ನಗರದ ಸ್ವಚ್ಛತೆ ಕಾಪಾಡುವಂತೆ ಶಿವ ಸೇನೆ‌ಯಿಂದ ಪಾಲಿಕೆ ಅಯುಕ್ತರಿಗೆ ಮನವಿ

0
29
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದಲ್ಲಿ ಚಿಕ್ಕನ್ ಗುನ್ಯಾ ಸೇರಿದಂತೆ ಹಲವು ಕಾಯಿಲೆಗಳು ಹರಡುತ್ತಿರುವುದರಿಂದ ಮಹಾನಗರ ಪಾಲಿಕೆಯು ನಗರದ ಸ್ವಚ್ಚತಾ ಕಾಪಾಡಬೇಕೆಂದು ಆಗ್ರಹಿಸಿ ಶಿವ ಸೇನೆ ವತಿಯಿಂದ ಪಾಲಿಕೆ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿದರು.

ನಗರದಲ್ಲಿ ಮಳೆ ಆರಂಭವಾಗುತ್ತಿರುವುದರಿಂದ ಅಸ್ವಚ್ಛತೆಯಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡು ಸಾಧ್ಯತೆ ಗಳು ಹೆಚ್ಚಿದೆ. ಆದ್ದರಿಂದ ನಗರದಲ್ಲಿ ಗಟಾರ, ಕೊಳಚೆ ಪ್ರದೇಶವನ್ನು ಸ್ವಚ್ಛವಾಗಿ ಹಾಗು ಪಾಲಿಕೆ ವತಿಯಿಂದ ಜಾಗೃತಿ ಮೂಡಿಸುವ ಮೂಲಕ  ನಗರದ ಸ್ವಚ್ಛವಾಗಿಡುವ ಕಾರ್ಯಗಳನ್ನು‌ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ ಸಿರೋಳಕರ, ತಾಲೂಕ ಪ್ರಮುಖ ಸಚಿನ ಗೊರಳೆ,ತಾನಾಜಿ ಔಸೇ, ರವೀಂದ್ರ ತೆಜಾಮ್, ಸುನೀಲ ಪಾಟೀಲ, ಮನೋಹರ ಹಟ್ಟಿಕರ, ಸಿದ್ಧಾರ್ಥ ಪಾಟೀಲ, ಪ್ರಕಾಶ ರಾವುತ್, ಸುನೀಲ ದೇಸುರಕರ, ವಿಜಯ ಮೂರ್ಖಟೆ, ಬಾಳಾ ಡಂಗರಲೆ, ಪ್ರದೀಪ ಸುತಾರ, ರಾಜು ಕನ್ನೇರಿ,ಮಹೇಶ ಸಿಂದೆ ಸೇರಿದಂತೆ ಶಿವ ಸೇನೆ ಸದಸ್ಯರು ಇದ್ದರು.

loading...