ನಾಲತವಾಡ ಪ.ಪಂ ಮುಖ್ಯಾಧಿಕಾರಿ ವರ್ಗಾವಣೆ ಮಾಡುವಂತೆ ಒತ್ತಾಯ

0
8
loading...

ನಾಲತವಾಡ: ಪಟ್ಟಣ ಪಂಚಾಯತ ಪ್ರಭಾರ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ದಲಿತ ಸಂಘಟಿಕರಿಂದ ಉಪತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖ್ಯಾಧಿಕಾರಿಯವರು ಸರಕಾರದಿಂದ ಬಂದಂತ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ವಿಳಂಬ ಮಾಡುತಿದ್ದಾರೆ, ಸಾರ್ವಜನಿಕರಿಗೆ ದಿನ ನಿತ್ಯ ಕಚೇರಿಗೆ ಅಲೆದಾಡುಸುತಿದ್ದಾರೆ, ಯೋಜನೆ ಬಗ್ಗೆ ಮಾಹಿತಿ ಕೇಳಲು ಹೋದರೆ ನನಗೆ ಮಾಹಿತಿ ಇಲ್ಲ ನಿಮ್ಮಲ್ಲಿ ಏನಾದರು ಆದೇಶವಿದ್ದರೆ ತನ್ನಿ ಎಂದು ಜನರಿಗೆ ಏಕವಚನದಲ್ಲಿ ಗದರಿಸಿ ಕಳುಹಿಸುತಿದ್ದಾರೆ. ಉತಾರೆ ಹಾಗೂ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಲು ತಿಂಗಳುಗಟ್ಟಲೆ ಕಾಯುಸುವ ಕೆಲಸ ಮಾಡುತಿದ್ದಾರೆ.
ಸರಕಾರದಿಂದ ಬಂದ ಆಶ್ರಯ ಮನೆಗಳ ಫಲಾನುಭವಿಗಳ ಡಾಟಾ ಎಂಟ್ರಿ ಸಮಯದಲ್ಲಿ ತಪ್ಪಾಗಿ ಹೆಸರುಗಳನ್ನು ಸಿಬ್ಬಂದಿಗಳು ನಮೂದಿಸಿದ್ದು ಅದನ್ನು ಪುನ ಸರಿಪಡಿಸಲಿಕ್ಕೆ ವರ್ಷ ಪೂರ್ತಿ ಫಲಾನುಭವಿಗಳನ್ನು ತಿರುಗಾಡಿಸುತಿದ್ದಾರೆ, ಸಾಲ ಮಾಡಿ ಮನೆಗಳನ್ನು ಕಟ್ಟುತ್ತಾರೆ ಸಿಬ್ಬಂದಿಗಳ ತಪ್ಪಿನಿಂದ ಹಣ ಜಮಾ ಆಗದಿರುವದನ್ನು ಪ್ರಶ್ನಿಸಿದರೆ ಮುಖ್ಯಾಧಿಕಾರಿ ನೀವೆ ಬೆಂಗಳೂರಿಗೆ ಹೋಗಿ ಅದನ್ನು ಸರಿ ಪಡಿಸಿಕೊಂಡು ಬಾ ಎಂದು ಎಲ್ಲರನ್ನು ಏಕವಚನದಲ್ಲಿ ಉತ್ತರ ನೀಡುತಿದ್ದಾರೆ, ನಾವೇ ಬೆಂಗಳೂರಿಗೆ ಹೋಗಿ ಸರಿಪಡಿಸಬೇಕಾದರೆ ಇಲ್ಲಿ ಮುಖ್ಯಾಧಿಕಾರಿಯ ಅವಶ್ಯಕತೆ ಯಾದರು ಯಾಕೆ. ನಿಮ್ಮ ದುರ್ನಡತೆ ಮತ್ತು ಬೇಜವಾಬ್ದಾರಿ ಬಗ್ಗೆ ಮೇಲಾಧಿಕಾರಿಗಳಿಗೆ ವಿಷಯ ತಿಳಿಸುವದಾಗಿ ಹೇಳಿದರೆ.
ಯಾರಿಗಾದರು ಹೇಳು ನಾನು ಯಾರಿಗೂ ಅಂಜುವದಿಲ್ಲ ಎಲ್ಲ ಅಧಿಕಾರಿಗಳು ನನಗೆ ಏನು ಮಾಡಲು ಸಾಧ್ಯವಿಲ್ಲ ಎನ್ನುತಿದ್ದಾರೆ.
2017-18 ನೇ ಸಾಲಿನ ದೇವರಾಜ ಅರಸು ವಸತಿ ಯೋಜನೆಡಿ ನಗರ ಫಲಾನುಭವಿಗಳ ಆಯ್ಕೆ ಮಾಡಿ ಕಳುಹಿಸಿದ್ದಾರೆ ಆದರೆ ಇಲ್ಲಿಯವರೆಗೆ ಇವರು ಅನುಮೋದನೆ ಪಟ್ಟಿ ಕಳಿಸಿರುವದಿಲ್ಲ, ಏನಾದರು ಹೆಚ್ಚು ಕೇಳಿದರು ನೀವು ಸರಿಯಾದ ದಾಖಲೆ ನೀಡಿದ್ದ ಹೆಚ್ಚು ಮಾತಾಡಿದರೆ ನಿಮ್ಮ ಮನೆ ರದ್ದು ಮಾಡುತ್ತೇನೆ ಎಂದು ಅವಾಜ ಹಾಕುತಿದ್ದಾರೆ. ಬಡವರಿಗೆ ಬಂದ ಆಶ್ರಯ ಮನೆಗಳನ್ನು ಶ್ರೀಮಂತರಿಗೆ ಮಾರಿಕೊಳ್ಳುತಿದ್ದಾರೆ. ಕೂಡಲೆ ಮಾನ್ಯ ಜಿಲ್ಲಾಧಿಕಾರಿಗಳು ಇವರನ್ನು ನಾಲತವಾಡ ಪಟ್ಟಣ ಪಂಚಾಯತದಿಂದ ವರ್ಗಾವಣೆ ಮಾಡಿ ಪೂರ್ಣ ಪ್ರಮಾಣದ ಮುಖ್ಯಾಧಿಕಾರಿಯನ್ನು ನೇಮಿಸಬೇಕು ಒಂದು ವೇಳೆ ಕೂಡಲೆ ವರ್ಗಾವಣೆ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮನವಿ ಸಲ್ಲಿಸದರು.
ಮನವಿ ಸ್ವಕರಿಸಿದ ಉಪತಹಶೀಲ್ದಾರ ಭದ್ರಣ್ಣನವರ ಮಾತನಾಡಿ ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು. ಈ ವೇಳೆ ನಾಲತವಾಡ ಹೂಬಳಿಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ರಾಜು ಮಶಿಬನಾಳ, ನಗರ ಸಂಚಾಲಕ ಮಂಜುನಾಥ ಕಟ್ಟಿಮನಿ, ಮುಖಂಡರಾದ ಮೌನೇಶ ನಾಗಬೇನಾಳ, ದುರಗಪ್ಪ ಲೋಟಗೇರಿ, ಯಲ್ಲಪ್ಪ ಚಲವಾದಿ, ಸಂಗಪ್ಪ ಆರೇಶಂಕರ ಉಪಸ್ಥಿತರಿದ್ದರು.

loading...