ಪರಿಸರ ಬಗೆಗೆ ಸಾರ್ವಜನಿಕರ ಅಲಕ್ಷ ಸಲ್ಲದು: ಡಾ. ತೋಂಟದ ಶ್ರೀಗಳು

0
17
loading...

ಗದಗ : ಜೀವಸಂಕುಲದ ಎಲ್ಲ ಮೂಲಭೂತ ಅವಶ್ಯಕತೆಗಳನ್ನು ಪ್ರಕೃತಿ ಪೂರೈಸುತ್ತಿದೆ. ಪ್ರಕೃತಿಯ ಆರಾಧಕನಾಗಬೇಕಿದ್ದ ಮನುಷ್ಯ, ದುರಾಸೆಗಳಿಗಾಗಿ ನಿರಂತರ ಶೋಷಣೆ ನಡೆಸುತ್ತಿದ್ದಾರೆ. ತತ್ಪರಿಣಾಮವಾಗಿ ಇಂದು ಪರಿಸರ ಅಪಾಯದ ಗಂಟೆಯನ್ನು ಬಾರಿಸುತ್ತಿದೆ. ಈ ಭಾಗದ ಏಕೈಕ ಅರಣ್ಯ ಪ್ರದೇಶವಾಗಿರುವ ಕಪ್ಪತಗುಡ್ಡದದಲ್ಲಿ ಮತ್ತೆ ಗಣಿಗಾರಿಕೆಯ ಪ್ರಯತ್ನಗಳು ನಡೆಯುತ್ತಿದೆ. ಹೋರಾಟದ ಮೂಲಕ ಪರಿಸರವನ್ನು ಉಳಿಸಿಕೊಳ್ಳಬೇಕಾಗಿ ಬಂದಿರುವ ಪರಿಸ್ಥಿತಿ ನಿಜಕ್ಕೂ ವಿಷಾದನೀಯ ಎಂದು ಡಾ. ತೋಂಟದ ಶ್ರೀಗಳು ಅಭಿಪ್ರಾಯಪಟ್ಟರು.

ಅವರು ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರದ ಬಗೆಗೆ ಸಾರ್ವಜನಿಕರ ಅಲಕ್ಷ ಸಲ್ಲದು. ಅದನ್ನು ಕಾಪಾಡಿದಾಗ ಮತ್ತು ಅದು ನಮ್ಮನ್ನು ಕಾಪಾಡುತ್ತದೆ. ಅತ್ಯಮೂಲ್ಯ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ £ೀಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ವಿಷಯವಾಗಿ ಉಪನ್ಯಾಸ £ೀಡಿದ ಗದುಗಿನ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ ಜಿ.ಎಸ್.ಶಿರಸಿ ಅವರು ನಾಗರೀಕತೆ ಬೆಳೆದಂತೆಲ್ಲ ಕೃಷಿ ಪ್ರಾಧಾನ್ಯತೆಯನ್ನು ಪಡೆದುಕೊಂಡು ಅರಣ್ಯ ನಾಶಕ್ಕೆ ಕಾರಣವಾಯಿತು. ಜೀವಿಗಳಿಗೆ ಪೂರಕವಾದ ಸಂಪನ್ಮೂಲವನ್ನು ಒದಗಿಸುವ ಅರಣ್ಯ ಸಂಪತ್ತು ಮಾನವನ ಅತಿಆಸೆಗೆ ಬಲಿಯಾಯಿತು. ಇಂದು ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಅರಣ್ಯವನ್ನು ಹೊಂದಿದ್ದು, ಜೀವಿಗಳ ಆರೋಗ್ಯದ ಮೇಲೆ ದುಷ್ಟರಿಣಾಮವನ್ನು ಬೀರುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ ಕೂಡಾ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಕೈಗಾರಿಕೆ ಮತ್ತು ವಾಹನಗಳ ಹೆಚ್ಚಳದಿಂದ ಇಂಗಾಲದ ಪ್ರಮಾಣ ಹೆಚ್ಚಾಗಿ ಹಸಿರುಮನೆ ಪರಿಣಾಮವನ್ನು ಇಂದು ಭೂಮಂಡಲ ಎದುರಿಸುತ್ತಿದೆ. ನೀರಿನ ಸಂಸ್ಕøತಿಯನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಸೋನಲ್ ವೃಷ್ಣಿ ಅವರು ಮಾತನಾಡಿ, ಪರಿಸರ ರಕ್ಷಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ಅಧಿಕವಾಗಿದೆ. ಪರಿಸರ ಎಂದರೆ ಕೇವರ ಗಿಡಮರಗಳಲ್ಲ. ನೈಸರ್ಗಿಕ ಎಲ್ಲ ಸಂಪನ್ಮೂಲಗಳ ರಕ್ಷಣೆ ಮತ್ತು ಮಿತಬಳಕೆ ಬಗ್ಗೆ ಗಮನಹರಿಸಬೇಕು. ನೀರು ಮತ್ತು ನಾವು ಸೇವಿಸುವ ಆಹಾರವನ್ನು ಕೂಡ ಅಗತ್ಯಕ್ಕೆ ತಕ್ಕಂತೆ ಬಳಸುವದು ಮುಖ್ಯವಾದುದು ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿರೋಳ ಐ.ಟಿ.ಐ. ಕಾಲೇಜಿನ ಹಿರಿಯ ತರಬೇತಿ ಅಧಿಕಾರಿಗಳಾದ ವೀರನಗೌಡ್ರ ಮರಿಗೌಡ್ರ ಇವರು ಮಾತನಾಡಿದರು. ವೇದಿಕೆ ಮೇಲೆ ಪ್ರಾಚಾರ್ಯ ಎಸ್.ಎಸ್.ಅಂಗಡಿ ಉಪಸ್ಥಿತರಿದ್ದರು.
ಸೇವಾ ನಿವೃತ್ತಿಯನ್ನು ಹೊಂದಿರುವ ಪ್ರಾ. ಎಸ್.ಎಸ್.ಪಟ್ಟಣಶೆಟ್ಟಿ ಅವರು ಮಾತನಾಡಿ, ಜ್ಞಾನದಾಸೋಹವನ್ನು ನೀಡುವ ಹಿನ್ನೆಲೆಯಲ್ಲಿ ಶ್ರೀಗಳ ಆಶಯದಂತೆ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಪ್ರಾರಂಭದಲ್ಲಿ ಪೂಜ್ಯರು ಐ.ಟಿ.ಐ. ಸಂಸ್ಥೆಗಳ ಸ್ಥಾಪನೆಗೆ ಒತ್ತು ನೀಡಿದರು. ಸ್ವಾವಲಂಬಿ ಬದುಕನ್ನು ಸಾಗಿಸುವ ನಿಟ್ಟಿನಲ್ಲಿ ಶ್ರೀಗಳ ಚಿಂತನೆ ಅದ್ಭುತವಾದದ್ದು ಅಧ್ಯಯನ, ಅಧ್ಯಾಪನದ ಜೊತೆಗೆ ವಿದ್ಯಾಪೀಠದಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ಶ್ರೀಗಳ ಆಶಯಕ್ಕೆ ತಕ್ಕಂತೆ ಕಾರ್ಯ ಮಾಡಿದ ಅನುಭವಗಳನ್ನು ಹಂಚಿಕೊಂಡರು.

ಪ್ರಾ. ಎಸ್.ಎಸ್.ಪಟ್ಟಣಶೆಟ್ಟಿ ಹಾಗೂ ವಿ.ಎಸ್.ಗವಾಯಿ ಅವರನ್ನು ತೋಂಟದ ಶ್ರೀಗಳು ಸಂಮಾನಿಸಿದರು. ವನಮಾಲಾ ಮಾನಶೆಟ್ಟಿ, ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ ಜರುಗಿತು. ಧರ್ಮಗ್ರಂಥ ಪಠಣವನ್ನು ಕುಮಾರಿ ಪ್ರಕೃತಿ ಗಂಗಾಧರ ಗೆದಿಗೇರಿ ಹಾಗೂ ವಚನ ಚಿಂತನೆಯನ್ನು ಸುಜಾತಾ ಗಂಗಾಧರ ಗೆದಿಗೇರಿ ಇವರು ನೆರವೇರಿಸಿದರು. ಜಿ.ಪಿ.ಕಟ್ಟಿಮನಿ ನಿರೂಪಿಸಿದರು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.

loading...