‘ಪ್ರತಿ ಮೂರು ತಿಂಗಳಿಗೆ ರಕ್ತದಾನ ಮಾಡಿ’

0
6
loading...

ಹಿರೇಕೆರೂರ: ಮನುಷ್ಯನ ಜೀವನದಲ್ಲಿ ರಕ್ತದಾನ ಎಂಬುದು ಅತಿ ಸರ್ವಶ್ರೇಷ್ಟ ದಾನವಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲರೂ ರಕ್ತದಾನ ಮಾಡಬಹುದಾಗಿದೆ ಎಂದು ಡಾ.ಬಸವರಾಜ ಹೇಳಿದರು.

ತಾಲೂಕಿನ ಚಿಕ್ಕೆಕೆರೂರ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ಸ್ಟಾö್ಯಂಡಿನ ಆವರಣದಲ್ಲಿ ಜೆಸಿಐ ಬನಶಂಕರಿ ಕ್ಲಬ್, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ವತಿಯಿಂದ ಇತ್ತಿÃಚಿಗೆ ಜರುಗಿದ ಸ್ವಯಂ ಪ್ರೆÃರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಕ್ತದಾನ ಮಾಡುವದರಿಂದ ಅಪಾಯದ ಸುಳಿವಿನಲ್ಲಿ ಸಿಕ್ಕ ರೋಗಿಗಳಿಗೆ ಇದು ಸಂಜೀವಿನಿಯಾಗಿ ಅವರನ್ನು ಸಾವಿನ ದವಡೆಯಿಂದ ಪಾರು ಮಾಡುತ್ತದೆ. ರಕ್ತದಾನ ಮಾಡುವದರಿಂದ ಕೊಬ್ಬಿನಾಂಶ, ರಕ್ತದೊತ್ತಡ ಕಡಿಮೆಯಾಗಿ ದೇಹಾರೋಗ್ಯ ಉತ್ತಮವಾಗಿರುತ್ತದೆ. ಎಂದರು.
ಡಾ.ಚಂದ್ರಗೌಡ, ಜೆಸಿಐ ಬನಶಂಕರಿ ಕ್ಲಬ್ ಅಧ್ಯಕ್ಷೆ ಡಾ.ರೂಪಾ ಗೊಠೆ ಮಾತನಾಡಿದರು.

ಬಸ್ ನಿಲ್ದಾಣದ ವ್ಯವಸ್ಥಾಪಕ ಗೋಪಾಲ ಮಾಸೂರು, ಸುರೇಶ ಕಂಪ್ಲಿ, ಡಾ.ಅರವಿಂದ ಗೋಠೆ ಹಾಗೂ ಸಾರ್ವಜನಿಕರು, ಜೆಸಿಐ ಕ್ಲಬ್ ಸದಸ್ಯರು ಇದ್ದರು.

loading...