ಪರಿಸರ ಕಾಪಾಡಿದರೆ ನಮ್ಮನ್ನು ಪರಿಸರ ಕಾಪಾಡುತ್ತದೆ

0
19
loading...

ಮುಧೋಳ : ನಾವು ಪರಿಸರವನ್ನು ಕಾಪಾಡಿದರೆ ನಮ್ಮನ್ನು ಪರಿಸರ ಕಾಪಾಡುತ್ತದೆ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಮನೆಯ ಅಂಗಳದಲ್ಲಿ ಇಲ್ಲವೆ ತಾವು ವಾಸಿಸುವ ಪ್ರದೇಶದಲ್ಲಿ ಕನಿಷ್ಠ ಒಂದೆರಡು ಮರಗಳನ್ನು ನೆಡಬೇಕು ಇದರಿಂದ ಮನೆಯ ಸುತ್ತಲು ಉತ್ತಮ ಆಕ್ಸಿನ್ ಉಗಮಗೊಂಡು ದೇಹದೊಳಗೆ ಪ್ರವೇಶಗೊಂಡು ಆರೋಗ್ಯವಂತರಾಗಿ ಬದುಕಲು ಸಾದ್ಯ ಎಂದು ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಹೇಳಿದರು.
ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಸಸಿ ನೆಡುವದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಸರ ನಮಗೆಲ್ಲವನ್ನು ಉಚಿತವಾಗಿ ನೀಡಿದೆ ಆದರೆ ನಾವು ಮಾತ್ರ ಪರಿಸರವನ್ನು ಹಾಳು ಮಾಡುತ್ತಿದ್ದೇವೆ ಇದು ಭವಿಷ್ಯಕ್ಕೆ ತೊಂದರೆಯಾಗಲಿದೆ, ಪರಿಸರ ದಿನಾಚರಣೆ ಎಂಬುದು ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿ ಕ್ಷಣವೂ ಪರಿಸರ ರಕ್ಷಣೆಗೆ ಕಟಿಬದ್ದರಾಗಿರಬೇಕು,ದೇಶದ ರಕ್ಷಣೆಗೆ ಮತ್ತು ಇತರೆ ಅವಶ್ಯಕತೆಗಳಿಗಾಗಿ ಒಟ್ಟು ಭೂಭಾಗದ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು ಆದರೆ ಈಗ ಅಭಿವೃದ್ದಿ ಹೆಸರಿನಲ್ಲಿ ಮರಗಳನ್ನು ಕಡಿದು ಇಡೀ ಪರಿಸರವನ್ನು ನಾಶಮಾಡಲಾಗುತ್ತದೆ ತದಪರಿಣಾಮ ಶೇ.21ರಷ್ಟು ಮಾತ್ರ ಪರಿಸರ ಉಳಿದಿರುವುದು ವಿಷಾದನೀಯ ಸಂಗತಿ, ವಿದ್ಯಾರ್ಥಿಗಳು ಇಂದಿನಿಂದಲೇ ಶಪಥ ಮಾಡಬೇಕು ನಾವು ಪರಿಸರ ರಕ್ಷಿಸುತ್ತೇವೆ ಇದು ನಮ್ಮೆಲ್ಲರ ಆಧ್ಯ ಕರ್ತವ್ಯಗಳಲ್ಲಿ ಒಂದಾಗಿದೆ ಎಂದು ಅರಿತು ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ತಮ್ಮದಾಗಬೇಕು ಎಂದರು.

ಡಾ.ಎಂ.ಆರ್.ಜರಕುಂಟಿ, ಪೆÇ್ರ.ಅಪ್ಪು ರಾಠೋಡ, ಪೆÇ್ರ.ಎ.ಎಚ್.ಹಿರೇಮಠ, ಪೆÇ್ರ.ಅನೀಲ ಮುನ್ನೋಳ್ಳಿ, ಪೆÇ್ರ.ಅನೀಲ ಪತ್ತಾರ, ಪೆÇ್ರ.ವಿಶ್ವನಾಥ ಮುನವಳ್ಳಿ, ಪೆÇ್ರ.ಬಿ.ಎಲ್.ಲಿಂಗರಡ್ಡಿ, ಪೆÇ್ರ.ಸತೀಶ ಸಾರವಾಡ, ಪೆÇ್ರ.ಎ.ಎಚ್.ಉಗರೆ, ಪೆÇ್ರ.ರಾಧಾ ಮಾಲಿಪಾಟೀಲ, ಪೆÇ್ರ.ಡಿ.ಎಂ.ಇಂಗಳಗಿ, ಪೆÇ್ರ.ಸತೀಶ ಬೆಳಗಲಿ, ಪೆÇ್ರ.ಪಿ.ಡಿ.ಕುಂಬಾರ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...