ಪ್ರತಿಯೊಬ್ಬರಿಗೆ ಆರ್ಥಿಕ ನೆರವೀನ ಅವಶಕ್ಕತೆ ಇದೆ

0
56
loading...

ಕಾಗವಾಡ: ಸಮಾಜದಲ್ಲಿ ಪ್ರತಿಯೊಬ್ಬರಿಗೆ ಆರ್ಥಿಕ ನೆರವೀನ ಅವಶಕ್ಕತೆ ಇದೆ. ಇವುಗಳಗಾಗಿ ಆರ್ಥಿಕ ಸಂಸ್ಥೆಗಳು ಹುಟ್ಟ ಹಾಕಿದ್ದಾರೆ. ಹಣ ಸಂಗ್ರಹಿಸುವರು ಖಾತೆದಾರರು, ಹಣ ಸೌರಕ್ಷಣೆ ಮಾಡುವವರು ಸಂಸ್ಥೆಗಳು, ಅವಶಕ್ಕತೆ ಇದಲ್ಲಿ ಹಣ ತಗೇದುಕೊಂಡು ಹೋಗುವವರು ಸಾಲಗಾರರು, ಈ ಮೂರರಲ್ಲಿ ಪ್ರಾಮಾಣಿಕತೆ ಇದ್ದರೆ ಮಾತ್ರ ಮೂರು ಜನ ಒಳ್ಳೆ ರೀತಿಯಿಂದ ಬಾಳಬಹುದು. ಒಬ್ಬರ ಮನಸ್ಸು ಕಲುಶೀತವಾದರೆ ಆರ್ಥಿಕ ವ್ಯವಸ್ಥೆ ಸಮಸ್ಯೆಗಳಲ್ಲಿ ಸಿಲಕುವುದು ಖಚಿತ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪ.ಪೂ. ಸಿದ್ಧೇಶ್ವರ ಸ್ವಾಮಿಜಿ ಹೇಳಿದರು.
ಉಗಾರ ಖುರ್ದ ಪಟ್ಟಣದಲ್ಲಿ ಜನತಾ ಸಹಕಾರಿ ಬ್ಯಾಂಕ್ ಹಾರೂಗೇರಿ ಶಾಖೆಯ ನೂತನ ಕಟ್ಟಡದ ಉದ್ಘಾಟನೆ ಪ.ಪೂ. ಸಿದ್ಧೇಶ್ವರ ಸ್ವಾಮಿಜಿ ಇವರ ನೆರವೇರಿಸಿ ಮಾತನಾಡಿದರು.
ಸಿದ್ಧೇಶ್ವರ ಸ್ವಾಮಿಜಿ ಮಾತನಾಡುವಾಗ, ನಿಸರ್ಗ ನಮಗೆ ಎನೆಲ್ಲಾ ನೀಡಿದೆ. ಸೂರ್ಯ, ಚಂದ್ರ, ಗಾಳಿ, ನಕ್ಷತ್ರಗಳು ಯಾವದೇ ತಾರ ತಮ್ಯ ಮಾಡದೆ, ಸಮಾನವಾಗಿ ನೀಡಿದೆ. ಅದರ ಋಣ ನಾವು ಅಲ್ಪ-ಸ್ವಲ್ಪ ತೀರಿಸಲು ಮುಂದಾಗಬೇಕು. ಇದೆ ರೀತಿ ಜನತಾ ಬ್ಯಾಂಕ್ ದೀ. ಬಿ.ಆರ್.ಪಾಟೀಲ ಇವರು ಕಟ್ಟಿಸಿ, ನಮಗೆ ಸಹಾಯ ನೀಡಿದ್ದಾರೆ. ಆಧ್ಯಕ್ಷ ರಾಜಶೇಖರ್ ಪಾಟೀಲರೊಂದಿಗೆ, ಒಂದುಗುಡಿ ನಾವು ಅವರಿಗೆ ಪ್ರೋಸ್ತಾಹನ ನೀಡೋಣ ಎಂದು ಹೇಳಿದರು.
ಕಣೇರಿ ಮಠದ ಜುಗದ್ಗುರು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಜಿ ಮಾತನಾಡುವಾಗ, ಆರ್ಥಿಕ ಸಂಸ್ಥೆಗಳು ಸಧ್ಯ ಸ್ಥಿತಿಯಲ್ಲಿ ಸಮಸ್ಯೆಗಳಲ್ಲಿ ಇದ್ದರು, ಜನತಾ ಬ್ಯಾಂಕ್ 120 ಕೋಟಿ ರೂ. ದುಡಿಯುವ ಬಂಡವಾಡ, 100 ಕೋಟಿ ಡಿಪಾಜಿಟ್, 60 ಕೋಟಿ ರೂ. ಸಾಲ ನೀಡಿದ್ದಾರೆ. ಇದು ಒಂದು ಒಳ್ಳೆ ಸಂಸ್ಥೆ ಎಂದರು.
ಪ.ಪೂ. ಕೈವಲ್ಯಾನಂದ ಸ್ವಾಮಿಜಿ, ಮಹಾಂತ ದೇವರು, ಬಸವಲಿಂಗ ಸ್ವಾಮಿಜಿ ಆಶಿರ್ವಚಿಸಿದರು. ಮಾಜಿ ಸಹಕಾರ ಸಚಿವ ಲಕ್ಷ್ಮಣ ಸವದಿ, ಕುಡಚಿ ಶಾಸಕ ಪಿ.ರಾಜೀವ್, ರಾಜ್ಯ ಮಹಾಮಂಡಳ ಆಧ್ಯಕ್ಷ ಡಿ.ಟಿ ಪಾಟೀಲ ಇವರು ಆರ್ಥಿಕ ಸಂಸ್ಥೆಗಳು ಸಮಸ್ಯೆಗಳಲ್ಲಿ ಇದ್ದರು ಒಳ್ಳೆ, ಪ್ರಾಮಾಣಿಕ, ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಇಂತಹ ಸಂಸ್ಥೆಗಳು ಜನರ ನೆರವೀಗೆ ಬರಲು ಸಾಧ್ಯ ಎಂದರು.
ಸಮಾರಂಭದ ಆಧ್ಯಕ್ಷತೆ ಮಾಜಿ ಶಾಸಕ ರಾಜು ಕಾಗೆ ವಹಿಸಿ ಮಾತನಾಡುವಾಗ, ತಗೇದುಕೊಂಡ ಸಾಲ ಅದೇ ಕಾರ್ಯಕ್ಕಾಗಿ ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಸ್ಥೆ ಒಳ್ಳೆ ರೀತಿಯಿಂದ ಕಾರ್ಯನಿರ್ವಹಿಸಬಹುದು ಎಂದರು.
ಬ್ಯಾಂಕಿನ ಆಧ್ಯಕ್ಷ ರಾಜಶೇಖರ್ ಪಾಟೀಲ ಇವರಿಗೆ ಸ್ವಾಮಿಜಿಗಳಿಂದ ಶ್ರೀ ಸಿದ್ಧೇಶ್ವರ ಪ್ರತಿಮೆ ನೀಡಿ ಸನ್ಮನಿಸಿದರು. ಉಗಾರ ಸಕ್ಕರೆ ಕಾರ್ಖಾನೆಯ ಆಧ್ಯಕ್ಷ ರಾಜಾಭಾವು ಶಿರಗಾಂವಕರ್, ಪ್ರಫೂಲ್ ಶಿರಗಾಂವಕರ್, ಅಥಣಿ ಶುಗರ್ಸ್ ಆಧ್ಯಕ್ಷ ಪರಪ್ಪ ಸವದಿ, ಜಮಖಂಡಿ ಶುಗರ್ಸ್ ನಿರ್ದೇಶಕ ಅಶೋಕ ಅವ್ವಕ್ಕನವರ, ಅರವಿಂದ್ ದೇಶಪಾಂಡೆ, ಪ್ರೇಮಲತಾ ರೆಡ್ಡಿ, ಅಪ್ಪಾಸಾಹೇಬ ಕೂಡಲಗಿ ಸೇರಿದಂತೆ ಅನೇಕರು ಇದ್ದರು. ವ್ಯವಸ್ಥಾಪಕ ಶಿವಪುತ್ರ ಅಮರಶೆಟ್ಟಿ ಸ್ವಾಗತಿಸಿ, ಉಗಾರ ಶಾಖೆ ವ್ಯವಸ್ಥಾಪಕ ಅಶೋಕ ಪಾಟೀಲ ವಂದಿಸಿದರು.

loading...