ಪರಿಸರ ಕಾಪಾಡುವಲ್ಲಿ ಎಲ್ಲರೂ ಕಾಳಜಿವಹಿಸಿ: ಶಾಸಕ ಶೆಟ್ಟಿ

0
17
loading...

ಕನ್ನಡಮ್ಮ ಸುದ್ದಿ-ಕುಮಟಾ: ಪರಿಸರ ಎಲ್ಲರ ಉಸಿರಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ಹೊನ್ನಾವರ ಮತ್ತು ಕುಮಟಾ ಅರಣ್ಯ ಇಲಾಖೆಗಳ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರದ ಸುತ್ತೋಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವು ಕಾಟಾಚಾರಕ್ಕೆ ಮಾಡದೇ ಅದನ್ನು ಮನಸ್ಪೂರ್ವಕವಾಗಿ ಮಾಡಬೇಕು. ಪರಿಸರವನ್ನು ಕಾಪಾಡುವಲ್ಲಿ ಎಲ್ಲರೂ ಕಾಳಜಿವಹಿಸಬೇಕು. ವಿದ್ಯಾರ್ಥಿಗಳು ಸಹ ಮನೆಯ ಆವಾರಣದಲ್ಲಿ ಗೀಡಗಳನ್ನು ನೆಟ್ಟಿ ಉತ್ತಮ ಪರಿಸರವನ್ನು ಉಳಿಸಿಕೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷ ಮಧುಸೂದನ ಶೇಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ನಾಶದಿಂದಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತದೆ. ಮನುಷ್ಯನ ಸ್ವಾರ್ಥ ಸಾಧನೆಗೆ ಇಂದು ಪರಿಸರ ವಿನಾಶದತ್ತ ಸಾಗುತ್ತಿರುವುದು ವಿಷಾಧನೀಯವಾಗಿದೆ. ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವದಕ್ಕಾಗಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಲ್ಲದೇ ನಾನು ಸ್ವಚ್ಚ ಕುಮಟಾ ಮಾಡುವ ಉದ್ದೇಶ ಹೊಂದಿದ್ದೇನೆ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಪರಿಸರವನ್ನು ಉಳಿಸಿಕೊಳ್ಳ ಎಲ್ಲರು ಕಾಳಜಿ ವಹಿಸೋಣ ಎಂದರು.
ಸಹಾಯಕ ಅರಣ್ಯ ಸಂರಕ್ಷನಾಧಿಕಾರಿ ಎಸ್ ವಿ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯ ಸಂಪತ್ತನ್ನು ಉಳಿಸಿ ಹೋಗುವಂತ ಜವಾಬ್ದಾರಿ ನಮಗಿದೆ. ಪರಿಸರ ಮನಗೆ ಏನು ಕೊಟ್ಟಿದೆ ಎನ್ನುವಕಿಂತ, ಪರಿಸರಕ್ಕೆ ನಾವು ಏನು ಕೋಡಬೇಕು ಎನ್ನುವ ವಿಚಾರ ನಮ್ಮದಾಗಬೇಕು. ಪ್ಲಾಸ್ಟಿಕ್ ಮುಕ್ತ ದೇಶವನ್ನು ಮಾಡುವ ಉದ್ದೇಶ ನಮ್ಮದಾಗಿದೆ ಎಂದರು.

ಪ್ರಾರಂಭದಲ್ಲಿ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿದ ಬಳಿಕ ಕಾಲೇಜಿನ ಆವಾರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲ ಸತೀಶ ನಾಯ್ಕ, ಆರ್‍ಎಫ್‍ಒ ವರದ ರಂಗನಾಥ ಜಿ ಎಚ್ ಕುಮಟಾ, ಮೋಹನ ಬಿದರಿ ಹಿರೇಗುತ್ತಿ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕ ಮೋಹನ ನಾಯ್ಕ ಸ್ವಾಗತಿಸಿದರು. ಉಪನ್ಯಾಸಕ ಗಣೇಶ ಭಟ್ ನಿರೂಪಿಸಿದರು. ಆರ್‍ಎಫ್‍ಒ ಹರೀಶ ಸಿ ಎನ್ ವಂದಿಸಿದರು.

loading...