ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಕಾಳಜಿ ಇರಲಿ

0
12
loading...

ಮುಧೋಳ : ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ನಾವು ನೆಮ್ಮದಿಯ ಬದುಕು ಸಾಗಿಸಲು ಸಾದ್ಯ ಎಂದು ಮುಧೋಳದ ಬಸವೇಶ್ವರ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಚಂದ್ರಶೇಖರ ಗೋಸಾರ ಹೇಳಿದರು. ಮಂಗಳವಾರ ದಂದು ಸ್ಥಳೀಯ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಟೆಂಗಿನ ಗಿಡ ನೆಡುವದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವರ್ತಕರು ಪ್ರತಿವರ್ಷ ಒಂದಾದರು ಸಸಿ ನೆಡುವ ಯೋಜನೆಯೊಂದನ್ನು ಹಾಕಿಕೊಳ್ಳಬೇಕು ಇದರಿಂದ ಪರಿಸರ ಸಂರಕ್ಷಣೆ ಮಾಡಲು ಸಾಧ್ಯ ಎಂದರು.

ಶ್ರೀ ಬಸವೇಶ್ವರ ಕಿರಾಣಿ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ರಾಮತೀರ್ಥ ಮಾತನಾಡಿ ಪರಿಸರ ನಾಶದಿಂದ ಮಾನವ ಕುಲಕ್ಕೆ ವಿನಾಶಕಟ್ಟಿಟ್ಟ ಬುತ್ತಿ, ಪರಿಸರ ಕಾಳಜಿ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಬೇಕು, ಜಾಗತಿಕ ತಾಪಮಾನ ಕಡಿಮೆ ಮಾಡಲು ಮತ್ತು ಮುಂದಿನ ತಲೆಮಾರು ನೆಮ್ಮದಿಯಿಂದ ಉಸಿರಾಡಲು ಮನೆಗೊಂದು ಮರ ಘೋಷ ವಾಕ್ಯವನ್ನು ಕಾರ್ಯರೂಪಕ್ಕೆ ತಂದಾಗ ಪರಿಸರ ಉಳಿಸಲು ಸಾದ್ಯ ಎಂದು ಹೇಳಿ ಕಿರಾಣಿ ವರ್ತಕರ ಸಂಘದ ವತಿಯಿಂದ ಪ್ರತಿವರ್ಷ ಪರಿಸರ ದಿನಾಚರಣೆ ಆಚರಿಸುವದರ ಮೂಲಕ ಪರಿಸರ ಸಂರಕ್ಷಣೆ ಮಾಡಲಾಗುತ್ತದೆ ಎಂದರು. ಶ್ರೀಬಸವೇಶ್ವರ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಚಂದ್ರಶೇಖರ ಗೋಸಾರ, ಉಪಾಧ್ಯಕ್ಷ ಬಸವರಾಜ ಘಟ್ನಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ರಾಮತೀರ್ಥ, ಖಜಾಂಚಿ ಶಂಕರ ನಾವಲಗಿ, ಸಲಹಾ ಸಮಿತಿ ಸದಸ್ಯ ವಿಶ್ವನಾಥ ಮುನವಳ್ಳಿ ಹಾಗೂ ಸಿ.ಪಿ.ಹಿರೇಮಠ, ಪಿ.ಎನ್.ಪಂಚಕಟ್ಟಿಮಠ, ಚತ್ರರಾಮ್ ಚೌಧರಿ, ಸಂಜು ರಜಪೂತ, ಎ.ಬಿ.ಹುನಸಗಿ ಸೇರಿದಂತೆ ಇತರರು ಇದ್ದರು.

loading...