ಪ್ಲಾಸ್ಟಿಕ್ ಮುಕ್ತ ಬದುಕು ಪರಿಸರಕ್ಕೆ ಪೂರಕ

0
14
loading...

ಅಮೀನಗಡ: ಸುತ್ತಲಿನ ವಾತಾವರಣದಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರ ರಕ್ಷಿಸುವ ಹೊಣೆಯೊಂದಿಗೆ ಪ್ಲಾಸ್ಟಿಕ್ ಮುಕ್ತ ಬದುಕು ಕಟ್ಟಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ನಿವೃತ್ತ ತಹಶೀಲ್ದಾರ್ ಪಿ.ವಿ.ದೇಸಾಯಿ ತಿಳಿಸಿದರು.
ಸಮೀಪದ ಮುರಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಪರಿಸರದ ಇಂದಿನ ದುಸ್ಥಿತಿಗೆ ನಾವೇ ಕಾರಣರಾಗಿದ್ದು ಜಾಗತಿಕವಾಗಿಯೂ ನಾನಾ ಸಮಸ್ಯೆ ಎದುರಿಸುವಂತಾಗಿದೆ. ಇವೆಲ್ಲಕ್ಕೂ ಮನುಷ್ಯನ ಸಹಜ ಬದುಕೊಂದೇ ಪರಿಹಾರ ಮಾರ್ಗ ಎಂದರು.

ತಾಪಂ ಸದಸ್ಯ ಮಂಜುನಾಥ ಗೌಡರ ಮಾತನಾಡಿ, ನಾವೆಲ್ಲರೂ ಪರಿಸರ ರಕ್ಷಿಸುವ ಸಂಕಲ್ಪ ಮಾಡಿಕೊಂಡು ಪ್ರತಿಯೊಬ್ಬರೂ ಒಂದೊಂದು ಗಿಡ ದತ್ತು ಪಡೆದು ಬೆಳೆಸಬೇಕು ಎಂದರು.
ವಿಜ್ಞಾನ ಶಿಕ್ಷಕ ರಮೇಶ ಬಳ್ಳಾ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಲಿನ್ಯದ ಪರಿಣಾಮ ಜಾಗತಿಕ ತಾಪಮಾನ ಹೆಚ್ಚಾಗಿ ಭವಿಷ್ಯದ ಬದುಕು ಆತಂಕ ಪಡುವಂತಾಗಿದೆ. ಆ ನಿಟ್ಟಿನಲ್ಲಿ ಮಕ್ಕಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಪರಿಸರ ರಕ್ಷಣೆ ನಮ್ಮೆಲ್ಲರ ಬದ್ಧತೆ ಆಗಬೇಕಾಗಿದೆ ಎಂದರು. ಕೂಡ್ಲೆಪ್ಪ ಸೂಡಿ, ವೀರೇಶ ಮಸಳಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮಹಾಂತೇಶ ಗಡಚಿಂತಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಓ.ದೇಸಾಯಿ, ಮುಖ್ಯಗುರು ಎಂ.ಆರ್.ನದಾಫ್, ಎಸ್.ಎಸ್.ಭಾವಿಕಟ್ಟಿ, ಟಿ.ಕೆ.ಮುಲ್ಲಾ, ಯು.ಬಿ.ಶಲವಡಿ, ಎ.ಜಿ.ಬಿರಾದಾರ, ಆರ್.ಎಸ್.ಪೂಜಾರಿ, ಎಸ್.ಎಸ್.ಅಂಗಡಿ, ಎಸ್.ಜಿ.ಗೋಡಿ ಇತರರು ಇದ್ದರು.

loading...