ನಾಟಕಗಳು ಸಂದೇಶ ನೀಡುವ ಉದ್ದೇಶ ಇರಬೇಕು

0
11
loading...

ವಿಜಯಪುರ: ಒಂದು ಪ್ರಯೋಗ ಪ್ರತಿ ಪ್ರದರ್ಶನ ಒಂದು ಪ್ರಯೋಗದಂತಿರಬೇಕು ಇದರಿಂದ ಪ್ರಯೋಗಶೀಲತೆಯನ್ನು ಹೆಚ್ಚಿಸಕೊಳ್ಳಲು ಅನುಕೂಲವಾಗುತ್ತದೆ. ನಾಟಕಗಳು ಮನರಂಜನೆ ಜೊತೆಗೆ ಸಂದೇಶ ನೀಡುವ ಉದ್ದೇಶವಾಗಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಬಿ.ಲೊಕೇಶ ಹೇಳಿದರು.
ನಗರದ ಶ್ರೀ ಕುಮಾರೇಶ್ವರ ನಾಟ್ಯ ಸಂಘದ ರಂಗಮಂದಿರದಲ್ಲಿ ಬುಧವಾರ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ವೃತ್ತಿ ರಂಗಭೂಮಿ ನಾಟಕೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಾವಿದರ ಹಿತ ದೃಷ್ಠಿಯಿಂದ ಜಿಲ್ಲೆಗೊಂದು ನಾಟಕ ಪ್ರಾಧಿಕಾರ ರಚನೆಯಾಗಬೇಕು. ಜಿಲ್ಲೆಗೊಂದ ನಾಟಕ ಪ್ರಾಧಿಕಾರ ರಚನೆಯಾಗಬೇಕು. ಅದರ ಸಂಪೂರ್ಣ ಹಕ್ಕು ಸದಸ್ಯ ಕಲಾವಿದರಿಗೆ ಇರಬೇಕು. ಅಂದಾಗ ಮಾತ್ರ ರಂಗ ಭೂಮಿ ನಿರಂತರ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಮಾಸ್ತ ಮಾತನಾಡಿ, ನಾಟಕ ಆಸಕ್ತಿ ಮೂಡಿಸುವಂತಹದು. ವೃತ್ತಿ ರಂಗಭೂಮಿಯಲ್ಲಿಯೂ ಹಳೆ ನಾಟಕಗಳು ಆಡಿಸಲ್ಪುಡುತ್ತಿವೆ. ಹೊಸ ನಾಟಕಗಳು ಬರಬೇಕು. ರಂಗಭೂಮಿ ಒಂದೇ ವೃತ್ತಿ, ಹವ್ಯಾಸ ಒಂದೇ. ಇಂದಿನ ಕಾಲಘಟ್ಟದಲ್ಲಿ ರಂಗಭೂಮಿಯ ದಿಕ್ಸೂಚಿಗಳು ನಮ್ಮಲ್ಲಿರುವ ಒತ್ತಡದಲ್ಲಿ ಸೃಜನಶೀಲ ಶಕ್ತಿಯೊಂದು ನಾಟಕ ಕೆಲಸ ಮಾಡುತ್ತದೆ. ಎಲ್ಲರೂ ನಾಟಕಗಳನ್ನು ನೋಡಿ ಆನಂದಿಸಬೇಕು ಎಂದರು.

ಇತಿಹಾಸ ಸಂಶೋಧಕ ಡಾ. ಎ.ಎಲ್. ನಾಗೂರ ಮಾತನಾಡಿ, ಹವ್ಯಾಸಿ, ವೃತ್ತಿ ರಂಗಭೂಮಿ ನಶಿಸದಂತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ರಂಗನಿರ್ದೇಶಕ ರವಿಂದ್ರ ಮೇಡೆಗಾರ ವಂದಿಸಿದರು. ರಂಗಮೇಳ ಅಧ್ಯಕ್ಷ ಡಿ.ಎಚ್. ಕೋಲಾರ, ನರಸಲಗಿ ಬಸವರಾಜ, ಮಹೇಶ ಪೊದ್ದಾರ, ರೇವಣಸಿದ್ದ ಐಗಳಿ, ರಾಜಮ್ಮ ಹೆಗಡೆ, ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕ ಜೇವರ್ಗಿ ರಾಜಣ್ಣ, ರಂಗನಟ, ಸಾಹಿತಿ ಸಂಗಮೇಶ ಬದಾಮಿ ಸೇರಿದಂತೆ ಮುಂತಾದವರು ಇದ್ದರು.

ನಂತರ ಬಿ.ಎಸ್.ಆರ್ ನಾಟಕ ಸಂಘ ಗುಬ್ಬಿ ಕಂಪನಿ ಅವರಿಂದ ‘ಸೆರೆ ಅಂಗಡಿ ಸಂಗವ್ವ’ ನಾಟಕ ಪ್ರಸಾರ ಗೊಂಡಿತು. ವರುಣನ ಅರ್ಭಟ ನಡುವೆಯೂ ನಾಟ್ಯ ಮಂದಿರ ಪ್ರೇಕ್ಷಕರಿಂದ ಭರ್ತಿಯಾಗಿತ್ತು.

loading...