ದೇವಸ್ಥಾನ ಜೀರ್ಣೋಧಾರದ ವೇಳೆ ಇಟ್ಟಿಗೇಯ ಗರ್ಭ ಮಂಟಪ ಪತ್ತೆ

0
4
loading...

ಬ್ಯಾಡಗಿ: ತಾಲೂಕಿನ ಶಿಡೇನೂರು ಸಮೀಪದ ಪುರಾತತ್ವ ಇಲಾಖೆಯ ಶ್ವೀ ವೀರಭದ್ರೆಶ್ವರ ಹಾಗೂ ಕಲ್ಮೆಶ್ವರ ದೇವಸ್ಥಾನಗಳ ಜೀರ್ಣೋದ್ದಾರ ನಡೆಸುತ್ತಿದ್ದ ವೇಳೆ ಇಟ್ಟಿಗೆಯ ಗರ್ಭಮಂಟಪ ಪತ್ತೆಯಾಗಿದ್ದು, ಸಂಪೂರ್ಣ ಉತ್ಖನಗೊಳಿಸಿ ಇತಿಹಾಸ ಹೊರತೆಗೆಯಬೇಕಿದೆ ಎಂದು ಸಂಶೋಧಕ ಆರ್.ಎಂ. ಷಡಕ್ಷರಯ್ಯ ತಿಳಿಸಿದರು. ಶಾತವಾಹನ ಕಾಲದ ತ್ರಿಕೂಟ ಮಾದರಿ: ೬ ನೇ ಶತಮಾನದಲ್ಲಿ ನಿರ್ಮಿಸಿದ ಶಾತವಾಹನ ಕಾಲದ ಇಟ್ಟಿಗೆಯ ಗರ್ಭಮಂಟಪ ದೇವಸ್ಥಾನ ಜೀರ್ಣೋದ್ಧಾರ ವೇಳೆ ಪತ್ತೆಯಾಗಿದ್ದು, ಕೆಲ ಐತಿಹಾಸಿಕ ಕುರುಹುಗಳು ಲಭ್ಯವಾಗುವ ಸಂಭವವಿದೆ. ಶಾತವಾಹನ, ರಾಷ್ಟçಕೂಟರ, ಬನವಾಸಿ ಕದಂಬ, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ೬ ಕಾಲಘಟ್ಟದಲ್ಲಿ ನಿರ್ಮಿಸಿದೆ. ದೇವಸ್ಥಾನ ಕ್ರಿ.ಶ. ೨ ನೇ ಶತಮಾನದಿಂದ ೨೧ ಶತಮಾನದ ಆಸುಪಾಸಿನಲ್ಲಿ ಕಟ್ಟಡ ನಿರ್ಮಾಣವಾಗಿದೆ. ಉತ್ತರ ಕರ್ನಾಟಕ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಅಧ್ಯಯನಕ್ಕೆ ಹೊಸ ಪುರಾವೆಗಳು ಸಿಕ್ಕಂತಾಗಿದೆ. ಶಾತವಾಹನರ ಕಾಲದಲ್ಲಿ ಇಟ್ಟಿಗೆ ಕಟ್ಟಡ, ಗಡಿಗೆ, ಮಡಿಕೆಗಳನ್ನು ಬಳಕೆ ಮಾಡಲಾಗಿರುವುದು ಪತ್ತೆಯಾಗಿದೆ. ೩-೪ ಹಾಗೂ ೫-೬ ಶತಮಾನದಲ್ಲಿ ಗರ್ಭಮಂಟಪ ನಿರ್ಮಿಸಿರುವ ಸಾದ್ಯತೆಯಿದೆ. ತ್ರಿಕೂಟ ಮಾದರಿಯಲ್ಲಿರುವ ದೇವಸ್ಥಾನ ಗರ್ಭಗುಡಿ, ಶಿವಲಿಂಗ, ಸಭಾಮಂಟಪ, ಅಂತರಾಳ ಹೊಂದಿದೆ. ಬನವಾಸಿ ಕದಂಬರ ಕಾಲದ ಹಲಸಿಯಲ್ಲಿ ಉತ್ಖನನ ಜರುಗಿದಾಗ ದೊರೆತ ಇಟ್ಟಿಗೆಗಳಿಗೂ, ಇಲ್ಲಿನ ಇಟ್ಟಿಗೆಗಳು ಆಕಾರ, ರಚನೆ ಒಂದೆ ಹೋಲಿಕೆ ಕಂಡುಬಂದಿವೆ.

ಸಂಶೋಧಕರಿಗೆ ಮಾಹಿತಿ ಲಭ್ಯ: ರಾಷ್ಟçಕೂಟರ ಕಾಲದ ವೀರಗಲ್ಲು, ಮೂರು ಶಾಸನಗಳು, ಮಹಿಷಾಸುರ ಮರ್ಧಿನಿ ದೇವರ ಮೂರ್ತಿ, ಅರ್ಧಮಂಟಪ, ಗಡಿಗೆ, ಮಡಿಕೆ, ಗದ್ದುಗೆ, ಕೋಣನ ತಲೆ, ಅಭಿಷೇಕ ಭಾವಿ, ೬ ನೇ ಶತಮಾನದ ಕಲ್ಲಿನ ದೇವಸ್ಥಾನ, ಚಿಕ್ಕದಾದ ಕಲ್ಲಿನ ಮೂರ್ತಿಗಳು, ದೇವಸ್ಥಾನ ಗರ್ಭದಲ್ಲಿ ಸಿಕ್ಕಿರುವ ಮನುಷ್ಯನ ಮೂಳೆ ಇತಿಹಾಸ ಅಧ್ಯಯನ ಹಾಗೂ ಸಂಶೋಧಕರಿಗೆ ಇನ್ನಷ್ಟು ಸ್ಪೂರ್ತಿಯಾಗಲು ಸಾದ್ಯವಾಗಲಿದೆ. ಗರ್ಭಮಂಟಪ ರಹಸ್ಯ: ಎರಡು ವರ್ಷದ ಹಿಂದೆ ದೇವಸ್ಥಾನ ಮದ್ಯಮಂಟಪದಲ್ಲಿ ಕಲ್ಲಿನ ಕಂಬ ಒಡೆದು ನಿಧಿಯ ಸಲುವಾಗಿ ೪ ಅಡಿಯ ತಗ್ಗು ತೆಗೆದು ದುಷ್ಕೃತ್ಯ ನಡೆಸಿದ್ದರು. ಕೆಳಗೆ ಹಳೆಯ ಮಡಿಕೆಯ ಗುರುತು ಕಂಡುಬಂದಿತ್ತು ಎನ್ನಲಾಗಿದೆ. ದೇವಸ್ಥಾನದ ಬಳಿ ನಿಂಬೆಹಣ್ಣು, ಕುಂಕುಮ, ಅರಿಷಿನ, ಕೆಂಪುದಾರ ಇತರೆ ವಸ್ತುಗಳು ಕಂಡುಬಂದಿದ್ದವು. ಆಗ ನಿಧಿಗಾಗಿ ವಾಮಾಚಾರ ನಡೆದಿರಬಹುದೆಂದು ಎಲ್ಲೆಡೆ ಸುದ್ದಿ ಹರಡಿತ್ತು. ಈಗ ದೇವಸ್ಥಾನದ ಉತ್ತರ ದಿಕ್ಕಿಗೆ ೧೫ ನೂರು ವರ್ಷಗಳ ಇಟ್ಟಿಗೆಯ ಗರ್ಭಗುಡಿ ಲಭ್ಯವಾಗಿದೆ.
ಇಟ್ಟಿಗೆಯ ಕೆಳಗಡೆ ಏನು ಅಡಗಿದೆ..? ಏನಾದರೂ ದೇವರ ಮೂರ್ತಿಯಿದೆಯಾ..? ಎಂಬುದು ಕುತೂಹಲ ಹರಡಿದೆ. ದೇವಸ್ಥಾನ ಸಂಶೋಧನೆಯಾಗಲಿ: ಶಿಥಿಲಗೊಂಡ ಪುರಾತತ್ವ ಇಲಾಖೆಯ ಈ ದೇವಸ್ಥಾನಕ್ಕೆ ಮಾಜಿ ಶಾಸಕ ಬಸವರಾಜ ಶಿವಣ್ಣನವರ ಅಭಿಷೇಕ ಹೊಂಡದ ಜೀಣೋದ್ದಾರಕ್ಕೆ ೧೦ ಲಕ್ಷ, ಪುರಾತತ್ವ ಇಲಾಖೆ ೮೫ ಲಕ್ಷದ ಜೀಣೋದ್ದಾರ ಕಾಮಗಾರಿ ನಡೆದಿದೆ. ಆಗ ಇಟ್ಟಿಗೆಯ ಗರ್ಭಮಂಟಪ ಕಂಡಿದ್ದು, ಇನ್ನಷ್ಟು ಸಂಶೋಧನೆ ನಡೆಸುವಂತೆ ಕಲ್ವೆÃಶ್ವರ ಹಾಗೂ ವೀರಭದ್ರೆÃಶ್ವರ ದೇವಸ್ಥಾನ ಟ್ರಸ್ಟ ಅಧ್ಯಕ್ಷ ಪರಮೇಶಪ್ಪ ತೆವರಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆ ಇಂಜಿನೀಯರ್ ವಾಸುದೇವ, ಪ್ರೊÃ. ಈರಣ್ಣ ಪತ್ತಾರ, ಎಂ.ಎಂ.ಅಕ್ಕಿ, ಡಾ. ಎಲ್.ಜಿ.ಮಾರುತಿ, ಸೈನಿಕ ರುದ್ರಪ್ಪ ನಂದಿಹಳ್ಳಿ, ನಾಗನಗೌಡ್ರ ತೆವರಿ ಇದ್ದರು. ಶಿವಾನಂದ ಬೆನ್ನೂರು, ಸಿ.ಎಸ್.ಹಸನಬ್ಬ, ಎಸ್.ಕೆ.ಮೇಲಕಾರ, ಮಂಜುಳಾ ಎಸ್.ಎ, ರಾಮಣ್ಣ ಕೆ, ಸಂತೋಷ ಎಂ. ಹನುಮಂತಪ್ಪ ದೊಡ್ಡಮನಿ ಇದ್ದರು.

loading...