ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಪ್ರೊ.ಜಿ.ಕೆ. ಖಡಬಡಿ

0
38
loading...

ಬೆಳಗಾವಿ: ಅಭಿವೃದ್ಧಿಯ ಹೆಸರಿನಲ್ಲಿ ಗಿಡ-ಮರಗಳನ್ನು ನಾಶ ಮಾಡುವುದನ್ನು ಬಿಟ್ಟು, ಪರಿಸರ ರಕ್ಷಣೆ ಮಾಡಲು ಎಲ್ಲರು ಮುಂದೆ ಬರಬೇಕೆಂದು ಮಿತ್ರ ಸಂಘದ ಅಧ್ಯಕ್ಷ ಪ್ರೊ.ಪ್ರೊ.ಜಿ.ಕೆ. ಖಡಬಡಿ ಹೇಳಿದರು.
ಅವರು ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಮಹಾನರಗ ಪಾಲಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಾ. ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪರಿಸರ ಮಿತ್ರ ಸಂಘ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದವರು, ಮಾನವರು ಇಂದು ತಮ್ಮ ಸ್ವಾರ್ಥಕ್ಕಾಗಿ ಪರಿಸರಕ್ಕೆ ಹಾನಿ ಉಂಟು ಮಾಡುವುದನ್ನು ನಿಲ್ಲಿಸಿ, ಪರಿಸರ ರಕ್ಷಣೆ ಮಾಡಬೇಕು ಮತ್ತು ಪ್ರತಿಯೊಂಬರಿಗೂ ಪರಿಸದ ಬಗ್ಗೆ ಕಾಳಜಿ ಇರಬೇಕು. ಅದನ್ನು ಮರೆತು ತಮ್ಮ ದುರಾಸೆಗಳನ್ನು ಈಡೇರಿಸಿಕೊಳ್ಳಲು ಅರಣ್ಯವನ್ನು ಹಾಳು ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಷಾಧವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಡಾ. ನಿರಂಜನ ಪ್ರಣವ ಸ್ವರೂಪ ಸ್ವಾಮಿಜೀವರು ಮಾತನಾಡಿ ಮನುಷ್ಯರು ಇಂದು ಉತ್ತಮವಾಗಿರುವ ಪರಿಸರದಿಂದ ಕೂಡಿದ ದೇಶ ನಿರ್ಮಾಣ ಮಾಡುವದನ್ನು ಮರೆತು ಕಾಂಕ್ರೆÃಟ್ ದೇಶ ನಿಮಾರ್ಣಕ್ಕೆ ಕೈ ಹಾಕಿದ್ದಾನೆ. ಇದರಿಂದ ವಾತವರಣದಲ್ಲಿ ಅಸಮತೋಲನ ಉಂಟಾಗಿ ಪ್ರಕೃತಿಕ ವಿಕೋಪಗಳಿಗೆ ಹಾದಿ ಮಾಡಿಕೊಡುತ್ತಿದ್ದಾನೆ. ಇದನ್ನೆÃಲ್ಲ ತಡೆಗಟ್ಟಲು ನಮ್ಮ ಯುವಕರು ಮುಂದೆ ಬಂದು ನಾಡು ರಕ್ಷಣೆಗಾಗಿ ಕಾಡು ರಕ್ಷಣೆ ಮಾಡಲು ಸಜ್ಜಾಗಬೇಕೆಂದರು. ಪರಿಸರ ಉಳಿಸುವುದು ಇಂದಿನ ಯುಗದಲ್ಲಿ ಅವಶ್ಯವಾಗಿದೆ. ಪರಿಸರ ರಕ್ಷಣೆ ಮಾಡುವುದು ನಮ್ಮೆಲರ ಹೊಣೆ. ವಿದ್ಯಾರ್ಥಿಗಳಿಗೆ ಗಿಡ ನೆಡಲು ಪ್ರೆÃರಣೆ ನೀಡಿ ಎಂದು ಆರ್ಶಿವಚನ ನೀಡಿದರು.
ವಿಶ್ವ ಸಂಸ್ಥೆಯ ಈ ವರ್ಷ “ಪ್ಲಾಸ್ಟಿಕ್ ಮಾಲಿನ್ಯ ತಡೆಯೋಣ” ಎಂಬ ವ್ಯಾಖ್ಯಾವನ್ನು ಘೋಷಣೆ ಮಾಡಿದೆ ಆ ವ್ಯಾಖ್ಯಾದಂತೆ ಪ್ಲಾಸ್ಟಿಕ್ ಮುಕ್ತ ನಾಡು ನಿರ್ಮಾಣ ಮಾಡಲು ಎಲ್ಲರು ಬದ್ಧರಾಗೋಣ ಎಂದರು.
ಈ ವೇಳೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಮಾತನಾಡಿದರು. ಅರಣ್ಯ ಇಲಾಖೆಯ ವತಿಯಂದ ಸಸಿಗಳ ಮತ್ತು ಕೈಚೀಲ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಅರಣ್ಯ ಉಪಸಂರಕ್ಷಾಣಾಧಿಕಾರಿ ಅಶೋಕ ಪಾಟೀಲ, ಎಸ್. ಎಸ್ ಹೈಸ್ಕೂಲ್ ಉಪಪ್ರಾಂಶುಪಲರು ಕೆ.ಬಿ. ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರು ವಿಜಯಕುಮಾರ ಮಗದಮ್, ಲಘು ಉದ್ಯೊಮಿ ಪ್ರಿÃಯಾ ಪುರಾಣಿಕ್, ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಮೋಹನ ಗುಂಡ್ಲೂರ, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು.

loading...