ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಹಾನಿಕಾರಕ: ವಿವೇಕವಾಸುದೇವ

0
10
loading...

ಹಿರೇಕೆರೂರ: ಪ್ಲಾಸ್ಟಿಕ್ ಬಳಕೆ ನಮ್ಮೆಲ್ಲರ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಇದರಿಂದ ಪರಿಸರ ಮಾಲಿನ್ಯವಾಗುತ್ತಾ ಸಾಗಿದೆ. ಇದರ ಬಗ್ಗೆ ಈಗಲೆ ಜಾಗ್ರತರಾಗದೆ ಹೋದರೆ ಮುಂದಿನ ದಿನಗಳಲ್ಲಿ ಪ್ರಕೃತಿಯ ಮೇಲೆ ದೊಡ್ಡ ಗಂಡಾಂತರ ತಪ್ಪಿದ್ದಲ್ಲ ಎಂದು ತಹಸೀಲ್ದಾರ ವಿವೇಕವಾಸುದೇವ ಶಣ್ವೆ ಹೇಳಿದರು.

ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿರುವ ಸರ್ವಜ್ಞ ಕಲಾಭವನದಲ್ಲಿ ತಾಲೂಕು ಆಡಳಿತ, ಅರಣ್ಯ ಇಲಾಖೆ, ಪಟ್ಟಣ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ವಿವಿದ ಇಲಾಖೆಗಳ ವತಿಯಿಂದ ಜರುಗಿದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಕ್ಕೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಗಿಡ ಮರಗಳು ನಶಿಸುತ್ತಿದ್ದು, ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವರಿಂದ ಪರಿಸರ ಇಂದು ವಿನಾಶದತ್ತ ಸಾಗಿದೆ. ಇದರಿಂದ ಸಕಲ ಜೀವರಾಶಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಿ, ಮನೆಗೊಂದು ಗಿಡ, ಮರಗಳನ್ನು ಬೆಳಸಿ ಪರಿಸರ ರಕ್ಷಿಸುವುದು ನಮ್ಮೆಲ್ಲರ ಮಹತ್ವವಾದ ಜವಬ್ದಾರಿಯಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೋ.ಎಸ್.ಪಿ.ಗೌಡರ ಪರಿಸರ ಕುರಿತು ಉಪನ್ಯಾಸ ನೀಡಿ, ಭೂಮಿಯ ಮೇಲೆ ನವೀಕರಣ ಹೆಚ್ಚಾದ ಹಾಗೆ, ನದಿಕರಣ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾರಣ 1 ನೇ ತರಗತಿಯಿಂದ ಪಿಯುಸಿ, ಇಂಜನೀಯರಿಂಗ್ ಕಾಲೇಜಿನ ಪಠ್ಯ ವಿಷಯಗಳಲ್ಲಿ ಪರಿಸರ ಕುರಿತು ವಿಶೇಷ ವಿಷಯವನ್ನು ಅಳವಡಿಸು ಮೂಲಕ ವಿದ್ಯಾರ್ಥಿಗಳಿಗೆ ಜಾಗ್ರತಿ ಮೂಡಿಸುವುದು ಅತಿ ಅವಶ್ಯವಾಗಿದೆ ಎಂದರು.

ಪ.ಪಂ ಅಧ್ಯಕ್ಷೆ ರಜಿಯಾಬೇಗಂ ಅಸದಿ, ತಾ.ಪಂ ಅಧ್ಯಕ್ಷ ಹೇಮಣ್ಣ ಮುದಿರೆಡ್ಡೇರ ಮಾತನಾಡಿದರು.
ಜಿ.ಪಂ ಸದಸ್ಯ ಎನ್.ಎಂ.ಈಟೇರ, ಪ.ಪಂ ಉಪಾಧ್ಯಕ್ಷೆ ಶಿವಲೀಲಾ ರಂಗಕ್ಕನವರ, ಸದಸ್ಯರಾದ ರಮೇಶ ತೋರಣಗಟ್ಟಿ, ಕುಸುಮಾ ಬಣಕಾರ, ಗೀತಾ ದಂಡಗಿಹಳ್ಳಿ, ಮಮತಾ ಮಳವಳ್ಳಿ, ರತ್ನವ್ವ ತಿಪ್ಪಣ್ಣನವರ, ತಾ.ಪಂ ಇಒ ಮನೋಹರ ದ್ಯಾಬೇರಿ ಹಾಗೂ ಮತ್ತಿತರರು ಇದ್ದರು.

ಪ.ಪಂ ಮುಖ್ಯಾಧಿಕಾರಿ ರಾಜಾರಾಮ್ ಪವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ವಲಯ ಅರಣ್ಯಾಧಿಕಾರಿ ಪರಮೇಶಪ್ಪ ಪೇಲನವರ ನಿರ್ವಹಿಸಿದರು.

loading...