ನಿರ್ವಹಣೆಯಾಗದ ಶುದ್ಧ ಕುಡಿಯುವ ನೀರಿನ: ಗೊಂದಲ

0
9
loading...

ಹಾನಗಲ್ಲ: ಶಾಲೆಗಳು ಆರಂಭವಾಗಿ ಹದಿನೈದು ದಿನ ಕಳೆದಿದೆ. ಆದರೆ, ತಾಲೂಕಿನಲ್ಲಿ ಶಿಕ್ಷಕರ ಸಮಸ್ಯೆ ಹೆಚ್ಚಿಗೆಯಿದ್ದು, ಒಟ್ಟು 158 ಶಿಕ್ಷಕರ ಕೊರತೆಯಿದೆ. ಇತ್ತೀಚೆಗೆ ಆರು ಶಿಕ್ಷಕಕರು ನಿವೃತ್ತರಾಗಿದ್ದಾರೆ. ಜುಲೈನಲ್ಲಿ 82 ಶಿಕ್ಷಕರ ನೇರ ನೇಮಕಾತಿಗೆ ಸುತ್ತೋಲೆ ಹೊರಡಿಸಲಾಗಿದೆ. ಉರ್ದು ಪಠ್ಯ ಪುಸ್ತಕದ ಹೊರತಾಗಿ ಶೇ.90ರಷ್ಟು ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಲಾಗಿದೆ. 148 ಕೊಠಡಿಗಳ ಅವಶ್ಯಕತೆಯಿದ್ದು, 90 ಕೊಠಡಿಗಳನ್ನು ನೆಲಸಮ ಮಾಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ತಿಳಿಸಿದರು.
ಇಲ್ಲಿನ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಅಪೌಷ್ಠಿಕ ಮಕ್ಕಳಿಗೆ ವಿತರಿಸುವ ಮಾತ್ರೆಯನ್ನು ಸರಿಯಾಗಿ ವಿತರಿಸಿ. ಕಾಟಾಚಾರಕ್ಕೆ ಸರ್ಕಾರದ ಯೋಜನೆಗಳನ್ನು ನಿಭಾಯಿಸಿದರೆ ಕ್ರಮಕ್ಕೆ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗುವುದು. ಮಾತೃಪೂರ್ಣ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಬರಲಾಗದ ಗರ್ಭೀಣಿ ಸ್ತ್ರೀಯರಿಗೆ ಮನೆಗೆ ಡಬ್ಬಿಯಲ್ಲಿ ಊಟ ಕಳುಹಿಸಲಾಗುತ್ತಿದೆಯೇ ಎಂದು ಭೇಟಿ ನೀಡಿ ವಿಚಾರಿಸಿ. ಮಳೆಗಾಲ ಪ್ರಾರಂಭವಾಗಿದ್ದು, ಅಂಗನವಾಡಿ ಕೇಂದ್ರಗಳ ಒಳಗೆ ಮತ್ತು ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕಾರ್ಯಕರ್ತೆಯರಿಗೆ ಸೂಚಿಸಿ. ಅಗತ್ಯವಿರುವ ಅಂಗನವಾಡಿ ಕೇಂದ್ರಗಳ ಪಟ್ಟಿ ಸಿದ್ಧಪಡಿಸಿ ನೀಡುವಂತೆ ತಾಲೂಕಾ ಪಂಚಾಯತ ಅಧ್ಯಕ್ಷ ಶಿವಬಸಪ್ಪ ಪೂಜಾರ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಅಧಿಕಾರಿ ವಿದ್ಯಾ ಬಡಿಗೇರಗೆ ಸೂಚಿಸಿದರು.
ಮಳೆಗಾಲ ಆರಂಭವಾಗಿದ್ದು, ಪಟ್ಟಣದಲ್ಲಿನ ಚರಂಡಿ ಸ್ವಚ್ಛಗೊಳಿಸಿ, ಹಂದಿ ಸೆರೆ ಕಾರ್ಯಾಚರಣೆ ಪರಿಣಾಮಕಾರಿಯಾಗಿ ಮುಂದುವರಿಯಲ್ಲಿ. ಪಟ್ಟಣದಲ್ಲಿ ಸೊಳ್ಳೆ ಹರಡದಂತೆ ಪಾಗಿಂಗ್‌ ಸಿಂಪಡಿಸುವಂತೆ ಪುರಸಭೆ ಅಧಿಕಾರಿ ಚೂಡಿಗಾರಗೆ ಸೂಚಿಸಿದರು.
ಮೀನು ಸಲಕರಣೆ ಕಿಟ್‌ ವಿತರಣೆಗೆ 2017-18ನೇ ಸಾಲಿನಲ್ಲಿ ಆಯ್ಕೆ ಮಾಡಲಾಗಿರುವ ಫಲಾನುಭವಿಗಳನ್ನು ಪರಿಗಣಿಸದೆ ಹೊಸದಾಗಿ ಮತ್ತೊಮ್ಮೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಆರೋಪಗಳಿದ್ದು, ಕೂಡಲೇ ಈ ಕ್ರಮವನ್ನು ಕೈಬಿಡುವಂತೆ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಕಾಶ ಪವಾಡಿಗೆ ಸೂಚಿಸಿದರು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಜಿ. ಶಶಿಧರ, ಉಪಾಧ್ಯಕ್ಷೆ ಸರಳಾ ವಿ.ಜಾಧವ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನಜೀರ್‌ ಅಹ್ಮದ್‌ ಲೋಹಾರ್‌, ಅಧಿಕಾರಿಗಳು ಇದ್ದರು.
ಶುದ್ಧ ಕುಡಿಯುವ ನೀರಿನ ಘಟಕಗಳದ್ದೇ ಸಮಸ್ಯೆ:
ತಾಲೂಕಿನಲ್ಲಿ ಒಟ್ಟು 158 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇವುಗಳಲ್ಲಿ ಶೇಕಡ ಅರ್ಧದಷ್ಟು ನಿರ್ವಹಣೆಯಿಲ್ಲದೆ ಹಾಳಾಗಿವೆ. ಆದರೆ, ಇವುಗಳ ನಿರ್ವಹಣೆ ಜವಬ್ದಾರಿ ಯಾರದ್ದು ಎಂಬುದೇ ಗೊಂದಲದಲ್ಲಿರುವುದರಿಂದ ಘಟಕಗಳ ದುರಸ್ತಿ ಕಾರ್ಯ ಅಪೂರ್ಣಗೊಂಡಿದೆ. ಪಂಚಾಯತ್‌ ರಾಜ್‌ ಇಲಾಖೆಗ ಇವುಗಳ ನಿರ್ವಹಣಾ ಜವಬ್ದಾರಿಯನ್ನು ವಹಿಸಿಲ್ಲ. ಕ್ರೆಡಯಲ್‌ಗೆ ಘಟಕಗಳ ನಿರ್ವಹಣಾ ಜವಬ್ದಾರಿ ವಹಿಸಿಲಾಗಿದೆಯಂದು ಇಲಾಖೆ ಅಧಿಕಾರಿ ತಿಳಿಸಿದರು.

loading...