ದ್ರಾಕ್ಷಿ, ಲಿಂಬೆ ಬೆಳೆ ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು

0
6
loading...

ವಿಜಯಪುರ: ಅಡಿಕೆ ಬೆಳೆಗಾರರಿಗೆ ದೊರಕುವ ಸೌಲಭ್ಯಗಳ ಮಾದರಿಯಲ್ಲಿಯೇ ದ್ರಾಕ್ಷಿ ಬೆಳೆಗಾರರಿಗೂ ವಿಶೇಷ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನೂತನ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಭರವಸೆ ನೀಡಿದರು.
ತೋಟಗಾರಿಕಾ ಸಚಿವರಾಗಿ ಪ್ರಥಮ ಬಾರಿಗೆ ವಿಜಯಪುರಕ್ಕೆ ಭೇಟಿ ನೀಡಿ ರವಿವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಪ್ರಕಟಿಸಿದ ಅವರು, ರೈತ ಕುಟುಂಬದಿಂದ ಬಂದ ನನಗೆ ರೈತರ ಕಷ್ಟ ಏನು ಎಂಬುದು ಗೊತ್ತಿದೆ. ರಾಜ್ಯದಲ್ಲಿ ಅಂದಾಜು 30 ಲಕ್ಷ ರೈತರು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿz್ದÁರೆ. ಸುಮಾರು 21 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ತೋಟಗಾರಿಕೆ ವ್ಯಾಪ್ತಿಗೊಳಪಡಲಿದೆ ಎಂದರು.

ಪ್ರಮುಖವಾಗಿ ದ್ರಾಕ್ಷಿ, ಲಿಂಬೆ, ದಾಳಿಂಬೆ ಬೆಳೆ ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಜತೆಗೆ ಪ್ರಾದೇಶಿಕತೆಗನುಗುಣವಾಗಿ ಆಯಾ ಜಿಲ್ಲಾವಾರು ಸಭೆ ನಡೆಸಿ ರೈತರ ಬೇಡಿಕೆಗಳ ಈಡೇರಿಕೆಗೆ ಶ್ರಮಿಸುವುದಾಗಿ ತಿಳಿಸಿದರು.
ಇಲಾಖೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಿ ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳು, ಅಭಿವೃದ್ಧಿ ಕಾರ್ಯಗಳ ಕುರಿತು ಕಾರ್ಯಯೋಜನೆ ರೂಪಿಸುತ್ತೇನೆ ಎಂದರು. ಈ ಹಿಂದೆ ತೋಟಗಾರಿಕೆ ಬೆಳೆಗೆ ಇಷ್ಟೊಂದು ಪ್ರಮಾಣದಲ್ಲಿ ಉತ್ತೇಜನ ಇರಲಿಲ್ಲ. ಇಂದು ಸಾಕಷ್ಟು ಯೋಜನೆಗಳು ಜಾರಿಯಲ್ಲಿವೆ. ವಿಜಯಪುರ ಜಿ¯್ಲÉ ಇಂಡಿ ಮತ್ತು ಸಿಂದಗಿ ತೋಟಗಾರಿಕೆ ಬೆಳೆಯಲ್ಲಿ ಮುಂಚೂಣಿಯಲ್ಲಿದೆ. ಲಿಂಬೆ ದಾಳಿಂಬೆ ಬೆಳೆಗೆ ಹೆಸರುವಾಸಿಯಾಗಿದ್ದು ಆ ರೈತರಿಗೆ ಉತ್ತೇಜನ ನೀಡುವುದಾಗಿ ತಿಳಿಸಿದರು.

ವಿಜಯಪುರ ಬರದ ಜಿ¯್ಲÉಯಾದ್ದರಿಂದ ತೋಟಗಾರಿಕೆ ಖಾತೆ ಇಲ್ಲಿಗೆ ನೀಡಲಾಗಿದೆ. ಲಿಂಬೆ ಅಭಿವೃದ್ಧಿ ಮಂಡಳಿಗೆ ಉತ್ತೇಜನ ನೀಡಲಾಗುವುದು. ಹೆಚ್ಚಿನ ಹಣಕಾಸು ಸೌಲಭ್ಯ ಒದಗಿಸಿ ಲಿಂಬೆ ಬೆಳೆಗಾರರ ಸಂಕಷ್ಠ ನಿವಾರಿಸಲಾಗುವುದು. ಪ್ರತೀ ಜಿ¯್ಲÉಗೆ ಭೇಟಿ ನೀಡಿ ಅಲ್ಲಿನ ಪ್ರಾದೇಶಿಕ ಬೆಳೆಗಳನ್ನು ಪರಿಗಣಿಸಿ ಪೆÇ್ರೀತ್ಸಾಹ ನೀಡಲಾಗುವುದು. ಪ್ರತೀ ಜಿ¯್ಲÉಯಿಂದ ರೈತರ ತಂಡಗಳನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುವುದು.
ಡಾ.ರಿಯಾಜ್ ಫಾರೂಕಿ, ಅಪ್ಪುಗೌಡ ಪಾಟೀಲ ಮನಗೂಳಿ, ಚಂದ್ರಕಾಂತ ಹಿರೇಮಠ, ಮಲ್ಲಿಕಾರ್ಜುನ ಯಂಡಿಗೇರಿ, ಬಾಗಾಯತ, ಎಸ್.ಎಸ್. ಖಾದ್ರಿ ಇನಾಮದಾರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

loading...