ನಿಮ್ಮ ವಿಶ್ವಾಸವನ್ನು ಖಂಡಿತ ಉಳಿಸಿಕೊಳ್ಳುತ್ತೇನೆ: ಕಳಕಪ್ಪ

0
32

ಕನ್ನಡಮ್ಮ ಸುದ್ದಿ-ನರೇಗಲ್ಲ: ನನ್ನ ಶಾಸಕತ್ವದ ಅವಧಿಯಲ್ಲಿ ನಾನು ಪಟ್ಟಣದ ಅಭಿವೃದ್ಧಿಗೆ ಸಂಪೂರ್ಣ ಬದ್ಧನಾಗಿ ದುಡಿಯುತ್ತೇನೆ. ನೀವು ಇಟ್ಟಂತಹ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಿ, ನಿಮ್ಮ ವಿಶ್ವಾಸವನ್ನು ಖಂಡಿತ ಉಳಿಸಿಕೊಳ್ಳುತ್ತೇನೆ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.
ಇಲ್ಲಿನ ಗಜಾನನ ದೇವಸ್ಥಾನದದಲ್ಲಿ ಇಂದು ಶನಿವಾರ ನರೇಗಲ್ಲ ಮತ್ತು ಮಜಿರೆ ಗ್ರಾಮಗಳ ಭಾಜಪ ಅಭಿಮಾನಿಗಳು ಮತ್ತು ಕಾರ್ಯಕರ್ತರು ನೀಡಿದ ಗೌರವ ಸನ್ಮಾನವನ್ನು ಸ್ವೀಕರಿಸಿ, ತಮ್ಮನ್ನು ಆರಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ರೋಣ ತಾಲೂಕಿನಲ್ಲಿ ನರೇಗಲ್ಲ ಕ್ಷೇತ್ರ ವಿದ್ಯಾಖಾಶಿಯೆಂದೆ ಪ್ರಸಿದ್ಧವಾಗಿದೆ. ಇದಕ್ಕೆ ತಕ್ಕುದಾದ ರೀತಿಯಲ್ಲಿ ಈ ಹಿಂದಿನ ಅವಧಿಯಲ್ಲಿ ನಾನು ನರೇಗಲ್ಲ ಪಟ್ಟಣದಲ್ಲಿ ಸರಕಾರಿ ಪದವಿ ಕಾಲೇಜು, ಪ.ಪೂ.ಕಾಲೇಜು ಹಾಗೂ ಪ್ರೌಢಶಾಲೆಗಳನ್ನು ನೀಡಿ ಅವುಗಳಿಗೆ ಕಟ್ಟಡಗಳು ಸಹ ನಿರ್ಮಾಣವಾಗುವಂತೆ ಮಾಡಿದ್ದೇನೆ. ಇನ್ನು ಮೂದೆಯೂ ಸಹ ನರೇಗಲ್ಲದ ಅಭಿವೃದ್ಧಿಗೆ ನಾನು ಕಂಕಣಬದ್ಧನಾಗಿದ್ದೇನೆ ಎಂದು ಬಂಡಿ ತಿಳಿಸಿದರು.
ನನಗೆ ಯಾವ ಜಾತಿಯ ಅಂಖುಶವೂ ಇಲ್ಲ. ನಾನು ಜಾತೀವಾದಿಯೂ ಅಲ್ಲ. ನನಗೆ ಎಲ್ಲ ಜಾತಿ, ಮತ, ಧರ್ಮದವರೂ ಸೇರಿ ನನಗೆ ಈ ಶಾಸಕತ್ವವನ್ನು ನೀಡಿದ್ದಾರೆ ಎಂಬ ಅರಿವು ಇದೆ. ಅದನ್ನು ಇರಿಸಿಕೊಂಡೇ ಯಾವ ಕಾರಣಕ್ಕೂ ಜಾತಿಯನ್ನು ಮುಂದು ಮಾಡದೆ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಬಂಡಿ ಹೇಳಿದರು.
ಈಗ ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರವು ಪಾಪದ ಕೂಸಾಗಿದ್ದು, ಅದು ಹುಟ್ಟುತ್ತಲೆ ಕ್ಯಾನ್ಸ್‍ರನ್ನು ಪಡೆದುಕೊಂಡೇ ಬಂದಿದೆ. ಅದಕ್ಕೆ ಯಾವ ಔಷಧಿಯೂ ನಾಟುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸಾಯುವ ಆ ಸರಕಾರದ ನಂತರ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪ್ಷದ ಸರಕಾರ ಅಸ್ತಿತವಕ್ಕೆ ಬರಲಿದೆ. ಮತ್ತೆ ರಾಜ್ಯದಲ್ಲಿ ಸುವರ್ಣ ಯುಗ ಪ್ರಾರಂಭವಾಗಲಿದೆ ಎಂದು ತಿಳಿಸಿದ ಬಂಡಿ, ಈ ಸಮ್ಮಿಶ್ರ ಸರಕಾರವು ರೈತರ ಸಾಲ ಮನ್ನಾ ಮಾಡುವಲ್ಲಿ ಎಡವಿದ್ದಲ್ಲದೆ ಎಲ್ಲ ರೈತರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದರು.
ಹಾವೇರಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ ಈ ಭಾಗದ ಜನಗಳ ಬಹು ದಿನದ ರೇಲ್ವೆ ಕನಸು ಸನಿಹದರಲ್ಲಿಯೆ ಕೈಗೂಡಲಿದೆ. ಈಗಾಗಲೆ ಸರ್ವೇ ಕಾರ್ಯ ನಡೆದದ್ದು ಅದರ ವರದಿ ಸರಕಾರಕ್ಕೆ ಸಲ್ಲಿಕೆಯಾಗುತ್ತಲೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು. ಗದಗ ಜಿಲ್ಲೆಗೆ ಹಿಂಗಾರಿ ಬೆಳೆ ವಿಮೆ ಹೆಚ್ಚಿನ ಪ್ರಮಾಣದಲ್ಲಿ ಸುಮಾರು 150 ಕೋಟಿ ಬಂದಿದ್ದು ಇನ್ನೂ 50ಕೋಟಿಯಷ್ಟು ಹಣ ಬರಲಿದೆ ಎಂದರು.
ಈ ಸಾರೆ ಕಳಕಪ್ಪ ಬಂಡಿಯವರನ್ನು ಆರಿಸುವ ಮೂಲಕ ರೋಣ ಮತಕ್ಷೇತ್ರ ಮತದಾರರು ಜಾಣ ನಡೆಯನ್ನು ಪ್ರಧರ್ಶಿಸಿದ್ದು, ಈ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಖಂಡಿತ ನೀವುಗಳು ಪಡೆಲಿದ್ದೀರಿ ಎಂದರು. ವಾರ್ಡವಾರು ಶಾಸಕರನ್ನು ಸನ್ಮಾನಿಸಿದ ಊರು ಏನಾದರೂ ಇದ್ದರೆ ಅದು ನರೇಗಲ್ಲ ಮಾತ್ರ ಎಂದು ಹೇಳಿದ ಸಂಸದ ಉದಾಸಿ, ಕಳಕಪ್ಪನವರ ಮೇಲೆ ನೀವಿಟ್ಟಿರುವ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.
ಸಭೆಯನ್ನುದ್ದೇಶಿಸಿ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ಈ ಸಾರೆ ಚುನಾವಣೆಯಲ್ಲಿ ಎಲ್ಲರೂ ಒಮ್ಮನದಿಂದ ದುಡಿದದ್ದು, ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿದ್ದು ಕಳಕಪ್ಪನವರ ಗೆಲುವಿಗೆ ಕಾರಣವಾಯಿಯೆಂದರು. ಬಸವರಾಜ ಕೊಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದ ಸಾನಿದ್ಯವನ್ನು ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶಿರ್ವಚನ ನೀಡಿದರು. ನರೇಗಲ್ಲ ಬಿಜೆಪಿ ಘಟಕದ ಅದ್ಯಕ್ಷ ಉಮೇಶ ಸಂಗನಾಳಮಠ ಅದ್ಯಕ್ಷತೆ ವಹಿಸಿದ್ದರು. ರೋಣ ಹಾಗೂ ಡಂಬಳ ಮಂಡಳದ ಬಿಜೆಪಿ ಅದ್ಯಕ್ಷ ಗದಗ ಜಿಲ್ಲಾ ಬಿಜೆಪಿ ಯುವ ಮೊರ್ಚಾ ಅದ್ಯಕ್ಷ ಮುತ್ತು ಕಡಗದ, ದೊಡ್ಡಪ್ಪ ಕೊಟಗಿ ಬಸವರಾಜ ವಂಕಲಕುಂಟಿ ಹಾಗೂ ನರೇಗಲ್ಲ ಪಪಂ ಬಿಜೆಪಿ ಸದಸ್ಯರು ಉಪಸ್ತಿತರಿದ್ದರು. ನಂತರ ಕಾರ್ಯಕರ್ತರು ಶಾಸಕ ಕಳಕಪ್ಪ ಬಂಡಿ, ಹಾವೇರಿ ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂನೂರರನ್ನು ಸನ್ಮಾನಿಸಿ ಗೌರವಿಸಿದರು. ಬಾಳಪ್ಪ ಕಳಕೊಣ್ನವರ ಸ್ವಾಗತಿಸಿ ನಿರ್ವಹಿಸಿದರು. ಮಹೇಶ ಶಿವಸಿಂಪರ ವಂದಿಸಿದರು.

loading...