ಬಯ್ಯಾಪುರಗೆ ಸಚಿವ ಸ್ಥಾನ ನಿರಾಕರಣೆ: ಕಾರ್ಯಕರ್ತರ ಪ್ರತಿಭಟನೆ

0
11
loading...

ಕುಷ್ಟಗಿ: ಕುಷ್ಟಗಿ ಕ್ಷೇತ್ರದ ಪ್ರಸ್ತುತ ಶಾಸಕರಾಗಿ 5ನೇ ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಹಿರಿಯ, ಸರಳ ಸಜ್ಜನಿಕೆಯ ವ್ಯಕ್ತಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ರೇಣುಕಾಚಾರ್ಯ ಕಲ್ಯಾಣ ಮಂಟಪದಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡುತ್ತ ಕೆಲಕಾಲ ರಸ್ತೆ ಬಂದ್ ಮಾಡಿ ವಾಹನಗಳನ್ನು ಪಡೆದು ಪ್ರತಿಭಟನೆಮಾಡಿದರು.
ಈ ಸಂದರ್ಭದಲ್ಲಿ ಫಕೀರಪ್ಪ ಚಳಗೇರಿ ವಕೀಲರು, ಮತ್ತು ಶೇಖರಗೌಡ ಮಾಲಿ ಪಾಟೀಲ, ಮಾಲತಿ ನಾಯಕ, ದೇವೇಂದ್ರಪ್ಪ ಬಳೂಟಗಿ ಅವರು ಮಾತನಾಡುತ್ತ, ಸ್ವತಂತ್ರ್ಯ ನಂತರ ಕುಷ್ಟಗಿ ಮತಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಕುಷ್ಟಗಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯದಿದ್ದಕ್ಕೆ ಅಸಮಾಧಾನವಾಗಿದೆ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಭಿವೃದ್ಧಿಪರ ಆಡಳಿತವನ್ನು ಅವರ ಹಿರಿತನವನ್ನು ಗುರ್ತಿಸಿ ಮುಂದಿನ ದಿನಮಾನದಲ್ಲಿ ಸಚಿವ ಸ್ಥಾನ ನೀಡಲೇಬೇಕು.

ಹಿಂದುಳಿದ ಪ್ರದೇಶವಾದ ಕುಷ್ಟಗಿ ಕ್ಷೇತ್ರವನ್ನು ಪ್ರತಿ ಬಾರಿ ಕಡೆಗಣಿಸುತ್ತಿರುವದು ಅನ್ಯಾಯ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಸಹಿಸುವುದಿಲ್ಲ. ಇನ್ನುಳಿದ ಸ್ಥಾನಗಳಲ್ಲಿಯಾದರು ಸಚಿವ ಸ್ಥಾನ ನೀಡಬೇಕು ಇಲ್ಲವಾದರೆ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವದು. ಹೈದ್ರಾಬಾದ ಕರ್ನಾಟಕದಲ್ಲಿ ಅತಿ ಹಿಂದುಳಿದ ತಾಲೂಕು ನಮ್ಮ ಕುಷ್ಟಗಿ ಕ್ಷೇತ್ರ ಒಮ್ಮೆಯಾದರೂ ಸಚಿವ ಸ್ಥಾನ ನೀಡದಿದ್ದರೆ ಕ್ಷೇತ್ರ ಅಭಿವೃದ್ಧಿಯಾಗುವದಾದರು ಹೇಗೆ. ನಮಗಾದ ಅನ್ಯಾಯವನ್ನು ಸರಿಪಡಿಸಿ ನಮ್ಮ ನಾಯಕರಾದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರಿಗೆ ಸಚಿವ ಸ್ಥಾನವನ್ನು ನೀಡಲೇ ಬೇಕು ಎಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯರುಗಳಾದ ಭೀಮಪ್ಪ ತಲೆಖಾನ, ಯಂಕಪ್ಪ ಚವ್ಹಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಲಾಡ್ಲೆ ಮಷಾಕ್, ಚಂದಪ್ಪ ತಳವಾರ, ಭಾರತಿ ನೀರಗೇರಿ, ಪರುಶುರಾಮ ನಾಗರಾಳ, ರಜಾಕ್ ಸುಳ್ಳದ್, ಇಮಾಮ್‍ಸಾಬ ಗರಡಿಮನಿ, ಮಹಾಂತೇಶ್ ಅಗಸಿಮುಂದಿನ್, ಯವ್.ಎ. ಪೂಜಾರ ವಕೀಲರು, ಪರುಶುರಾಮ ನಾಗರಾಳ, ಉಮೇಶ್ ಮಂಗಳೂರ, ಮಾಲತಿ ನಾಯಕ, ಶಕುಂತಲಾ ಹಿರೇಮಠ, ಹೆಚ್.ವಾಯ್. ಈಟೀಯವರ್, ಕಿಶೋರಸ್ವಾಮಿ ಹಿರೇಮಠ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

loading...