ನೀರು ತುಂಬಿದ ಬ್ಯಾರಲ್ ನಲ್ಲಿ ಇಳಿದು ಪ್ರತಿಭಟನೆ

0
31
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ಮಾಸ್ಟರ್ ಮೈಂಡ್ ಎಂದೇ ಕರಸಿಕೊಳ್ಳುವ ಸತೀಶ ಜಾರಕಿಹೊಳಿಯವರಿಗೆ ಸಚಿವ ನೀಡಬೇಕೆಂದು ಆಗ್ರಹಿಸಿ ನಗರ ಸೇವಕರು ಪಾಲಿಕೆ ಎದುರು ನೀರು ತುಂಬಿದ ಬ್ಯಾರಲ್ ನಲ್ಲಿ ಇಳಿದು ಪ್ರತಿಭಟನೆ ನಡೆಸಿದರು.

ಮಂಗಳವಾರ ಬೆಳಗಾವಿ ಮಹಾನಗರ ಪಾಲಿಕೆ ಮುಂಬಾಗದಲ್ಲಿ ತುಂಬಿದ ಬ್ಯಾರಲ್ ನಲ್ಲಿ ಮುಳುಗಿ ಪ್ರತಿಭಟನೆ ಕೈಗೊಂಡರು. ನಗರ ಸೇವಕ ದಿನೇಶ ನಾಸಿಪುಡಿಯವರು ನೀರು ತುಂಬಿದ ಬ್ಯಾರಲ್ನಲ್ಲಿ ಮುಳುಗಿ ಪ್ರತಿಭಟಿಸಿದರು.

ಈ ವೇಳೆ ದಿನೇಶ ನಾಶಿಪುಡಿ ಮಾತನಾಡಿ, ಒಬ್ಬ ಒಳ್ಳೆಯ ವ್ಯಕ್ತಿ ಗೆ ಸಚಿವ ಸ್ಥಾನ ನೀಡಬೇಕಾಗಿತ್ತು.ಆದರೆ ಕಾಂಗ್ರೆಸ್ ನಾಯಕರು ಅವರನ್ನು ನಿರ್ಲಕ್ಷ್ಯ ಮಾಡಿದೆ.ಇಂದು ನೀರಿನಲ್ಲಿ‌ ಇಳಿದು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿತ್ತಿದೆ.ಒಂದು ವಾರದೊಳಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಗರ ಸರಳಾ ಹೇರೆಕರ, ಜಯಶ್ರೀ ಮಾಳಗಿ, ಮುಸ್ತಾಕ್ ,ಆಯಿಶಾ ಸಂದಿ,ಸೇರಿದಂತೆ ಇತರರು ಇದ್ದರು.

loading...