ಪೆಟ್ರೋಲ್ 6 ಪೈಸೆ, ಡೀಸೆಲ್ 5 ಪೈಸೆ ಇಳಿಕೆ

0
19
loading...

ನವದೆಹಲಿ- ಪೆಟ್ರೋಲ್ ಲೀಟರ್ ದರ 6 ಪೈಸೆ ಮತ್ತು ಡೀಸಿಲ್ ಲೀಟರ್ ದರ 5 ಪೈಸೆಯಷ್ಟು ದೆಹಲಿಯಲ್ಲಿ ಇಳಿಕೆಯಾಗಿವೆ. ಆದ್ದರಿಂದ ದೆಹಲಿಯಲ್ಲಿ ಇಂದು ಪೆಟ್ರೋಲ್ ಲೀಟರ್‍ಗೆ 78.29 ರು. ಮತ್ತು ಡೀಸೆಲ್ ಲೀಟರ್ ಗೆ 69.20 ರು.ಗೆ ಇಳಿಕೆಯಾಗಿದೆ.
ಇಂದಿನ ಪರಿಷ್ಕೃತ ಪೆಟ್ರೋಲ್ ದರ ಲೀಟರಿಗೆ ಕೋಲ್ಕತದಲ್ಲಿ 89.92, ಮುಂಬಯಿಯಲ್ಲಿ 86.10 ಮತ್ತು ಚೆನ್ನೈನಲ್ಲಿ 81.28 ರು. ಇದೇ ಅನುಕ್ರಮದಲ್ಲಿ ಡೀಸೆಲ್ ಲೀಟರ್ ಬೆಲೆ 71.75, 73.67 ಮತ್ತು 73.06 ರು ಆಗಿದೆ.
ನಿರಂತರ 16 ದಿನಗಳ ಏರಿಕೆಯನ್ನು ಕಾಣುತ್ತಲಿರುವ ಇಂಧನ ಬೆಲೆ ಮೂರು ದಿನಗಳ ಹಿಂದೆ ಹಾಸ್ಯಾಸ್ಪದವಾಗಿ 1 ಪೈಸೆಯ ಇಳಿಕೆಯನ್ನು ಕಂಡಿತ್ತು. ಆ ಬಳಿಕ ನಿನ್ನೆ ಪೆಟ್ರೋಲ್ ಗೆ 7 ಪೈಸೆ ಮತ್ತು ಡೀಸಿಲ್ ಗೆ 5 ಪೈಸೆಯ ಕಡಿತ ಮಾಡಿತ್ತು.
ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಸುಮಾರು 16 ದಿನಗಳ ಕಾಲ ಪೆಟ್ರೋಲ್, ಡೀಸೆಲ್ ದೈನಂದಿನ ದರ ಪರಿಷ್ಕರಣೆಯನ್ನು ತಡೆ ಹಿಡಿಯಲಾಗಿತ್ತು. ಮೇ 14 ರಂದು ಮತ್ತೆ ಆರಂಭಗೊಂಡ ಈ ಪ್ರಕ್ರಿಯೆಯಲ್ಲಿ ತೈಲೋತ್ಪನ್ನಗಳು ನಿರಂತರ 16 ದಿನಗಳ ಏರಿಕೆಯನ್ನು ಕಂಡು ದೇಶಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿತ್ತು. 

loading...