ಪರಿಸರ ಪಾಲನೆ, ಪೋಷಣೆ ಪ್ರತಿಯೊಬ್ಬರ ಕರ್ತವ್ಯ: ಉದಾಸಿ

0
18
loading...

ಹಾನಗಲ್ಲ: ವಿಶ್ವ ಪರಿಸರ ದಿನಾಚರಣೆ ಮೊದಲಿನಿಂದಲೂ ರೂಢಿಯಲ್ಲಿದೆ. ಆದರೆ, ಕೆಲವರ ಪ್ರಕಾರ ಅದೊಂದು ಸರ್ಕಾರಿ ಕಾರ್ಯಕ್ರಮವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಪರಿಸರ ಎಲ್ಲರಿಗೂ ಬೇಕು ಎಂದಾದಮೇಲೆ ಅದರ ಪಾಲನೆ, ಪೋಷಣೆ ಪ್ರತಿಯೊಬ್ಬರದ್ದಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಪಟ್ಟಣದ ಹೊರವಲಯದಲ್ಲಿರುವ ಕುಮಾರೇಶ್ವರ ಸಸ್ಯೋಧ್ಯಾನದಲ್ಲಿ ತಾಲೂಕಾ ಆಡಳಿತದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಯಂಕೃತ ಅಪರಾಧಗಳಿಂದ ಪರಿಸರ ನಾಶವಾಗುತ್ತಿದ್ದು, ಇದರ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲು ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದರಿಂದ ಪಾರಾಗಬೇಕಾದರೆ ಪರಿಸರ ರಕ್ಷಣೆಯೊಂದೆ ಮಾರ್ಗೋಪಾಯ. ಇಲ್ಲವಾದರಲ್ಲಿ ಎಟಿಎಂ ರೂಪದಂತೆ ಭಾರತದಲ್ಲಿ ಆಕ್ಷಿಜನ್ ಕೇಂದ್ರ ತೆರಯುವ ದಿನ ಭವಿಷ್ಯದಲ್ಲಿ ನಮ್ಮದಾಗಬಹುದು. ಬೇರೆಯವರಿಗಾಗಿ ಅಲ್ಲದಿದ್ದರೂ ನಮಗಾಗಿಯಾದರೂ ಗಿಡ ನೆಡುವ ಸಂಸ್ಕøತಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಶಕುಂತಲಾ ಚೌಗಲಾ ಮಾತನಾಡಿ, ಆಚರಣೆಗೆ ಮಾತ್ರ ಪರಿಸರ ದಿನಾಚರಣೆಯನ್ನು ಸಿಮೀತಗೊಳಿಸದೆ, ಸಸ್ಯೋಧಾನದಲ್ಲಿ ನೂರಾರು ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಸದಸ್ಯರುಗಳಾದ ಕಲ್ಯಾಣ ಕುಮಾರ ಶೆಟ್ಟರ, ಯಲ್ಲಮ್ಮ ಕಂಚಿಗೊಲ್ಲರ, ರೈತ ಸಂಘಟ ತಾಲೂಕಾಧ್ಯಕ್ಷ ಮರೀಗೌಡಾ ಪಾಟೀಲ, ಉಪಾಧ್ಯಕ್ಷ ಅಡಿವೆಪ್ಪನವರ ಆಲದಕಟ್ಟಿ, ಜವಳಿ ವರ್ತಕ ಇಷ್ಟಲಿಂಗ ಸಾಲವಟಿಗಿ, ಎಸಿಎಫ್ ಬಿ.ಪಿ. ದುದಗಿ ಉಪಸ್ಥಿತರಿದ್ದರು.

ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ ಸ್ವಾಗತಿಸಿದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಸವರಾಜ ಅರಿಶಿಣದ ವಂದಿಸಿದರು. ಜಯಲಕ್ಷ್ಮಿ ಆರ್. ನಿರೂಪಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ, ತಾಲೂಕಾ ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು, ವಿವಿಧ ಪ್ರೌಢಶಾಲೆ ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿದ ತಾಲೂಕಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ರೋಶನಿ ಪ್ರೌಢಶಾಲೆಯ ಚಂದನ ಗುಡಿ, ಹಿರೇಕಣಗಿ ಪ್ರೌಢಶಾಲೆಯ ಐಶ್ವರ್ಯ ಹಿರೇಗೌಡರ ಮತ್ತು ಕಂಚಿನೆಗಳೂರು ಪ್ರೌಢಶಾಲೆಯ ಮುಜಮುಲ್ಲಾ ಮೂಲಿಮನಿಗೆ ಪ್ರಶಸ್ತಿ ನೀಡಲಾಯಿತು.
ನಂತರ ಕುಮಾರೇಶ್ವರ ಮತ್ತು ಜನತಾ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳು ಪರಿಸರ ಜಾಗೃತಿ ನೃತ್ಯ ಪ್ರಸ್ತುತಪಡಿಸಿದರು.

loading...