ಬಡ ಕುಟುಂಬಗಳಿಗೆ ಆಶ್ರಯ ಮನೆ ಕಲ್ಪಿಸಲಾಗುವುದು: ಶಾಸಕ ಪಾಟೀಲ

0
17
loading...

ಕನ್ನಡಮ್ಮ ಸುದ್ದಿ-ನಾಲತವಾಡ: ಬಡ ಹಾಗೂ ನಿರ್ಗತಿಕರ ಕುಟುಂಬಗಳಿಗೆ ಮೊದಲು ಆಶ್ರಯ ಮನೆಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣ ಪಂಚಾಯತನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ನಾಲತವಾಡ ಪಟ್ಟಣದಲ್ಲಿ ಬಹುತೇಕ ಬಡ ಕುಟುಂಬಗಳು ವಾಸಿಸುತಿದ್ದು ಅವರಿಗೆ ವಾಸಿಸಲು ಸೂರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮೊದಲು ಆಶ್ರಯ ಮನೆಗಳ ಆಧ್ಯತೆ ಅವರಿಗೆ ನೀಡಬೇಕು, ನಾನು ಚುನಾವಣೆಯಲ್ಲಿ ಸಾಕಷ್ಟು ಮನೆಗಳಿಗೆ ಭೇಟಿ ನೀಡಿದ್ದೇನೆ ಬಹುತೇಕರು ಇನ್ನು ತಗಡಿನ ಶೆಡ್‌ ಹಾಗೂ ಜಂತಿ ಮನೆಯಲ್ಲೆ ವಾಸ ಮಾಡುತಿದ್ದಾರೆ ಅಂತಹವರನ್ನು ನೀವು ಆಯ್ಕೆ ಮಾಡಿ ಎಂದರು. ಇನ್ನು ಪಟ್ಟಣದಲ್ಲಿ ಸಾಕಷ್ಟು ನೀರಿನ ಸಮಸ್ಯ ಕೇಳಿ ಬರುತಿದ್ದು ಜನರು ಕುಡಿಯುವ ನೀರಿಗೆ ಪರುದಾಡುತಿದ್ದಾರೆ ಎಂದು ಕೇಳಿಬರುತಿದ್ದೇ 15 ದಿನಕೊಮ್ಮ ನೀರು ಬರುತ್ತಿದೆ ಎಂದು ಜನರು ಆರೋಪಿಸುತಿದ್ದಾರೆ ಮೊದಲು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಕನಿಷ್ಠ ಪಕ್ಷ ಅವರಿಗೆ 4 ದಿನಕೊಮ್ಮೆಯಾದರು ನೀರು ಪೂರೈಸುವ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ 24 ಗಂಟೆಯು ನೀರಿನ ವ್ಯವಸ್ಥೆ ಕಲ್ಪಿಸುವ ಹಾಗೆ ಮಾಡಲಾಗುವುದು, ಇನ್ನು ಪಟ್ಟಣದಲ್ಲಿ ಸಾಕಷ್ಟು ಗಲೀಜು ಇದ್ದು ಅದನ್ನು ಸ್ವಚ್ಚತೆ ಕೂಡಲೆ ಕ್ರಮ ಜರುಗಿಸಬೇಕು, ಪ್ರತಿ ಒಬ್ಬ ವಾರ್ಡಗೆ ಒಬ್ಬ ಸಿಬ್ಬಂದಿಯನ್ನು ನೇಮಿಸಿ ಆ ವಾರ್ಡಿನ ಸ್ವಚ್ಚತೆ ಜವಾಬ್ದಾರಿ ನೀಡಿ ಸ್ವಚ್ಚತೆಯನ್ನು ಮಾಡಿಸಿ ಎಂದರು. ಮುಖ್ಯಾಧಿಕಾರಿ ವಿರುದ್ದ ಸದಸ್ಯರ ಆಕ್ರೋಶ: ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಅವರು ತಮಗೆ ತೋಚಿದಂತೆ ಕ್ರಿಯಾ ಯೋಜನೆ ನಡೆಸುತಿದ್ದಾರೆ ವಾರ್ಡಿನ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುತಿಲ್ಲ ಮತ್ತು ವಾರ್ಡಿನ ಸಮಸ್ಯಯನ್ನು ಹೇಳಿದರು ಅದಕ್ಕೆ ಯಾವದೇ ಪ್ರತಿಕ್ರಿಯೇ ನೀಡದೆ ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸುತಿಲ್ಲ ಎಂದು ಶಾಸಕರ ಎದುರು ಮುಖ್ಯಾಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನೀವು ಒಬ್ಬ ಅಧಿಕಾರಿಯಾಗಿ ಎಲ್ಲ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಹೋಗಬೇಕು ಆಯಾ ವಾರ್ಡಿ ಸದಸ್ಯರನ್ನು ಅವರ ವಾರ್ಡಿನ ಕ್ರೀಯಾಯೋಜನೆಯಾಲಿ ಅಥವಾ ಯಾವದೇ ಸಮಸ್ಯೆಯಾಗಲಿ ಅದನ್ನು ಕೂಡಲೆ ಬಗೆಹರಿಸಬೇಕು, ಮತ್ತು ಸಾರ್ವಜನಿಕರ ಸಮಸ್ಯಯನ್ನು ನೀವು ಪಟ್ಟಿ ಮಾಡಿ ಅದನ್ನು ಕೂಡಲೆ ಬಗೆಹರಿಸುವ ಕೆಲಸ ಮಾಡಬೇಕು, ಸದಸ್ಯರು ಅಥವಾ ಸಾರ್ವಜನಿಕರು ತಮ್ಮ ಸಮಸ್ಯಯನ್ನು ಲಿಖಿತವಾಗಿ ಮುಖ್ಯಾಧಿಕಾರಿಗಳಿಗೆ ಅರ್ಜಿ ನೀಡಿ ಅದರ ಒಂದು ಪ್ರತಿಯನ್ನು ನನಗೆ ಹಾಕಿ ಅವರು ಆ ಕೆಲಸ ಮಾಡದಿದ್ದರೆ ನಾನು ಮುಖ್ಯಾಧಿಕಾರಿ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಾಧಿಕಾರಿಗಳಿಗೆ ಶಾಸಕರು ಎಚ್ಚರಿಸಿದರು. ಸನ್ಮಾನ: ಸಾಮಾನ್ಯ ಸಭೆಗೆ ಮೊದಲು ಬಾರಿಗೆ ಆಗಮಿಸಿದ್ದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿಗೆ ಪಟ್ಟಣ ಪಂಚಾಯತ ವತಿಯಿಂದ ಅಧ್ಯಕ್ಷರಾದ ಪೃಥ್ವಿರಾಜ ನಾಡಗೌಡ ಸನ್ಮಾನಿಸಿದರು.
ಸಾರ್ವಜಿಕರು ಅಹವಾಲು ಸ್ವಿಕಾರ: ಶಾಸಕರು ಪಟ್ಟಣ ಪಂಚಾಯತಿಗೆ ಆಗಮಿಸುತ್ತಿದಂತೆ ಸಾರ್ವಜನಿಕರ ದಂಡೆ ಪಟ್ಟಣ ಪಂಚಾಯತಿಗೆ ದೌಡಾಯಿಸಿ ತಮ್ಮ ಸಮಸ್ಯಗಳನ್ನು ಶಾಸಕರಿಗೆ ಮನವರಿಗೆ ಮಾಡಿಕೊಂಡರು ಒಂದನೆ ವಾರ್ಡಿನಲ್ಲಿ ಕುಡಿಯುವ ನೀರಿನ ವಿಪರೀತ ಸಮಸ್ಯಯಿದ್ದು 15 ದಿನಕೊಮ್ಮೆ ಕುಡಿಯಲು ನೀರು ಪೂರೈಸುತಿದ್ದಾರೆ, ಮುಖ್ಯಾಧಿಕಾರಿ ಸಾರ್ವಜನಿಕರು ಸಮಸ್ಯಯನ್ನು ಸರಿಯಾಗಿ ಆಲಿಸುವದಿಲ್ಲ ಎಂದು ಒಂದನೇ ವಾರ್ಡಿನ ಮಹಿಳೇಯರು ಶಾಸಕರ ಎದುರು ತಮ್ಮ ಸಮಸ್ಯಯನ್ನು ದೂರಿದರು ಇನ್ನು ಬಹುತೇಕ ಬಡ ಜನರು ನಮಗೆ ಸೂರಿನ ವ್ಯಸಸ್ಥೆಯನ್ನು ಕಲ್ಪಿಸಿ ನಾವು ಪುಟಪಾತಗಳಲ್ಲಿ ವಾಸಿಸುತ್ತಿದ್ದೇವೆ ಎಂದು ಅರ್ಜಿ ನೀಡಿದರು, ಪಟ್ಟಣ ಪಂಚಾಯತ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ನೀಡುತಿಲ್ಲ ಹೀಗಾದರೆ ನಮ್ಮ ಕುಟುಂಬದ ನಿರ್ವಹಣೆ ಬಹಳ ಕಷ್ಟವಾಗುತ್ತಿದೆ ಸರಿಯಾದ ಸಮಯಕ್ಕೆ ನಮಗೆ ಸಂಬಳ ಬರುವ ಹಾಗೆ ವ್ಯವಸ್ಥೆಯನ್ನು ಮಾಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಿದರು. ನಿಮ್ಮ ಎಲ್ಲ ಸಮಸ್ಯಗಳನ್ನು ಕೂಡಲೆ ಬಗೆಹರಿಸುವ, ಆಶ್ರಯ ಮನೆಗಳನ್ನು ನಾನು ಬಡ ಕುಟುಂಬಗಳಿಗೆ ಮೊದಲು ಆಧ್ಯತೆ ನೀಡುತ್ತೇನೆ ಎಂದು ಸಾರ್ವ ಜನಿಕರಿಗೆ ಭರವಸೆ ನೀಡಿದರು. ಈ ವೇಳೆ ಪಟ್ಟಣ ಪಂಚಾಯತ ಅಧ್ಯಕ್ಷ ಪೃಥ್ವಿರಾಜ ನಾಡಗೌಡ, ಉಪಾಧ್ಯಕ್ಷ ವೀರೇಶ ಚಲವಾದಿ, ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ, ಸದಸ್ಯರಾದ ಶಿವಶೇಖರಯ್ಯ ಹಿರೇಮಠ, ದಸ್ತಗೀರಸಾಬ ಆರೇಶಂಕರ, ಮೈಬುಬ ಬಾಗವಾನ, ಕಾಶೀಮಸಾಬ ಚಿಲಮಕೋರ, ಭೀಮಣ್ಣ ಗುರಿಕಾರ, ಲತಾ ಕಟ್ಟಿಮನಿ, ಸುಮಾ ಗಂಗನಗೌಡರ, ಭೀಮವ್ವ ಕ್ಷೇತ್ರಿ, ಗಡ್ಡಿ ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...