ನಮ್ಮ ನಡಿಗೆ, ಚೆನ್ನಮ್ಮನ ನಾಡಿಗೆ ಎಂಬ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ

0
22
loading...

ಹುನಗುಂದ: ವೀರಶೈವ ಲಿಂಗಾಯತ ಪಂಚಮಶಾಲಿ ಜಗದ್ಗುರು ಪೀಠ_ಹರಿಹರದ ನೂತನ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಗಳವರು ಮೇ 31 ರಿಂದ ಹರಿಹರದಿಂದ ಪ್ರಾರಂಭ ಮಾಡಿರುವ ದರ್ಮ ಜಾಗ್ರೃತಿ ಕಾರ್ಯಕ್ರಮ ಹಾಗೂ ನಮ್ಮ ನೆಡಗೆ, ಚೆನ್ನಮ್ಮನ ನಾಡಿಗೆ ಎಂಬ ಸದ್ಭಾವನಾ ಪಾದಯಾತ್ರೆಯ ಮೂಲಕ ಸಮಾಜ ಸೇವೆಗೆ ಸಂಕಲ್ಪ ಮಾಡಿದ್ದು ಈ ಪಾದಯಾತ್ರೆಯು ಹೊಸಪೇಟೆ ರಾಣೆಬೆನ್ನೂರ, ಮೊಟೆಬೆನ್ನೂರ, ಹಾವೇರಿ, ಬಂಕಾಪೂರ, ಶಿಗ್ಗಾಂವ, ತಡಸ, ಹುಬ್ಬಳಿ, ದಾರವಾಡ, ಕಿತ್ತೂರ ಮಾರ್ಗವಾಗಿ ಬೈಲಹೊಂಗಲ ತಲುಪಲಿದ್ದು ಜೂನ 10 ರಂದು ವೀರಮಾತೆ ರಾಣಿ ಚೆನ್ನಮ್ಮಾಜಿಯ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಬೃಹತ್ ಪಂಚಮಶಾಲಿ ಸಮಾವೇಶ ನಡೆಯಲಿದ್ದು ಸಮಾಜ ಬಾಂಧವರು ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಶಾಲಿ ಸಮಾಜದ ರಾಜ್ಯ ಖಜಾಂಚಿ ಮಲ್ಲಣ್ಣ ಬಮಸಾಗರ ಮನವಿ ಮಾಡಿದ್ದಾರೆ.
ಅವರು ನಗರದ ಬಸವ ಮಂಟಪದ ಆವರಣದಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಪೂಜ್ಯ ಶ್ರೀ ವಚನಾನಂದ ಮಹಾಸ್ವಾಮೀಗಳು ಎಪ್ರಿಲ್ 20 ರಂದು ಹರಿಹರದಲ್ಲಿ ಜಗದ್ಗುರು ಪೀಠವನ್ನು ಅಲಂಕರಿಸಿದ್ದು ನಮ್ಮ ಸಮಾಜದ ಭಾಗ್ಯದ ಬಾಗಿಲು ತೆರೆದಂತಾಗಿದೆ ಎಂದರು.
ಪಂಚಮಶಾಲಿ ಸಮಾಜದ ತಾಲೂಕಾ ಪ್ರಧಾನಕಾರ್ಯದರ್ಶಿ ಅಶೋಕ ಭಾವಿಕಟ್ಟಿ ಮಾತನಾಡಿ ಸ್ವಾಭಿಮಾನ, ಸ್ವಾವಲಂಬನೆ, ಸಹಕಾರ, ಸಹಬಾಳ್ವೆ, ಸಂಘಟನೆ ಎಂಬ ಪಂಚ ತತ್ವದ ಮೇಲೆ ಸಮಾಜವನ್ನು ಕಟ್ಟಲು ಕಂಕಣಬಧ್ಧರಾಗಿರುವ ಶ್ರೀ ವಚನಾನಂದ ಸ್ವಾಮೀಜಿಯವರ ಸಂಕಲ್ಪವನ್ನು ಯಶಸ್ವಿಗೊಳಿಸಲು ಹುನಗುಂದ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ತಾಲುಕಾ ಪಂಚಾಯತ ಸದಸ್ಯ ಅನೀಲ ನಾಡಗೌಡ, ರಾಜ್ಯ ಹರಸೈನ್ಯ ಅಧ್ಯಕ್ಷ ಸಣ್ಣಪ್ಪ ಹೊರಪ್ಯಾಟಿ, ಜಿಲ್ಲಾ ನೌಕರರ ಘಟಕದ ಅಧ್ಯಕ್ಷ ಶಂಕರಪ್ಪ ತಾಳಿಕೊಟಿ, ತಾಲೂಕಾ ಅಧ್ಯಕ್ಷ ಗುರಪ್ಪ ಹಕಾರಿ, ಮುಖಂಡರಾದ ಎಮ್.ಜಿ.ಪಾಟೀಲ, ಮಹಾಂತೇಶ ಸುಂಕದ, ಶರಣಪ್ಪ ನೆಟೆಕಟ್ಟಿ ಉಪಸ್ಥಿತರಿದ್ದರು.

loading...