ನನಗೆ ಸಚಿವ ಸ್ಥಾನದ ಭರವಸೆ ಇದೆ – ಜಮೀರ್ ಅಹಮದ್

0
21
loading...

ಬೆಂಗಳೂರು: ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನನಗೆ ಈ ವಿಷಯ ತಿಳಿಸಿದ್ದಾರೆ ಎಂದು ಶಾಸಕ ಜಮೀರ್ ಅಹಮದ್ ತಿಳಿಸಿದ್ದಾರೆ.
ಸದಾಶಿವನಗರದ ಡಾ. ಜಿ. ಪರಮೇಶ್ವರ್ ನಿವಾಸಕ್ಕೆ ಇಂದು ಭೇಟಿಕೊಟ್ಟು ಸಮಾಲೋಚಿಸಿ ತೆರಳುವ ಮುನ್ನ ಮಾತನಾಡಿದ ಅವರು, ಅಲ್ಪಸಂಖ್ಯಾತ ಕೋಟಾದಡಿ ನನಗೆ ಸಚಿವ ಸ್ಥಾನ ಸಿಗಲಿದೆ. ಅದು ಪಕ್ಕಾ ಆಗಿದೆ. ನಾನಲ್ಲದೇ ಯು.ಟಿ. ಖಾದರ್ ಕೂಡ ಸಚಿವರಾಗುವ ಸಾಧ್ಯತೆ ಇದೆ. ಜೆಡಿಎಸ್ ಕಡೆಯಿಂದ ಯಾರು ಆಗುತ್ತಾರೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಜತೆ ಕಾರ್ಯನಿರ್ವಹಿಸುವ ಬಗ್ಗೆ ಮಾತನಾಡಿ, ಮೊದಲಿನಿಂದಲೂ ನಮ್ಮಲ್ಲಿ ದೋಸ್ತಿ ಇತ್ತು. ಖಂಡಿತ ಅವರು ನಮ್ಮ ನಾಯಕರು, ಅವರ ನೇತೃತ್ವದಲ್ಲೇ ನಾವು ಹೋಗಬೇಕು. ನಾವು ಅವರೊಂದಿಗೆ ಕೆಲಸ ಮಾಡಬೇಕು. ಇತ್ತೀಚೆಗೆ ಕೂಡ ಅವರೊಂದಿಗೆ ಸಮಾಲೋಚಿಸಿದ್ದೇನೆ. ಅವರು ಮುಖ್ಯಮಂತ್ರಿ ಆಗಿರುವುದರಿಂದ ಅವರ ಕೈಕೆಳಗೆ ಕೆಲಸ ಮಾಡುತ್ತೇನೆ. ಸದ್ಯ ಸಚಿವರಾಗುವುದು ಖಚಿತವಾಗಿದೆ. ಖಾತೆ ಯಾವುದು ಎನ್ನುವುದು ತಿಳಿದಿಲ್ಲ ಎಂದರು.
ಇಂದು ನಾನು ಜೆಡಿಎಸ್ ನಲ್ಲಿ ಇದ್ದರೂ ಅವಕಾಶ ಸಿಗುತ್ತಿತ್ತು. ಕಾಂಗ್ರೆಸ್ ನಲ್ಲಿಯೂ ಸಿಕ್ಕಿದೆ ಎಂದು ಜಮೀರ್ ಅಹಮದ್ ಹೇಳಿದರು.
ಸಂಭಾವ್ಯ ಸಚಿವರಾದ ಡಿ.ಕೆ. ಶಿವಕುಮಾರ್ ಕೂಡ ಉಪಮುಖ್ಯಮಂತ್ರಿ ಹಾಗು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ.

loading...