ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿ: ಕಲ್ಮೇಶ

0
13
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : ಪರಿಸರ ಸಮತೋಲನ ಕಾಪಾಡಿ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಹಸಿರಿನ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ಹಾಗೆಯೇ ಇತರರಿಗೆ ತಿಳಿ ಹೇಳುವುದು ಕೂಡಾ ನಮ್ಮ ಜವಾಬ್ದಾರಿಯಾಗಿದೆ ಎಂದು ಪ.ಪಂ ಅಧ್ಯಕ್ಷ ಕಲ್ಮೇಶ ತೊಂಡಿಹಾಳ ಹೇಳಿದರು.

ಪಟ್ಟಣದ ಭೂತನಾಥೇಶ್ವರ ದೇವಸ್ತಾನದ ಆಸ್ತಾನದ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಮಂಗಳವಾರ ವಿಶ್ವ ಪರಿಸರ ದಿಣಾಚರಣೆ ಅಂಗವಾಗಿ ಹಮ್ಮಿಕೋಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮತನಾಡಿದರು.
ಹೆಚ್ಚುತ್ತಿರುವ ತಾಪಮಾನ, ಜನಸಂಖ್ಯೆ, ಕ್ಷೀಣಿಸುತ್ತಿರುವ ಮರಗಳು ಕಾರ್ಖಾನೆಗಳ ಮಾಲಿನ್ಯಕಾರಕ ಹೊಗೆಯಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದೆ. ಇದರಿಂದಾಗಿ ಉಸಿರಾಟ ತೊಂದರೆ ಅನುಬವಿಸುತ್ತಿದ್ದೇವೆ. ಅದನ್ನು ತಪ್ಪಿಸಿ ಎಲ್ಲರೂ ಆರೋಗ್ಯವಂತರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದರು.

ಪ.ಪಂ ಉಪಾಧ್ಯಕ್ಷೆ ಶಿವಮ್ಮ ಬಾದನಟ್ಟಿ, ಪ.ಪಂ ಸದಸ್ಯ ಯಲ್ಲಪ್ಪ ಮಣ್ಣೊಡ್ಡರ, ಕಾದರಬಾಷಾ ಹೊಲಗೇರಿ, ಬಸಮ್ಮ ಲಕ್ಕನಗೌಡ್ರ, ಯಲ್ಲವ್ವ ಕೊಂಡಿ, ಅನ್ನಪೂರ್ಣ ಗಿಂಡಿ ಜಯಶ್ರೀ ನಾಶಿಪುಡಿ ಇದ್ದರು.

loading...