ಫೀಪಾ ವಿಶ್ವಕಪ್: ಗೆಲುವಿನ ಖಾತೆ ತೆರದ ಪ್ರಾನ್ಸ್

0
35
loading...

ಕಜಾನ್: ಫೀಪಾ ವಿಶ್ವಕಪ್ನ ಸಿ ಗುಂಪಿನ ಶನಿವಾರದ ನಡೆದ ಮೊದಲ ಪಂದ್ಯದಲ್ಲಿ ಪ್ರಾನ್ಸ್ ತಂಡ ಆಸ್ಟ್ರೇಲಿಯಾ ವಿರುದ್ಧ 2-1 ಗೋಲುಗಳಿಂದ ಗೆಲುವಿನ ಖಾತೆ ತೆರೆದಿದೆ.
ತೀವ್ರ ಹಣಾಹಣಿಯಿಂದ ಕೂಡಿದ ಈ ಪಂದ್ಯದಲ್ಲಿ ಸಾಕಷ್ಟು ರೋಚಕತೆ ಮೈದಾ‌ದಲ್ಲಿ ಕಂಡು ಬಂತು ಪಂದ್ಯದ ಆರಂಭದಿಂದಲ್ಲೆ ಆಸೀಸ್ ಪ್ರಾನ್ಸ್ ತಂಡಕ್ಕೆ ಪ್ರಬಲ ಪೈಪೋಟಿ ಯನ್ನೆ ನೀಡಿತು. ಆದರೆ ಪ್ರಾನ್ಸ್ ಪರ 58 ನಿಮಿಷದಲ್ಲಿ ಆ್ಯಂಟೊನಿ ಗ್ರಿಜಮನ್ ಬಾರಿಸಿದ ಗೋಲು ತಂಡಕ್ಕೆ ಮುನ್ನಡೆಯನ್ನು ನೀಡಿತು. ಇದಾದ ಬಳಿಕ ಆಸಿಸ್ ಪರ ಜೆಡಿನಾಕ್ 62 ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಲೆಕ್ಕಾಚಾರ ಸಮವಾಗಿಸಿದರು. ಇನ್ನೆನು ಪಂದ್ಯ ಮುಗಿಯುವ ಕೆಲವೆ ನಿಮಿಷಗಳು ಬಾಕಿ ಇರುವಾಗ 81 ನಿಮಿಷದಲ್ಲಿ ಪಾಲ್ ಪೊಗ್ಬಾ ದಾಖಲಿಸಿದ ಗೋಲು ಪ್ರಾನ್ಸ್ ಗೆ ಗೆಲುವಿನ ಆಸೆ ಚಿಗುರಿಸಿತು. ನಂತರ ಸಮಯವನ್ನು ಪ್ರಾನ್ಸ ಪಾಸ್ ಗಳ ಮೂಲಕ ಸಮಯ ವ್ಯರ್ಥ ಮಾಡಿ ಆಸೀಸ್ಗೆ ಸೋಲುಣ್ಣಿಸಿ ಫೀಪಾ ವಿಶ್ವಕಪ್ನಲ್ಲಿ ಗೆಲುವಿನ ಖಾತೆ ತರೆದಿದೆ. ಗ್ರಿಜಮನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆ ಭಾಜನರಾದರು.

loading...