ಪಾಲಕ, ಶಿಕ್ಷಕರಿಗಾಗಿ ಸಂಸ್ಕಾರ-ಸಂಸ್ಕೃತಿ ವಿಶೇಷ ಕಾರ್ಯಾಗಾರ

0
22
loading...

ಕುಮಟಾ: ಇಲ್ಲಿನ ಎ ವಿ ಬಾಳಿಗಾ ಮಹಾವಿದ್ಯಾಲದ ಇಂಗ್ಲೀಷ್‌ ಪ್ರೈಮರಿ ಶಾಲೆಯಲ್ಲಿ ಪಾಲಕರು ಹಾಗೂ ಶಿಕ್ಷಕರಿಗಾಗಿ ಸಂಸ್ಕಾರ-ಸಂಸ್ಕೃತಿ ಎಂಬ ವಿಶೇಷ ಕಾರ್ಯಾಗಾರ ಜರುಗಿತು.
ಶಿರಸಿ-ಸಿದ್ದಾಪುರದ ವಕೀಲರು ಹಾಗೂ ಹಿಂದಿನ ಜಿಲ್ಲಾ ಲಯನ್ಸ್‌ ಗವರ್ನರ್‌ ರವಿ ಹೆಗಡೆ ಹೂವಿನಮನೆ ಎಂಬ ವಿಶೇಷ ಕಾರ್ಯಾಗಾರ ನಡೆಸಿಕೊಟ್ಟಿದ್ದು, ಮಕ್ಕಳನ್ನು ಯಾವ ರೀತಿ ಉತ್ತಮ ಸಂಸ್ಕಾರದೊಂದಿಗೆ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆಸಬೇಕು, ಇದರಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರವೇನು. ಮುಖ್ಯವಾಗಿ ಶಿಕ್ಷಕರ ಹಾಗೂ ಪಾಲಕರ ವರ್ತನೆ ಹೇಗಿರಬೇಕು, ಅದು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಕ್ರೀನ್‌ ಅಳವಡಿಸಿ ಅದರ ಮುಖಾಂತರ ವಿವರಿಸಿ ತಿಳಿಸಿದರು.
ಕಾರ್ಯಕ್ರಮದ ಮೊದಲು ಆಡಳಿತ ಮಂಡಳಿಯು ಪಾಲಕರು ತಮ್ಮ ಮಕ್ಕಳಿಗೆ ಏನಾದರೂ ಅನಾನುಕೂಲತೆ ಹಾಗೂ ಬದಲಾವಣೆಗಳಿದ್ದರೆ ತಿಳಿಸಲು ಮುಕ್ತ ಅವಕಾಶ ಕಲ್ಪಿಸಿದ್ದು, ಅನೇಕ ಪಾಲಕರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ ಪ್ರಭು ಮಾತನಾಡಿ, ರವಿ ಹೆಗಡೆಯವರ ಸಾಧನೆ ಅದ್ಭುತ. ಅವರು ಅನೇಕ ದೇಶಗಳಲ್ಲಿ ತಮ್ಮ ವಿಚಾಧಾರೆಯನ್ನು ನೀಡಿ ಬಂದವರು. ಅವರ ಈ ಹೊಸ ಕಲ್ಪನೆ ತಾವೂ ಕೂಡ ಅವಡಿಸಿಕೊಳ್ಳಲು ಅನುಕೂಲ ಆಗಲಿ ಅದರಿಂದ ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರ ಸಂಸ್ಕೃತಿ ನೀಡಿ ಬೆಳೆಸಲು ಸಹಾಯ ಆಗುತ್ತದೆ ಎಂಬ ನಿಟ್ಟಿನಲ್ಲಿ ಅವರನ್ನು ಕರೆಸಿ ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಈ ಸಂಸ್ಕಾರ ಸಂಸ್ಕೃತಿ ಕಾರ್ಯಕ್ರಮ ಪಾಲಕರ ಶಿಕ್ಷಕರ ಹಾಗೂ ಮಕ್ಕಳ ನಡುವೆ ಉತ್ತಮ ಬಾಂಧವ್ಯ ಬೆಸೆಯುತ್ತದೆ. ಅಲ್ಲದೇ ಮಕ್ಕಳಿಗೆ ಅವರ ಕಲಿಕೆಗೆ ಸಹಾಯಕಾರಿ ಎಂದರು.
ವೇದಿಕೆಯಲ್ಲಿ ಶಾಲೆಯ ಚೇರಮನ್‌ ಹಾಗೂ ಕೆನರಾ ಕಾಲೆಜು ಸೊಸೈಟಿ ಸದಸ್ಯ ಅನಂತ ಪಿ ಶಾನಭಾಗ, ಅತಿಥಿಗಳಾಗಿ ಹರಿ ಪೈ, ಅಶೋಕ ಶಾನಭಾಗ ಉಪಸ್ಥಿತರಿದ್ದರು.
ಶಿಕ್ಷಕಿ ಸ್ವಾತಿ ಪೈ ದೇವರ ಸ್ತುತಿ ಹಾಡಿದರು. ಶಾಲೆಯ ಮುಖ್ಯೋಧ್ಯಾಪಕಿ ಪ್ರಿಯಾ ನರೋನಾ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ಲೋಕೇಶ್ವರ ನಿರೂಪಿಸಿದರು. ಶಿಕ್ಷಕಿ ರೇಖಾ ಹರಿಕಾಂತ ವಂದಿಸಿದರು.

loading...