದೆ. ಆದರೆ ದಾಂಡೇಲಿಯ ಕೆಲ ಸ್ಥಾಪಿತ ಹಿತಾಸಕ್ತಿಗಳು ಕಾನೂನನ್ನೆ ಗಾಳಿಗೆ ತೂರಿ ಹಾರಿಬೂದಿಯನ್ನು ಅಕ್ರಮವಾಗಿ ಸಂಗ್ರಹಿಸಿ ಬೇರೆಡೆ ಮಾರುತ್ತಿದ್ದಾರೆ ಎಂದು ಅರುಣಾದ್ರಿ ರಾವ್‌ ಆರೋಪಿಸಿದರು.
ಈ ಬಗ್ಗೆ ಈಗಾಗಲೇ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಈಗ ನೇರವಾಗಿ ಹಾರುಬೂದಿಯನ್ನು ತಮ್ಮ ಪ್ಲಾಟ್‌ಗಳಲ್ಲಿ ಸಂಗ್ರಹಿಸುತ್ತಿದ್ದು ಸ್ಥಳೀಯ ಇಟ್ಟಿಗೆ ಉದ್ಯಮಗಳಿಗೆ ಹಾರುಬೂದಿಯ ಪೂರೈಕೆಯಾಗದಂತೆ ತಡೆಯೊಡ್ಡಿದ್ದಾರೆ. ಮೊದಲು ಪ್ರತಿ ಇಟ್ಟಿಗೆ ಕಾರ್ಖಾನೆಯಲ್ಲಿ ದಿನವೊಂದಕ್ಕೆ ಹತ್ತು ಸಾವಿರ ಇಟ್ಟಿಗೆ ತಯಾರಾಗುತ್ತಿದ್ದರೆ ಈಗ ಒಂದು ಸಾವಿರ ಇಟ್ಟಿಗೆ ಸಹ ಉತ್ಪಾದನೆ ಮಾಡುವುದು ಕಷ್ಟವಾಗಿದೆ. ಆದ್ದರಿಂದ ಕೂಡಲೇ ಅಕ್ರಮವಾಗಿ ಹಾರುಬೂದಿಯನ್ನುಉ ಸಂಗ್ರಹಿಸಿ ಕಾನೂನು ಮೀರಿ ಬೇರೆಡೆ ಸಾಗಾಟ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರುಣಾದ್ರಿ ರಾವ್‌ ಆಗ್ರಹಿಸಿದ್ದಾರೆ.

loading...