ಫಸಲ್ ಭೀಮಾ ಯೋಜನೆಯಲ್ಲಿ ತಾರತಮ್ಯ : ಪ್ರತಿಭಟನೆ

0
50
loading...

ಶಿರಹಟ್ಟಿ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ತಾರತಮ್ಯವಾಗಿರುವದನ್ನು ಖಂಡಿಸಿ ಮಂಗಳವಾರ ಯಳವತ್ತಿ ಗ್ರಾಮಸ್ಥರು ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಫ್ ಎಸ್ ರಾಯನಗೌಡ್ರ ಹಾಗೂ ಕಂದಾಯ ನಿರೀಕ್ಷಕರಿಗೆ ಮನವಿ ಅರ್ಪಿಸಿದರು.

ಮನವಿಯಲ್ಲಿ ಪ್ರತಿ ವರ್ಷ ಬೆಳೆ ವಿಮೆ ಪಾವತಿಸುತ್ತಾ ಬಂದಿದ್ದು ಸನ್ 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿಯಲ್ಲಿ ತಮ್ಮ ಬೆಳೆ ವಿಮಾ ತುಂಬಿದ್ದು ಈಗ ಸದ್ಯ 2016-17 ನೇ ಸಾಲಿನ ಬೆಳೆ ವಿಮಾ ಹಣ ರೈತರ ಖತೆಗಳಿಗೆ ಜಮೆಯಾಗುತ್ತಿದ್ದು, ಯಳವತ್ತಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ವ್ಯಾಂಇನಲ್ಲಿ ನಮ್ಮ ಪಕ್ಕದ ಗ್ರಾಮಗಳಾದ ಯತ್ನಳ್ಳಿ,ಮಾಡಳ್ಳಿ ಗ್ರಾಮದ ರೈತರಿಗೆ ಬೆಳೆ ವಿಮೆ ಹನ ಶೇಖಡಾ 80 ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಪ್ರಮನದಲ್ಲಿ ಲುಕ್ಸಾನಾದ ರೈತರಿಗೆ ಬೆಳೆ ವಿಮಾ ದೊಡ್ಡ ಪ್ರಮನದಲ್ಲಿ ಜಮೆಯಾಗಿದೆ ಕನಿಷ್ಠ ಪ್ರಮಾಣ ಹೆಕ್ಟರಿಗೆ 15000 ರೂದಿಂದ 25000 ರೂ ವರೆಗೆ ಜಮೆಯಾಗಿದೆ, ಆದರೆ ಯಳವತ್ತಿ ಗ್ರಾಮದ ರೈತರಿಗೆ ಕೇವಲ 880, ರೂ ಹಾಗೂ ಃಆಘ 1475 ರೂ ಈ ತರಹದ ಪರಿಹಾರ ಬಂದಿದ್ದು. ನಮಗೆ ಹೊಂದಿಕೊಂಡತಹ ಗ್ರಾಮಗಳ ರೈತರ ಖಾತೆಗಳಿಗೆ ಜಮೆಯಾದ ದೊಡ್ಡ ಪ್ರಮಾನದ ವಿಮಾ ಮೊತ್ತ ನಮ್ಮ ಗ್ರಾಮದ ರೈತರಿಗೆ ಏಕೆ ಬಂದಿಲ್ಲಾ ಎಂದು ಪ್ರಶ್ನಿಸಿರುವ ಯಳವತ್ತಿ ಗ್ರಾಮದ ರೈತರು ಕಳೆದ 4 ವರ್ಷಗಳಿಂದ ರೈತರು ಬರಗಾಲದಿಂದ ಸಂಕಷ್ಟ ಅನುಭವಿಸಿದ್ದು, ಯಳವತ್ತಿ, ಯತ್ತಿನಹಳ್ಳಿ ಹಾಗೂ ಮಾಡಳ್ಳಿ ಗ್ರಾಮಗಳು ಒಂದಕ್ಕೊಂದು ಹೊಂದಿಕೊಂಡಿರುವುದು ಮತ್ತು ಕಪ್ಪು ಮಣ್ಣಿನಿಂದ ಕೂಡಿದ ಜಮಿನಗಳಾಗಿದ್ದು , ಮೂರು ಗ್ರಾಮಗಳಲ್ಲಿ ಮಳರಗಾಲ ಕಳೆದ 4 ವರ್ಷಗಳ ಕಾಲ ಮೂರು ಗ್ರಾಮಗಳಿಗೆ ಒಂದೇg ರೀತಿಯಾದ ಬರಗಾಲ ಆವರಿಸಿತ್ತು. ಆದರೆ ಯಳವತ್ತಿ ಗ್ರಾಮದ ರೈತರಿಗೆ ತಾರತಮ್ಯದಿಂದ ಅನ್ಯಾಯವಾಗಿದ್ದು ಬೆಳೆ ವಿಮಾದಲ್ಲಿ ಆದ ಲೊಪವನ್ನು ವಿಮಾ ಕಂಪನಿಯವರು 15 ದಿನಗೊಲಗಾಗಿ ಸರಿಪಡಿಸಬೇಕು ಎಂದು ತಿಳಿಸಿರುವ ರೈತರು ಇಲ್ಲದಿದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯುವದಾಗಿ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಕೃಷಿಕ ಸಮಾಜದ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಪಾಟೀಲ, ಶಿವಯ್ಯ ಮಠಪತಿ.ಶಾಂತಪ್ಪ ಬಳ್ಳಾರಿ, ಫಕ್ಕಿರಗೌಡ ಪಾಟೀಲ, ಬಸವರಾಜ ಗಿರಡ್ಡಿ, ಶಿದ್ಕಿಗಯ್ಯ ಹಿರೇಮಠ, ತಿಮ್ಮರೆಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಬಿ ಸಿ ಪಿಡ್ಡನಗೌಡ್ರ, ಕುಬೇರಪ್ಪ ಸಿಗ್ಲಿ,ಗುಂಡಪ್ಪಗೌಡ್ರ ಅಜ್ಜನಗೌಡ್ರ, ರಾಚನಗೌಡ್ರ ಅಜ್ಜನಗೌಡ್ರ, ಮತ್ತಿತರ ರೈತರು ಉಪಸ್ಥಿತರಿದ್ದರು.

loading...