ದಿ.ಸಿದ್ದು ನ್ಯಾಮಗೌಡ ಒಬ್ಬ ಧೀಮಂತ ನಾಯಕರಾಗಿದ್ದರು : ವೀರಣ್ಣ

0
13
loading...

ಜಮಖಂಡಿ : ಜಮಖಂಡಿ ಶಾಸಕ ದಿ.ಸಿದ್ದು ನ್ಯಾಮಗೌಡರು ಬದುಕಿನ ಉದ್ದಕ್ಕೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅಭಿವೃದ್ಧಿಯ ಪಥದತ್ತ ಜಮಖಂಡಿ ತಾಲೂಕನ್ನು ಹೊಸ ಆಯಾಮದ ಕಡೆ ಕೊಂಡ್ಯೊದು ರೈತರ ಬಾಳಿಗೆ ಬೇಳಕಾಗಿ ರೈತರ ಶ್ರೇಯೊಭಿವೃದ್ದಿಯೆ ತಮ್ಮ ಗುರಿಯೆಂದು ತಿಳಿದು ದೇಶದಲ್ಲಿಯೆ ಮಾದರಿಯಾಗುವಂತಹ ಚಿಕ್ಕಪಡಸಲಗಿ ಬ್ಯಾರೇಜ ನಿರ್ಮಿಸಿ ಆಧುನಿಕ ಭಗಿರಥ ಎಂದು ಖ್ಯಾತ ಪಡೆದ ಧೀಮಂತ ನಾಯಕರಾಗಿದ್ದರು ಎಂದು ಮಾಜಿ ವಿಧಾನಪರಿಷತ್ ಸಭಾಪತಿ ವೀರಣ್ಣ ಮತ್ತಿಗಟ್ಟಿ ಹೇಳಿದರು.
ಅವರು ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ದಿ.ಸಿದ್ದು ನ್ಯಾಮಗೌಡರ ಶಿವಗಣರಾಧನೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮೇಲಿನಂತೆ ಮಾತನಾಡಿದರು. ಸಿದ್ದು ನ್ಯಾಮಗೌಡರು ಪ್ರಗತಿಯ ಹಾದಿಯಲ್ಲಿ ನಡೆದು ಯುವಕರಿಗೆ ಮಾರ್ಗದರ್ಶಕರಾಗಿದ್ದರು ಎಂದು ಬಣ್ಣಿಸಿದರು. ಮಾಜಿ ಸಂಸದ ಪ್ರೋ ಆಯ್ ಜಿ ಸನದಿ ಮಾತನಾಡಿ ತಮ್ಮ ಜೊತೆ ಲೋಕಸಭೆಯಲ್ಲಿ ಸಂಸದರಾಗಿ ಕೆಲಸ ಮಾಡಿದ್ದನ್ನು ಸ್ಮರಿಸಿದ ಅವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ರಾಷ್ಟ್ರಮಟ್ಟದಲ್ಲಿ ಬಿಂಬಿತಗೊಂಡಿದ್ದನ್ನು ಉಲ್ಲೆಖಿಸಿದರು. ತೇರದಾಳದ ಶಾಸಕ ಸಿದ್ದು ಸವದಿ ಮಾತನಾಡಿ ದಿ.ಸಿದ್ದು ನ್ಯಾಮಗೌಡರು ಒಬ್ಬ ಹೋರಾಟಗಾರರಾಗಿದ್ದರು ಅಲ್ಲದೆ ಅವರು ಹಠವಾದಿಯಾಗಿ ಹೀಡಿದ ಕೆಲಸವನ್ನು ಯಶಸ್ವಿಯಾಗುವ ವರೆಗೆ ಶ್ರಮಿಸಿ ನಾಡಿನ ಉದ್ದಕ್ಕೂ ಚೀರ ಪರಿಚಿತರಾಗಿದ್ದರು ಎಂದರು.

ಮುಧೋಳ ಶಾಸಕ ಗೋವಿಂದ ಕಾರಜೋಳ, ಮಾಜಿ ಸಚಿವೆ ಉಮಾಶ್ರೀ, ಮಾಜಿ ವಿಪ ಸದಸ್ಯ ಜಿ ಎಸ್ ನ್ಯಾಮಗೌಡ, ಕಾಡು ಮಾಳಿ, ಉದ್ಯಮಿ ಸಂಗಮೇಶ ನಿರಾಣಿ, ನಜೀರ ಕಂಗನೋಳ್ಳಿ, ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಅರ್ಜುನ ದಳವಾಯಿ, ನಗರಸಭಾ ಅಧ್ಯಕ್ಷ ರಾಜು ಪಿಸಾಳ, ಫಕೀರಸಾಬ ಬಾಗವಾನ, ಸುರೇಶಗೌಡ ಪಾಟೀಲ ಅಲ್ಲದೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದಿ.ಸಿದ್ದು ನ್ಯಾಮಗೌಡರ ಅಭಿಮಾನಿಗಳು ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ಹುಲ್ಯಾಳ ಯೋಗಾಶ್ರಮದ ಹರ್ಷಾನಂದ ಸ್ವಾಮಿಜಿಗಳು ಹಾಗೂ ಅನೇಕ ಹರ ಗುರು ಚರ ಮೂರ್ತಿಗಳು ವಹಿಸಿದ್ದರು.
ಪ್ರಾರಂಭದಲ್ಲಿ ರವಿ ಯಡಹಳ್ಳಿ ಸ್ವಾಗತಿಸಿದರು. ದಿ. ಸಿದ್ದು ನ್ಯಾಮಗೌಡರ ಸುಪುತ್ರರಾದ ಆನಂದ ಹಾಗೂ ಬಸವರಾಜ ನ್ಯಾಮಗೌಡ ಅವರು ಸರ್ವರಿಗೆ ಕೃತಜ್ಞತೆ ಸಲ್ಲಿಸಿದರು.

loading...