ನಾಲ್ಕನೇಯ ದಿನಕ್ಕೆ ಮುಂದುವರೆದ ಸತ್ಯಾಗ್ರಹ

0
7
loading...

ವಿಜಯಪುರ: ಜಿಎಸ್‌ಟಿ ಪದ್ಧತಿಯಲ್ಲಿರುವ ಅವೈಜ್ಞಾನಿಕ ಅಂಶಗಳ ನಿವಾರಣೆಗೆ ಒತ್ತಾಯಿಸಿ ಮರ್ಚಂಟ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ನಗರದ ಸಿಜಿಎಸ್‌ಟಿ ಕಚೇರಿ ಎದುರು ಅನೀರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಾಲ್ಕನೇಯ ದಿನ ಮುಂದುವರೆದಿರುವುದು.
ಹೋರಾಟಕ್ಕೆ ಗ್ರಾಮೋದ್ಯೋಗ ಎಣ್ಣೆ ಉತ್ಪಾದಕರ ಸಂಘ, ಬೇಳೆಕಾಳುಗಳ ವ್ಯಾಪಾರಸ್ಥರು, ಶೇಂಗಾಕಾಳು ವ್ಯಾಪಾರಸ್ಥರ ಸಂಘ ಸೇರಿದಂತೆ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ನೇತೃತ್ವ ವಹಿಸಿದ್ದ ಮರ್ಚಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ಜಿಎಸ್‌ಟಿ ಪದ್ಧತಿಯಲ್ಲಿರುವ ಕೆಲವು ಅವೈಜ್ಞಾನಿಕ ಅಂಶಗಳಿಂದ ಅನೇಕ ರೀತಿಯ ತೊಂದರೆಗಳನ್ನು ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಮ್ಮ ಬೇಡಿಕೆಯನ್ನು ಗಂಭೀರವಾಗಿ ಸ್ವೀಕರಿಸಬೇಕು, ಜಿಎಸ್‌ಟಿಯಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ತೊಡೆದು ಹಾಕಬೇಕು ಎಂದು ಆಗ್ರಹಪಡಿಸಿದರು.
ಜಿಎಸ್‌ಟಿ ಪದ್ಧತಿಯಲ್ಲಿ ಪರಿಷ್ಕೃತ ರಿಟರ್ನ ಸಲ್ಲಿಸಲು ಅವಕಾಶ ನೀಡುವುದು, ರಿಟರ್ನ ಸಲ್ಲಿಸುವದಕ್ಕೆ ವಿಳಂಬವಾದರೆ ಪ್ರತಿ ತಿಂಗಳಿಗೆ ಗರಿಷ್ಠ ರೂ 250 ರೂ. ನಿಗದಿಗೊಳಿಸುವುದು, ಸಿಂಗಲ್‌ ರಿಟರ್ನ ಪದ್ಧತಿಯನ್ನು ಅಳವಡಿಸುವುದು, ಜಿಎಸ್‌ಟಿ ಆರ್‌-2 ರಿಟರ್ನ್‌ನದಲ್ಲಿ ಮಾಸಿಕ ಖರೀದಿ ವಿವರವನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು, ಅಂತರ್ಜಾಲದ ಮುಖಾಂತರ ಸಲ್ಲಿಸಿದ ಮಾಸಿಕ ಹಾಗೂ ತ್ರೈಮಾಸಿಕ ವಿವರಗಳನ್ನು ಎಕ್ಸೆಲ್‌ ಫಾರ್ಮೆಟ್‌ನಲ್ಲಿ ಢೌನ್‌ಲೋಡ್‌ಗಳಲ್ಲಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎನ್‌.ವಿ. ಉಟಗಿ, ನೇತೃತ್ವದಲ್ಲಿ ಗ್ರಾಮೋದ್ಯೊಗ ಎಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ನಿಂಗಪ್ಪ. ಸಜ್ಜನ, ಬೇಳೆಕಾಳುಗಳ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶ್ರೀ ರಮೇಶ ಪೋರವಾಲ, ಶೇಂಗಾಕಾಳು ವ್ಯಾಪಾರಸ್ಥರ ಅಧ್ಯಕ್ಷ ಸಿದ್ಧಯ್ಯ ಹೀರೆಮಠ, ಚುಂಗಡಿ ವ್ಯಾಪಾರಸ್ಥರ ಅಧ್ಯಕ್ಷ ಉಮೇಶ ಇಜೇರಿ, ಸಂಜು ಪಾಟೀಲ, ಅಶೋಕ ಹಿಟ್ನಳ್ಳಿ, ಅಶೋಕ ನ್ಯಾಮಗೊಂಡ, ಹನುಮಂತ ಬಿರಾದಾರ, ಸುರೇಶ ತಡಲಗಿ, ಹನುಮಂತ ಕೋರೆ, ಗುರುಸ್ವಾಮಿ ಹೀರೆಮಠ ಪಾಲ್ಗೊಂಡಿದ್ದರು.

loading...