ಫಿಫಾ ಫುಟ್ಬಾಲ್ ವಿಶ್ವಕಪ್ ಗೆಲ್ಲಬೇಕೆಂಬ ಮೆಸ್ಸಿ ಕನಸು ಭಗ್ನ

0
17
loading...

ನಿಜ್ನೆ ಸವ್ಗೋರೊಡ್ -ಫಿಫಾ ಫುಟ್ಬಾಲ್ ವಿಶ್ವಕಪ್-2018 ಗೆಲ್ಲಬೇಕೆಂಬ ಹೆಬ್ಬಯಕೆ ಹೊಂದಿದ್ದ ಜಗದ್ವಿಖ್ಯಾತ ಆಟಗಾರ ಅರ್ಜೇಂಟಿನಾದ ಲಿಯೋನೆಲ್ ಮೆಸ್ಸಿ ಕನಸು ಭಗ್ನಗೊಂಡಿದೆ. ನಿನ್ನೆ ರಷ್ಯಾದ ನಿಜ್ನೆ ಸವ್ಗೋರೊಡ್‍ನಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಕ್ರೊವೇಷ್ಯಾ ವಿರುದ್ಧದ ಪಂದ್ಯದಲ್ಲಿ ಅರ್ಜೇಂಟಿನಾ 3-0 ಗೋಲುಗಳಿಂದ ಹೀನಾಯ ಸೋಲು ಕಂಡಿದೆ. ಫುಟ್ಬಾಲ್ ಜಗತ್ತಿನ ತಾರೆ ಮೆಸ್ಸಿ ಗೋಲು ಬಾರಿಸುವಲ್ಲಿ ವಿಫಲರಾಗಿ ಲಕ್ಷಾಂತರ ಜನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.

ಆಡಿರುವ ಎರಡು ಪಂದ್ಯಗಳಲ್ಲಿ ಅರ್ಜೇಂಟಿನಾ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದ್ದು, ಮತ್ತೊಂದರಲ್ಲಿ ಸೋಲು ಅನುಭವಿಸಿದೆ. ಇನ್ನೊಂದು ಪಂದ್ಯ ಬಾಕಿ ಇದ್ದು, ಮುಂದಿನ ಹಂತ ಪ್ರವೇಶಿಸುವುದು ಅನುಮಾನ ಎಂಬಂತ ಸ್ಥಿತಿಗೆ ಸಿಲುಕಿದೆ. ಮುಂದಿನ ಪಂದ್ಯದ ಫಲಿತಾಂಶ ಈ ತಂಡದ ಭವಿಷ್ಯವನ್ನು ನಿರ್ಧರಿಸಲಿದೆ.

ಕ್ರೊವೇಷ್ಯಾ ಜಯಭೇರಿ :ದ್ವಿತೀಯಾರ್ಧದಲ್ಲಿ ರೆಬಿಕ್, ಮೊಡ್ರಿಕ್ ಮತ್ತು ರಾಕ್ಟಿಕ್ ದಾಖಲಿಸಿದ ಮೂರು ಅದ್ಭುತ ಗೋಲುಗಳಿಂದ ಕ್ರೊವೇಷ್ಯಾ ಅರ್ಜೇಂಟಿನಾ ವಿರುದ್ಧ 3-0ರಲ್ಲಿ ಭರ್ಜರಿ ಜಯ ಸಾಧಿಸಿತು.  ಈ ಗೆಲುವಿನೊಂದಿಗೆ 6 ಅಂಕಗಳನ್ನು ಗಳಿಸಿದ ಕ್ರೊವೇಷ್ಯಾ 16ರ ಹಂತಕ್ಕೇರಿತು(ಪ್ರಿ ಕ್ವಾರ್ಟರ್). ಈ ಸೋಲಿನೊಂದಿಗೆ ಅರ್ಜೇಂಟಿನಾದ ನಾಕೌಟ್ ಹಾದಿ ಕಠಿಣವಾಗಿದೆ.

ಪಂದ್ಯದ ಆರಂಭದಲ್ಲಿ ಅರ್ಜೇಂಟಿನಾ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿ ಕ್ರೊವೇಷ್ಯಾ ತಂಡವನ್ನು ನಿಯಂತ್ರಿಸಲು ಹೆಣಗಿ ಸಾಕಷ್ಟು ಸಮಯ ವ್ಯರ್ಥ ಮಾಡಿದರು. ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ ಗೋಲುಪೆಟ್ಟಿಗೆ ಬಳಿ ಚೆಂಡನ್ನು ಒಯ್ದರೂ ಗೋಲು ಗಳಿಸಲು ಅಸಾಧ್ಯವಾಯಿತು.  ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾ ಆಟಗಾರರು ಬಿರುಸಿನ ಆಟ ಪ್ರದರ್ಶಿಸಿದರು. ಆದರೆ, ಕ್ರೊವೇಷ್ಯಾ ತಂಡದ ರಕ್ಷಣಾ ಗೋಡೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಇದೇ ಸಂದರ್ಭದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕ್ರೊವೇಷ್ಯಾದ ರೆಬಿಕ್, ಮೊಡ್ರಿಕ್ ಮತ್ತು ರಾಕ್ಟಿಕ್ ಕ್ರಮವಾಗಿ 53, 80 ಮತ್ತು 91ನೇ ನಿಮಿಷದಲ್ಲಿ ದಾಖಲಿಸಿದ ಮೂರು ಅದ್ಭುತ ಗೋಲುಗಳಿಂದ ಕ್ರೊವೇಷ್ಯಾ ಅರ್ಜೇಂಟಿನಾ ವಿರುದ್ಧ 3-0ರಲ್ಲಿ ಭರ್ಜರಿ ಜಯ ಸಾಧಿಸಿತು.  ವಿಶ್ವಕಪ್ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಅರ್ಜೇಂಟಿನಾದ ಲಿಯೋನೆಲ್ ಮೆಸ್ಸಿ ಕನಸು ನೂಚ್ಚುನೂರಾಗಿದ್ದು, ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

loading...