ಪ್ರಧಾನಿಗೆ ಪತ್ರ ಬರೆದ  ಮಲ್ಯ

0
11

ಲಂಡನ್- ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಬಹುಕೋಟಿ ರೂ. ಸಾಲ ಎತ್ತುವಳಿ ಮಾಡಿ ಸುಸ್ತಿದಾರರಾಗಿ ವಿದೇಶಕ್ಕೆ ಪರಾರಿಯಾಗಿರುವ ಕಳಂಕಿತ ಉದ್ಯಮಿ ವಿಜಯ್‍ಮಲ್ಯ ತಾವು ಸಾಲ ಮರುಪಾವತಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಮಲ್ಯ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡು ಅವರನ್ನು ದೇಶಭ್ರಷ್ಟ , ಆರ್ಥಿಕ ಅಪರಾಧಿ ಹಾಗೂ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿ 12,500 ಕೋಟಿ ರೂ. ಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಮಲ್ಯ, ತಾವು ಎಲ್ಲ ಬಾಕಿ ಇರುವ ಸಾಲಗಳನ್ನು ಮರು ಪಾವತಿ ಮಾಡುತ್ತೇನೆ ಎಂದು ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.

loading...