ಫೀಪಾ ವಿಶ್ವಕಪ್: ಭಾರತದಲ್ಲಿ ಹೆಚ್ಚು ವಿಕ್ಷಣೆ ಮಾಡಿದ ಪಂದ್ಯಗಳಿವು

0
26
loading...

ನವದೆಹಲಿ: ಭಾರತದಲ್ಲಿ ಕ್ರಿಕೆಟ್ಗೆ ನೀಡುವ ಪ್ರಾತಿನಿಧ್ಯ ಬೇರೆ ಕ್ರೀಡೆಗೆ ನೀಡುವುದು ಡೌಟ್ ಅಂತಾ ಅಂದುಕೊಂಡಿದರೆ ಊಹೆ ತಪ್ಪು ಏಕೆಂದರೆ ಈಗ ವಿಶ್ವದೆಲ್ಲೆಡೆ ಫೀಪಾ ಜ್ವರ ಜೋರಾಗಿದೆ.
ಅದಕ್ಕೆ ಭಾರತವೂ ಹೊರತಾಗಿಲ್ಲ. ದೇಶದಲ್ಲಿ ಕಾಲ್ಚೆಂಡಿನ
ಆಟಕ್ಕೆ ಅಷ್ಟೊಂದು ಪ್ರೇಕ್ಷಕರಿಲ್ಲ. ಕ್ರಿಕೆಟ್​ಗೆ ಹೋಲಿಸಿದರೆ ಅದರ ಪ್ರಮಾಣ ಭಾರಿ ಕಡಿಮೆ.. ಆದರೆ, ಈ ಬಾರಿ ಭಾರತದಲ್ಲಿ ಕ್ರಮೇಣ ಫುಟ್ಬಾಲ್​ ಫೀವರ್​ ವ್ಯಾಪಿಸುತ್ತಿದೆ.
ಎರಡು ದಿನದ ನಾಲ್ಕು ಮ್ಯಾಚ್​ಗಳನ್ನು ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ವೀಕ್ಷಣೆ ಮಾಡಲಾಗಿದೆಯಂತೆ. ನಿಮಿಷಕ್ಕೆ ಸುಮಾರು 4.7 ಕೋಟಿ ಅಭಿಮಾನಿಗಳು ಕಾಲ್ಚೆಂಡಿನ ಕರಾಮತ್ತನ್ನು ವೀಕ್ಷಣೆ ಮಾಡಿದ್ದಾರೆ ಎಂದು ಟಿಆರ್​ಪಿ ಅಳೆಯುವ ಸಂಸ್ಥೆ ಬಾರ್ಕ್​ ಹೇಳಿಕೊಂಡಿದೆ.
ಸಂಖ್ಯೆ ಒಮ್ಮೊಮ್ಮೆ 11.7 ಕೋಟಿಗೂ ತಲುಪಿದೆ ಎಂಬ ಅಂಶವನ್ನು ಬಾರ್ಕ್​ ಬಹಿರಂಗ ಪಡಿಸಿದೆ. ಫಿಫಾ ವರ್ಲ್ಡ್​ ಕಪ್​ ಮಹಾ ಸಮರದ ಒಟ್ಟು 26 ರೋಚಕ ಪಂದ್ಯಗಳ ನೋಡುಗರ ಮಾಹಿತಿ ಬಹಿರಂಗ ಪಡಿಸಿರುವ ಬಾರ್ಕ್​, ದಿನವೊಂದಕ್ಕೆ ಸುಮಾರು 9.9 ಕೋಟಿ ಮಂದಿ ಟಿವಿ ಮೂಲಕ ಪಂದ್ಯಗಳನ್ನು ವೀಕ್ಷಿಸಿತ್ತಿದ್ದಾರೆ ಎಂಬ ಮಾಹಿತಿ ನೀಡಿದೆ. ಬರೀ ಟಿವಿ ಮೂಲಕ ಅಷ್ಟೇ ಅಲ್ಲ, ಆನ್​ಲೈನ್​ನಲ್ಲೂ ಸುಮಾರು 1.8 ಕೋಟಿ ಮಂದಿ ಫುಟ್ಬಾಲ್​ ಪಂದ್ಯಗಳನ್ನು ವೀಕ್ಷಣೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದೆ.

ಜರ್ಮನಿ- ಮೆಕ್ಸಿಕೋ ಪಂದ್ಯ: ಭಾರೀ ವೀಕ್ಷಣೆ
ಕಳೆದ ಬಾರಿ ಚಾಂಪಿಯನ್​ ಜರ್ಮನಿ ಹಾಗೂ ಮೆಕ್ಸಿಕೊ ನಡುವೆ ನಡೆದ ಪಂದ್ಯವನ್ನು ಭಾರತದಲ್ಲಿ ಸುಮಾರು 70 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ಬಾರ್ಕ್​ ಹೇಳಿದೆ.

ಯಾವ ರಾಜ್ಯದಲ್ಲಿ ಹೆಚ್ಚು ವೀಕ್ಷಣೆ
ಎಂದಿನಂತೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಜನ ಫುಟ್ಬಾಲ್​ ಪಂದ್ಯಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಇನ್ನು ಕೇರಳ, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಫುಟ್ಬಾಲ್​ ಅಭಿಮಾನಿಗಳಿದ್ದಾರೆ. ಉಳಿದಂತೆ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ.

loading...