ಫಿಪಾ ವಿಶ್ವಕಪ್: ಸೌದಿ ಸೋಲಿನಿಂದ ಪಾರು ಮಾಡಿ ದಾವಲ್ಸರಿ, ಅಂತಿಮ ಕ್ಷಣದಲ್ಲಿ ಬಂತು ಅದ್ಭುತ ಗೋಲ್

0
21
loading...

ರಷ್ಯಾ ಅರೆನಾ ಮೈದಾನ: ಫೀಪಾ ವಿಶ್ವಕಪನ ರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಗಿದೆ. ಸೋಮವಾರ ನಡೆದ ಈಜಿಪ್ಟ್ ಹಾಗೂ ಸೌದಿ ಅರೇಬಿಯಾ ತಂಡಗಳ ನಡುವಣ ಮಹತ್ವದ ಪಂದ್ಯದಲ್ಲಿ ದಲ್ಲಿ ಸೌದಿ ಪಂದ್ಯದ ಕೊನೆಗೊಳ್ಳವ ಕೊನೆ ಕ್ಷಣದಲ್ಲಿ ಎರಡನೇ ಗೋಲು ದಾಖಲಿಸುವ ಮೂಲಕ 2-1 ಗೋಲುಗಳ ಅದ್ಬುತ ಜಯವೊಂದನ್ನು ದಾಖಲಿಸಿದೆ.
ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಒಂದೊಂದು ಗೋಲು ದಾಖಲಿಸಿ ಸಮಬಲವನ್ನು ಸಾಧಿಸಿದ್ದ ಉಭಯ ತಂಡಗಳು ಎರಡನೇ ಗೋಲಿಗಾಗಿ ಉಭಯ ತಂಡಗಳ ರೋಚಕ ಕದನವನ್ನೇ ನಡೆಸಿದವು. ಆದರೆ ಕೊನೆ ಕ್ಷಣದಲ್ಲಿ ದಾವಸಾರಿ ದಾಖಲಿಸಿದ ಗೋಲು ಅರಬ್ಬರಿಗೆ ರೋಚಕ ಜಯ ತಂದಿಟ್ಟರು.
ಪಂದ್ಯದ ಪ್ರಾರಂಭದಲ್ಲಿ ಈಜಿಪ್ಟ್ ನ ಪ್ರಮುಖ ಆಟಗಾರ ಮೊಹಮದ್ ಸಲಾಹ್ (22ನೇ ನಿಮಿಷ) ಗೋಲು ಗಳಿಸಿ ತಂಡದ ವಿಜಯಕ್ಕೆ ಪ್ರಯತ್ನಿಸಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಸೌದಿ ಅರೇಬಿಯಾ ತಂಡ ಎರಡು ಗೋಲುಗಳನ್ನು ಗಳಿಸಿಕೊಳ್ಳುವ ಮೂಲಕ ವಿಜಯವನ್ನು ದಕ್ಕಿಸಿಕೊಂಡಿದೆ.
ಸೌದಿ ಅರೇಬಿಯಾದ ಪರವಾಗಿ ಸಲ್ಮಾನ್ ಅಲ್ ಫರಾಜ್ (51ನೇ ನಿಮಿಷ), ಸೇಲಂ ಅಲ್ ದಾವ್ಸಾರಿ (90+5ನೇ ನಿಮಿಷ) ಗೋಲು ಗಳಿಸಿದ್ದರು.
ಪಂದ್ಯದ 50ನೇ ಹಾಗೂ 86ನೇ ನೇ ನಿಮಿಷಗಳಲ್ಲಿ ಈಜಿಪ್ಟ್ ನ ಇಬ್ಬರು ಆಟಗಾರರಾದ ಆಲಿ ಗ್ಯಾಬ್ ಮತ್ತು ಅಹ್ಮದ್ ಫಾತಿ ಅವರ ವಿರುದ್ಧ ಹಳದಿ ಕಾರ್ಡ್ ಪ್ರದರ್ಶಿಸಲಾಗಿತ್ತು.

loading...