ಹಾಲುಮತ ಸಮಾಜದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:ಪೂಜೇರಿ

0
26
loading...

ಹಾಲುಮತ ಸಮಾಜದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:ಪೂಜೇರಿ

*ಕನ್ನಡಮ್ಮ ಸುದ್ದಿ-ಸಂಕೇಶ್ವರ:ವಿಧ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲ್ಲೂಕಿನ ಕುರುಬ ಸಮಾಜದ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ವಿಧ್ಯಾರ್ಥಿಗಳಿಗೆ ತಾಲ್ಲೂಕು ಹಾಲುಮತ ಸಮಾಜ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದೆ ಎಂದು ಹಾಲುಮತ ಸಮಾಜದ ಮುಖಂಡ ಭರಮ್ಮಾ ಪೂಜೇರಿ ತಿಳಿಸಿದ್ದಾರೆ.

ಬುಧವಾರ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಹಿಂದುಳಿದ ಹಾಲುಮತ ಸಮಾಜದ ವಿಧ್ಯಾರ್ಥಿಗಳ ಪ್ರೋತ್ಸಾಹ ನೀಡಲು ತಾಲೂಕಿನ ಕುರುಬ ಸಮಾಜದ ವಿಧ್ಯಾರ್ಥಿಗಳು ೨೦೧೭/೧೮ ಸಾಲಿನ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 80 ಕಿಂತ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ .ಅರ್ಹ ವಿಧ್ಯಾರ್ಥಿಗಳು ಜೂ.೨೦ ಒಳಗಾಗಿ ಅರ್ಜಿ ಸಲ್ಲಿಸಬೇಕೆಂದು ಹೇಳಿದರು.ಹೆಚ್ಚಿನ ಮಾಹಿತಿಗಾಗಿ 9449492777,8880777389,7899596299 ನಂ ಸಂಪರ್ಕಿಸಲು ಕೋರಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಹಾಲುಮತ ಸಮಾಜದ ಮುಖಂಡರಾದ ಪುಂಡಲಿಕ ಕುರಬರ ಹಾಗೂ ಇತರರು ಇದ್ದರು.

loading...